19ಕ್ಕೆ ರಾಷ್ಟ್ರೀಯ ಲೋಕ ಅದಾಲತ್

KannadaprabhaNewsNetwork |  
Published : Sep 08, 2026, 02:00 AM IST
ಚಿತ್ರ 2 | Kannada Prabha

ಸಾರಾಂಶ

National Lok Adalat on the 19th

(1 ಫೋಟೋ ಸಾಕು)

ಕನ್ನಡಪ್ರಭ ವಾರ್ತೆ ಹಿರಿಯೂರು

ಸೆ.19 ರಾಜ್ಯಾದ್ಯಂತ ರಾಷ್ಟ್ರೀಯ ಲೋಕ-ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಹಿರಿಯೂರಿನಲ್ಲಿಯೂ ರಾಷ್ಟ್ರೀಯ ಲೋಕ-ಅದಾಲತ್ ಆಯೋಜಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾ. ಸುಜಾತಾ ಸುವರ್ಣ ಹೇಳಿದರು.

ನಗರದ ನ್ಯಾಯಾಲಯದ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಲೋಕ ಅದಾಲತ್‌ ನಲ್ಲಿ ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣ ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಇಚ್ಛಿಸಿದಲ್ಲಿ ಮುಂಚಿತವಾಗಿ ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿಗಳಿಗೆ ಆನ್ ಲೈನ್, ವೀಡಿಯೋ ಕಾನ್ಫರೆನ್ಸ್, ಮೇಲ್ ಮುಖಾಂತರ ಇಲ್ಲವೇ ಖುದ್ದಾಗಿ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು.

ಪ್ರತಿದಿನ ಹಿರಿಯೂರಿನ ಎಲ್ಲಾ ನ್ಯಾಯಾಲಯಗಳಲ್ಲಿ ಲೋಕ-ಅದಾಲತ್‌ಗೆ ಸಂಬಂಧಿಸಿದಂತೆ ಪೂರ್ವಭಾವಿ ಬೈಠಕ್, ಪೀಠಗಳು ನಡೆಯುತ್ತಲಿವೆ. ನೀರಿನ ಬಿಲ್ ಪಾವತಿ, ಟೆಲಿಪೋನ್ ಬಿಲ್, ವಿದ್ಯುತ್ ಬಿಲ್‌ ಹಾಗೂ ಸಣ್ಣಪುಟ್ಟ ಬ್ಯಾಂಕ್ ಸಾಲ ವಸೂಲಾತಿಗಾಗಿ ಹಾಗೂ ನ್ಯಾಯಾಲಯದಲ್ಲಿ ಬಾಕಿ ಇರುವ ಸಿವಿಲ್ ವ್ಯಾಜ್ಯ ಮತ್ತು ಚೆಕ್ ಬೌನ್ಸ್ ಪ್ರಕರಣಗಳನ್ನು ರಾಜಿ ಮುಖಾಂತರ ಪರಿಹರಿಸಿಕೊಳ್ಳಲು ವಿಶೇಷ ಪೀಠ ನಡೆಯುತ್ತಲಿವೆ.

ತಾಲೂಕಿನಲ್ಲಿ 6928 ಪ್ರಕರಣಗಳಲ್ಲಿ ರಾಜಿಗಾಗಿ ಎಂವಿಸಿ ಪ್ರಕರಣಗಳು, ಎಂಎಂಆರ್.ಡಿ ಪ್ರಕರಣಗಳು, ಎಲ್.ಎಸಿ ಪ್ರಕರಣಗಳು, ವಿಭಾಗದ ದಾವೆ ಪ್ರಕರಣಗಳು ಸೇರಿದಂತೆ ಇನ್ನಿತರ 859 ಪ್ರಕರಣಗಳನ್ನು ಲೋಕ ಅದಾಲತ್ ಗೆ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ತೆಗೆದುಕೊಳ್ಳಲಾಗಿದೆ ಎಂದರು.

ಪ್ರಧಾನ ಸಿವಿಲ್ ನ್ಯಾಯಾಧೀಶೆ ಪಾರ್ವತಮ್ಮ ಮಾತನಾಡಿ, ಸಣ್ಣಪುಟ್ಟ ಜಗಳ, ಮನಸ್ತಾಪಗಳಿಂದ ಆದ ಪ್ರಕರಣಗಳಿಗೆ ರಾಜಿ ಆಗಲು ಇದು ಸದವಕಾಶವಾಗಿದೆ. ಚೆಕ್ ಬೌನ್ಸ್ ಕೇಸ್ ಗಳು ಬಹಳಷ್ಟಿವೆ. ಬ್ಯಾoಕ್ ಲೋನ್ ಕೇಸ್ ಗಳ ಬಗ್ಗೆ ಎಲ್ಲಾ ಮ್ಯಾನೇಜರ್ ಬಳಿ ಮಾತನಾಡಲಾಗಿದೆ.

ಅವುಗಳನ್ನು ಪರಿಹರಿಸಲು ಲೋಕ ಅದಾಲತ್ ನಲ್ಲಿ ಅವಕಾಶವಿದೆ. ಸೆ.19 ರಂದು ಮಧ್ಯಾಹ್ನ 2 ರಿಂದ 5.30 ರವರೆಗೆ ಲೋಕ ಅದಾಲತ್ ನಡೆಯಲಿದ್ದು, ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದು ಎಂದರು.

ಈ ಸಂದರ್ಭದಲ್ಲಿ ಅಪರ ಸಿವಿಲ್ ನ್ಯಾಯಾಧೀಶರಾದ ಎಂ ರಘು ಹಾಜರಿದ್ದರು.

ಫೋಟೊ

ನಗರದ ನ್ಯಾಯಾಲಯದ ಆವರಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನ ಬಗ್ಗೆ ನ್ಯಾಯಾಧೀಶರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಮೆರಿಕನ್ನಡಿಗರ ಮಹೋತ್ಸವಕ್ಕೆ ಭಾವಪೂರ್ಣ ಮಂಗಳ
ಮರುಳಸಿದ್ದೇಶ್ವರ ಸನ್ನಿಧಿಯಲ್ಲಿ ಸಚಿವ ಬಸವಂತಪ್ಪ