ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಡಿ.ಕಲ್ಕೆರೆಯ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ನಯಾಜ್ ಪಾಷ, ಉಪಾಧ್ಯಕ್ಷರಾಗಿ ಶ್ರೀಕಂಠೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ನೂತನ ಆಡಳಿತ ಮಂಡಳಿಗೆ ಇತ್ತೀಚೆಗೆ ಷೇರುದಾರರಿಂದ ಮತದಾನ ನಡೆದು ನಿರ್ದೇಶಕರ ಆಯ್ಕೆ ಮಾಡಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ನಯಾಜ್ ಪಾಷ, ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಕಂಠೇಗೌಡ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಶಿರಾ ಸಿಡಿಒ ಶ್ರೀನಿವಾಸ್ ರವರು ಈರ್ವರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು. ನೂತನ ಅಧ್ಯಕ್ಷ, ಉಪಾಧ್ಯಕ್ಷ ಬೆಂಬಲಿಗರು ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಮೆರವಣಿಗೆ – ಕಳೆದ 9 ವರ್ಷಗಳಿಂದ ಮುಚ್ಚಿ ಹೋಗಿದ್ದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಪುನರ್ ಜೀವನ ಕೊಟ್ಟು, ಹೊಸ ನಿರ್ದೇಶಕರ ತಂಡವನ್ನು ಕಟ್ಟಿದ್ದ ಹಿನ್ನೆಲೆಯಲ್ಲಿ ನಯಾಜ್ ಪಾಷಾ ರವರ ತಂಡದ ಎಲ್ಲ ನಿರ್ದೇಶಕರು ಕಲ್ಕೆರೆ ಗ್ರಾಮದ ಎಲ್ಲಾ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಅಲ್ಲದೇ ತಪ್ಪದೇ ಹಾಲನ್ನು ಸಹಕಾರ ಸಂಘಕ್ಕೆ ಹಾಕುವ ಮೂಲಕ ಸಹಕಾರ ಸಂಘದ ಅಭಿವೃದ್ಧಿ ಮತ್ತು ವ್ಯಯಕ್ತಿಕವಾಗಿ ಆರ್ಥಿಕವಾಗಿ ಅಭಿವೃದ್ಧಿ ಎಂದು ನಯಾಜ್ ಪಾಷಾ ನೇತೃತ್ವದ ಪದಾದಿಕಾರಿಗಳು ಗ್ರಾಮಸ್ಥರಲ್ಲಿ ಮನವಿ ಮಾಡಿದರು. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸಹ ನಿರ್ದೇಶಕರಾದ ಕೆ.ವಿ.ಮೃತ್ಯುಂಜಯ, ಕೆ.ಜೆ.ಕಣ್ಣನ್, ಕೆ.ಜೆ.ರವಿಕುಮಾರ್, ಪರಮೇಶ್ವರಯ್ಯ, ಶೇಷಗಿರಿ, ಪುಟ್ಟಮ್ಮ, ಪದ್ಮ, ಕೆ.ವಿ.ರವಿಕುಮಾರ್, ಸಂಘದ ಕಾರ್ಯದರ್ಶಿ ಸಂಪತ್ ಕುಮಾರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೊಂಕಿಹಳ್ಳಿಪ್ರಕಾಶ್, ಪಾರ್ಥಸಾರಥಿ, ಡಿ.ಕಲ್ಕರೆ, ಆಯರಹಳ್ಳಿ, ಅಯರಹಳ್ಳಿಗೊಲ್ಲರಹಟ್ಟಿ, ವಡೇರಹಳ್ಳಿ ಗ್ರಾಮಸ್ಥರು ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿದರು.17 ಟಿವಿಕೆ 1 - ತುರುವೇಕೆರೆ ತಾಲೂಕು ಡಿ.ಕಲ್ಕೆರೆಯ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ನಯಾಜ್ ಪಾಷ ಉಪಾಧ್ಯಕ್ಷರಾಗಿ ಶ್ರೀಕಂಠೇಗೌಡ ಅವಿರೋಧವಾಗಿ ಆಯ್ಕೆಯಾದರು.