ನಾಯಕ ಸಮಾಜವ ಕೇವಲ ಓಟ್ ಬ್ಯಾಂಕ್ ಅಗಿ ಬಳಕೆ

KannadaprabhaNewsNetwork |  
Published : Nov 24, 2025, 01:15 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್   | Kannada Prabha

ಸಾರಾಂಶ

ಚಿತ್ರದುರ್ಗದ ವಾಲ್ಮೀಕ ಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ವಾಲ್ಮೀಕಿ ಜಾತ್ರೆಗೆ ಶ್ರಮಿಸಿದ ಸಮುದಾಯ ಮುಖಂಡರನ್ನು ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ಸನ್ಮಾನಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ರಾಜ್ಯದಲ್ಲಿ ನಾಲ್ಕನೇ ಅತಿ ದೊಡ್ಡ ವಾಲ್ಮೀಕಿ ಸಮುದಾಯವನ್ನು ರಾಜಕೀಯ ಪಕ್ಷಗಳು ಬರೀ ಮತದ ಬ್ಯಾಂಕ್ ಆಗಿ ರೂಪಿಸಿಕೊಂಡಿವೆ ಎಂದು ವಾಲ್ಮೀಕಿ ಗುರುಪೀಠದ ಡಾ.ಪ್ರಸನ್ನಾನಂದ ಸ್ವಾಮೀಜಿ ವಿಷಾಧ ವ್ಯಕ್ತಪಡಿಸಿದರು.

ನಗರದ ವಾಲ್ಮೀಕಿ ಭವನದಲ್ಲಿ ಜಿಲ್ಲಾ ನಾಯಕ ಸಮಾಜದ ವತಿಯಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜನಹಳ್ಳಿಯಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ಮತ್ತು ನಾಡದೊರೆ ಮದಕರಿ ನಾಯಕರ ಜಯಂತ್ಯುತ್ಸವಕ್ಕೆ ಸಹಕಾರ ನೀಡಿದ ಮಹನೀಯರ ಗೌರವ ಸಮರ್ಪಣೆ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ನಮ್ಮ ಸಮುದಾಯದ ನೆರವನ್ನು ಪಡೆದು ಗೆದ್ದ ನಂತರ ನಮ್ಮ ಸಮಸ್ಯೆ ಬಗ್ಗೆ ಗಮನ ನೀಡುತ್ತಿಲ್ಲ. ಇದರ ಬಗ್ಗೆ ನಮ್ಮ ಸಮುದಾಯ ಆಲೋಚನೆ ಮಾಡಬೇಕಿದೆ ಎಂದರು.

ನಾಯಕ ಸಮಾಜವ ಕೇವಲ ಓಟ್ ಬ್ಯಾಂಕ್ ಅಗಿ ಬಳಕೆ ರಾಜ್ಯದಲ್ಲಿ ಲಿಂಗಾಯತ, ಒಕ್ಕಲಿಗ, ಕುರುಬ ಸಮುದಾಯದ ರೀತಿಯಲ್ಲಿ ನಮ್ಮ ಮಾಲ್ಮೀಕಿ ಸಮುದಾಯವೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದೇವೆ. ನಮ್ಮನ್ನು ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಮಾತ್ರ ಪ್ರಾತಿನಿಧ್ಯವನ್ನು ನೀಡುತ್ತಾರೆ. ನಂತರ ನಿರ್ಲಕ್ಷ್ಯ ಮಾಡುತ್ತಾರೆ.ಸಮುದಾಯದ ಜನ ಇಂತಹ ರಾಜಕೀಯ ನಡೆಗಳಿಗೆ ತೀವ್ರ ಪ್ರತಿರೋಧ ಒಡ್ಡಬೇಕು. ನಾಯಕ ಸಮಾಜವ ನಿರ್ಲಕ್ಷಿಸಿದರೆ ಆಗುವ ಪರಿಣಾಮಗಳ ಮನದಟ್ಟು ಮಾಡಿಕೊಡಬೇಕೆಂದು ಹೇಳಿದರು.

