ನವಲಗುಂದ:
ಪಟ್ಟಣದಲ್ಲಿ ಡಿ. 7ರಂದು ಹಮ್ಮಿಕೊಂಡಿರುವ 75 ಜೋಡಿ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವದ ಪೂರ್ವ ತಯಾರಿಯನ್ನು ಶನಿವಾರ ವೀಕ್ಷಿಸಿ ಮಾತನಾಡಿದರು.
ಪುತ್ರ ನವೀನಕುಮಾರ ಆರತಕ್ಷತೆ ಕಾರ್ಯಕ್ರಮದೊಂದಿಗೆ ಸರ್ವಧರ್ಮ ಸಾಮೂಹಿಕ ವಿವಾಹ ಮಾಡಲು ಕ್ಷೇತ್ರದ ಜನತೆಯ ಆಶೀರ್ವಾದವೇ ಕಾರಣ. ಪಟ್ಟಣದ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ 4 ಎಕರೆ ವಿಸ್ತೀರ್ಣದಲ್ಲಿ ವಿವಾಹ ಮಹೋತ್ಸವಕ್ಕಾಗಿ ಬೃಹತ್ ಪೆಂಡಾಲ್ ಹಾಕಲಾಗಿದೆ. ಹೆಬ್ಬಳ್ಳಿಯವರ ಜಮೀನಿನಲ್ಲಿ 10 ಎಕರೆಯಲ್ಲಿ ಸಾರ್ವಜನಿಕರ ಊಟ ತಯಾರಿಸಲು 2 ದೊಡ್ಡ ಅಡುಗೆ ಮನೆ, ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ 2 ಕಡೆ ಊಟಕ್ಕಾಗಿ 75 ಕೌಂಟರ್ ತೆರೆಯಲಾಗಿದೆ. ಹುಚ್ಚನಗೌಡರ ಜಮೀನಿನ 26 ಎಕರೆ ಹಾಗೂ ನೀರಾವರಿ ಇಲಾಖೆಯ 13 ಎಕರೆ ಜಾಗೆಯಲ್ಲಿ ಅಂದಾಜು ಒಟ್ಟು 39 ಎಕರೆ ವಿಸ್ತೀರ್ಣದಲ್ಲಿ ವಾಹನಗಳಿಗೆ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.ಹಲವು ಗಣ್ಯರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣವನ್ನು ನವ ವಧುವಿನಂತೆ ಶೃಂಗರಿಸಲಾಗಿದೆ. ಶಂಕರ ಕಾಲೇಜಿನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗಾಗಿ ಮೂರು ಕಡೆಗಳಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಈಗಾಗಲೇ 1 ಲಕ್ಷ ಜನರಿಗೆ ಸಿಹಿ ಬುಂದಿ ತಯಾರಿಸಲಾಗುತ್ತಿದೆ, 90 ಸಾವಿರ ಜೋಳದರೊಟ್ಟಿ ಹಾಗೂ ಸಜ್ಜಿ ರೊಟ್ಟಿಗಳನ್ನು ಪ್ರತಿ ಗ್ರಾಮಗಳಿಂದ ಸ್ವಂತ ಖರ್ಚಿನಿಂದ ಕ್ಷೇತ್ರದ ಸಾರ್ವಜನಿಕರೆ ತಂದು ಕೊಟ್ಟಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಗವಿಮಠದ ಬಸವಲಿಂಗ ಶ್ರೀ, ಶಿವಕುಮಾರ ಶ್ರೀ, ಆದಿಚುಂಚನಗಿರಿಯ ಬಿಜಿಎಸ್ ಮಠದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಕೃಷ್ಣೇಗೌಡರ, ಶಾಸಕ ಪ್ರಸಾದ ಅಬ್ಬಯ್ಯ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಗ್ರಾಮೀಣ ಕಾಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ, ನವಲಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡ್ರ, ಮಂಜುನಾಥ ಮಾಯಣ್ಣವರ, ವಿಕಾಸ ತದ್ದೆವಾಡ, ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಾಪುಗೌಡ ಪಾಟೀಲ, ಕೆಪಿಸಿಸಿ ಸದಸ್ಯ ವಿಜಯ ಕುಲಕರ್ಣಿ, ಸದುಗೌಡ ಪಾಟೀಲ, ರಾಜಶೇಖರ ಮೆಣಸಿನಕಾಯಿ, ವಿಜಯಪ್ಪಗೌಡ ಪಾಟೀಲ, ಪುರಸಭೆ ಸದಸ್ಯ ಮೊದೀನಸಾಬ ಶಿರೂರ, ಜೀವನ ಪವಾರ, ಶಿವಾನಂದ ತಡಸಿ, ಮಂಜು ಜಾಧವ, ಅಪ್ಪಣ್ಣ ಹಳ್ಳದ, ಪ್ರಕಾಶ ಶಿಗ್ಲಿ, ಆನಂದ ಹವಳಕೋಡ, ಶಿರಾಜ ಧಾರವಾಡ ಸೇರಿ ಹಲವರಿದ್ದರು.