ನಿಸರ್ಗ ಆರಾಧನೆಯೇ ಬಂಜಾರ ಸಮಾಜದ ತೀಜ ಹಬ್ಬ

KannadaprabhaNewsNetwork |  
Published : Apr 01, 2026, 02:00 AM IST
ಕಲಘಟಗಿ ತಾಲೂಕಿನ ನೆಲ್ಲಿಹರವಿ ತಾಂಡಾದಲ್ಲಿ ಬಂಜಾರ ಸಮಾಜ ಬಾಂಧವರು ತೀಜ ಹಬ್ಬ ಆಚರಿಸಿದರು. | Kannada Prabha

ಸಾರಾಂಶ

ಬಂಜಾರ ಸಮುದಾಯ ಪೂರ್ವದಿಂದಲೂ ಕಾಡಿನಲ್ಲಿ ವಾಸಿಸುತ್ತಿದ್ದ ಜನಾಂಗ. ಪ್ರಕೃತಿ ಪ್ರೀಯ ಹಾಗೂ ಗೋವುಗಳ ಪಾಲಕರಾಗಿದ್ದವರು. ಪ್ರಕೃತಿ ಉಳಿದರೆ ಮಾತ್ರ ಮಾನವ ಜನಾಂಗದ ಉಳಿವು ಎನ್ನುವ ಅರ್ಥ ಕೂಡುವ ಹಬ್ಬವೇ ಈ ತೀಜ ಹಬ್ಬವಾಗಿದೆ.

ಕಲಘಟಗಿ:

ಪ್ರತಿ ಸಮಾಜವು ಒಂದೊಂದು ಆಚರಣೆಗೆ ಪ್ರಾಮುಖ್ಯತೆ ನೀಡಿದರೆ ಬಂಜಾರ ಸಮಾಜವು ನಿಸರ್ಗದ ಆರಾಧನೆಯ ಕುರಿತು ಆಚರಿಸುವ ಹಬ್ಬವೇ ತೀಜ ಹಬ್ಬ(ಗೌರಿಹಬ್ಬ) ಎಂದು ಬಂಜಾರ ಸಮಾಜದ ಸರದಾರ ಸೇವಾಲಾಲ್‌ ಸ್ವಾಮೀಜಿ ಹೇಳಿದರು.

ತಾಲೂಕಿನ ನೆಲ್ಲಿಹರವಿ ತಾಂಡಾದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಜರುಗುವ ತೀಜ ಹಬ್ಬದ ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು.

ನಮ್ಮದು ಪೂರ್ವದಿಂದಲೂ ಕಾಡಿನಲ್ಲಿ ವಾಸಿಸುತ್ತಿದ್ದ ಜನಾಂಗ. ಪ್ರಕೃತಿ ಪ್ರೀಯ ಹಾಗೂ ಗೋವುಗಳ ಪಾಲಕರಾಗಿದ್ದವರು. ಪ್ರಕೃತಿ ಉಳಿದರೆ ಮಾತ್ರ ಮಾನವ ಜನಾಂಗದ ಉಳಿವು ಎನ್ನುವ ಅರ್ಥ ಕೂಡುವ ಹಬ್ಬವೇ ಈ ತೀಜ ಹಬ್ಬವಾಗಿದೆ. ಹಬ್ಬದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಅವಿವಾಹಿತ ಯುವತಿಯರು ಉತ್ತಮ ಸಂಬಂಧ ದೊರಕಲೆಂದು ಪೂಜೆ ಗೈಯುತ್ತಾರೆ. ನಾಡಿಗೆ ಉತ್ತಮ ಮಳೆ, ಬೆಳೆ ಸಮೃದ್ಧಿಯಾಗಲೆಂದು ಬೇಡಿಕೊಳ್ಳೂತ್ತಾರೆ ಎಂದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅನುಷಾ ಹಿರೇಮಠ, ಹರಿಶಂಕರ ಮಠದ, ಬಾಳು ಖಾನಾಪೂರ, ವಸಂತ ನಾಯಕ್, ಸುರೇಶ ಕಾರಬಾರಿ, ವಾಸು ಲಮಾಣಿ, ಪಾಂಡರಂಗ ಪಮ್ಮಾರ, ಬಾಲು ಚವ್ಹಾಣ, ಮೋತಿಲಾಲ್ ರಾಠೋಡ, ಶಿವಪ್ಪ ಲಮಾಣಿ, ಜಮುಲಪ್ಪ ಲಮಾಣಿ, ತಿಪ್ಪಣ್ಣ ಲಮಾಣಿ ಸೇರಿ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ತೊಳಲಾಟ-ಅಪವಾದಗಳೇ ಅಕ್ಷರ ತಾಳಿವೆ
ಮಹಿಳಾ ಕಾದಂಬರಿ ಅಸಮಾನತೆ ಪ್ರಶ್ನಿಸುವ ಅಸ್ತ್ರ