ಯಾವುದೇ ಒಂದು ಸಮುದಾಯದ ಅಭಿವೃದ್ದಿಗೆ ಗುರುವಿನ ಮಹತ್ವ ಅಗತ್ಯವಾಗಿದೆ. ಲಿಂಗಾಯತ ಸಮುದಾಯ ವಿಶ್ವ ಗುರು ಬಸವಣ್ಣ, ಕುರುಬ ಸಮುದಾಯ ಕನಕದಾಸರ ಹೆಸರಿನಲ್ಲಿ, ಗೊಲ್ಲ ಸಮುದಾಯ ಶ್ರೀ ಕೃಷ್ಣನ ಹೆಸರಿನಲ್ಲಿ ಸಂಘಟನೆಯಾಗುತ್ತಿದೆ. ಪರಿಶಿಷ್ಟ ಜಾತಿಯ ಸಮುದಾಯಗಳು ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಹೆಸರಿನಲ್ಲಿ ಸಂಘಟನೆಯಾಗುತ್ತಿವೆ. ಬೇಡ ಸಮುದಾಯ ಭಾರತಿಯ ಸಂಸ್ಕೃತಿಗೆ ರಾಮಯಾಣ ಮಹಾಕಾವ್ಯ ನೀಡಿದಂತಹ ಆದಿಕವಿ ವಾಲ್ಮೀಕಿ ಹೆಸರಿನಲ್ಲಿ ಸಂಘಟನೆ ಯಾಗುತ್ತಿದ್ದೇವೆ. ಸಂಘಟನೆಯಲ್ಲಿ ದೊಡ್ಡದಾದ ಲಿಂಗಾಯತ ಅಥವಾ ವೀರಶೈವ ಸಮುದಾಯ ಪ್ರಥಮ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಒಕ್ಕಲಿಗರಿದ್ದಾರೆ. ಮೂರನೇ ಸ್ಥಾನದಲ್ಲಿ ಕುರುಬ, ನಾಲ್ಕನೇ ಸ್ಥಾನದಲ್ಲಿ ವಾಲ್ಮೀಕಿ ಸಮುದಾಯವರಿದ್ದಾರೆ. ರಾಜ್ಯದಲ್ಲಿ ಲಿಂಗಾಯತರಷ್ಟೇ ಒಕ್ಕಲಿಗರು, ಕುರುಬರಿದ್ದಾರೆ. ಅಷ್ಟೇ ಪ್ರಮಾಣದಲ್ಲಿ ವಾಲ್ಮೀಕಿ ಸಮುದಾಯವರು ಇದ್ದಾರೆ ಎಂದರು.

ರಾಜಕೀಯ ಪಕ್ಷಗಳು ಚುನಾವಣೆ ಸಮಯದಲ್ಲಿ ಮಾತ್ರ ನಮ್ಮ ಸಮುದಾಯವನ್ನು ನೆನಪಿಸಿಕೊಳ್ಳುತ್ತಾರೆ. ಮತ ಪಡೆದು ಗೆದ್ದ ಮೇಲೆ ನಮ್ಮ ಹಿತ ಕಾಯುತ್ತಿಲ್ಲ, ಸರ್ಕಾರಗಳು ಈ ಸಮುದಾಯವನ್ನು ಮತದ ಬ್ಯಾಂಕ್‌ಗಳಾಗಿ ರೂಪಿಸಿಕೊಂಡಿವೆ. ಮಹರ್ಷಿ ವಾಲ್ಮಿಕಿ ಜಯಂತಿ, ಮಹರ್ಷಿ ವಾಲ್ಮೀಕಿ ಜಾತ್ರೆ ಬಂದಾಗ, ಮದಕರಿ ಜಯಂತಿ ಆಚರಿಸುವಾಗ ನಾವೆಲ್ಲರೂ ಪಕ್ಷಾತೀತವಾಗಿ ಸಮುದಾಯಕ್ಕೆ ಸಾಂವಿಧಾನಿಕ ಹಕ್ಕುಗಳನ್ನು ಪಡೆದುಕೊಳ್ಳಲು ಒಕ್ಕೊರಲಿನಿಂದ ಮುಂದಾಗಬೇಕು. ಸರ್ಕಾರದ ಸೌಲಭ್ಯಗಳಲು ಲಭ್ಯವಾಗುವಲ್ಲಿ ವಿಳಂಬವಾದರೆ ಪಕ್ಷಾತೀತವಾಗಿ ಹೋರಾಟ ಮಾಡುವ ಗುಣ ಬೆಳೆಸಿಕೊಳ್ಳಬೇಕೆಂದು ಶ್ರೀಗಳು ಹೇಳಿದರು.

ಜಿಲ್ಲಾ ನಾಯಕ ಸಂಘದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ಸಮುದಾಯದ ಮುಖಂಡರುಗಳಾದ ಸಂಪತ್ ಕುಮಾರ್, ಪಾಪನಾಯಕ, ವಿರೇಶ್, ಸೂರಗೌಡ, ಮಹೇಶ್, ರವಿಕುಮಾರ್, ಮಲ್ಲಿಕಾರ್ಜನ್, ಹೊರಕೇರಪ್ಪ, ತಿಪ್ಪಮ್ಮ, ಶ್ರೀನಿವಾಸ್ ನಾಯಕ, ಪ್ರಕಾಶ್, ಕವನ ಕರಿಯಮ್ಮ, ವಿಮಲಾಕ್ಷಿ, ಲೋಹಿತ್ ಕುಮಾರ್, ನರಸಿಂಹರಾಜು, ದಿನೇಶ್ ಗೌಡಗೆರೆ, ಅಂಜನಪ್ಪ, ಶಿವಕುಮಾರ್, ಮಂಜುನಾಥ್, ಆಶೋಕ ಬೆಳಗಟ್ಟ ಸೇರಿದಂತೆ ಇತರರು ಭಾಗವಹಿಸಿದ್ದರು.

PREV

Recommended Stories

ವಿದ್ಯಾರ್ಥಿಗಳು ಸರ್ಕಾರಿ ಯೋಜನೆ ಸದುಪಯೋಗ ಪಡೆದುಕೊಳ್ಳಿ
ಗುರು, ಶಿಷ್ಯರದು ಜಗತ್ತಿನ ಶ್ರೇಷ್ಠ ಸಂಬಂಧ