ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದ ಗುರುಭವನದಲ್ಲಿ ಅಬ್ದುಲ್ ನಜೀರ್ ಸಾಬ್ ಫೌಂಡೇಶನ್ ಹಾಗೂ ಮೈಸೂರು- ಚಾಮರಾಜನಗರ ಜಿಲ್ಲಾ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ ಆಯೋಜಿಸಿದ್ದ ಅಬ್ದುಲ್ ನಜೀರ್ ಸಾಬ್ ಜನ್ಮ ದಿನಾಚರಣೆ ಅಂಗವಾಗಿ ಸ್ವಾಭಿಮಾನಿ ಪಂಚಾಯತ್ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅಬ್ದುಲ್ ನಜೀರ್ ಸಾಬ್ ಅವರು ಅಧಿಕಾರ ವಿಕೇಂದ್ರೀಕರಣದ ಮೂಲಕ ಅನಕ್ಷರರಿಗೂ ಗ್ರಾಮಾಂತರ ಪ್ರದೇಶದಲ್ಲಿ ಆಡಳಿತ ನಡೆಸಲು ಅವಕಾಶ ಕಲ್ಪಿಸಿದರು. ಅಲ್ಲದೆ ಗ್ರಾಮೀಣ ಭಾಗದ ಅಭಿವೃದ್ಧಿಗೂ ಕಾರಣರಾಗಿದ್ದರು ಎಂದು ಅಭಿಪ್ರಾಯಪಟ್ಟರು.ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಅಬ್ದುಲ್ ನಜೀರ್ ಸಾಬ್‌ರು ಆ ಕಾಲದಲ್ಲೇ ರಾಜ್ಯದ ಜನರು ಶುದ್ಧ ನೀರು ಕುಡಿಯಬೇಕು ಎಂದು ಬೋರ್ ವೆಲ್ ಮೂಲಕ ನೀರನ್ನು ಭೂಮಿಯಿಂದ ಮೇಲೆ ತಂದವರು ಎಂದು ಬಣ್ಣಿಸಿದರು.
ಗುಂಡ್ಲುಪೇಟೆ ಅಬ್ದುಲ್ ನಜೀರ್ ಸಾಬ್ ಸಚಿವರಾಗಿದ್ದ ಕಾಲದಲ್ಲಿ ಆರಂಭಿಸಿದ ಅಧಿಕಾರ ವಿಕೇಂದ್ರೀಕರಣ ಹಾಗೂ ಬೋರ್ ವೆಲ್ ಮೂಲಕ ನೀರು ಹೊರ ತಂದು ಶುದ್ದ ಕುಡಿವ ನೀರು ಕೊಟ್ಟ ಅವರ ಸಾಧನೆ ಯಾರು ಮರೆಯಲಾರರು ಎಂದು ಸ್ಮರಿಸಿದರು.
ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಗ್ರಾಪಂ ಸದಸ್ಯರ ಮಹಾ ಒಕ್ಕೂಟದ ರಾಜ್ಯ ಉಪಾಧ್ಯಕ್ಷರಾದ ಬೃಂದಾ ಕೃಷ್ಣೇಗೌಡ, ಹಂಗಳ ವೃಷಬೇಂದ್ರ, ರಾಜ್ಯ ಸಂಘಟನಾ ಕಾರ್ಯದರ್ಶಿ ನಿಶಾಂತ್ ಕೆ.ಎಸ್ ಹಾಗೂ ಹುಣಸೂರು ನಾಗರಾಜು, ಗುರುಮಲ್ಲಪ್ಪ, ಶಾಂತಮೂರ್ತಿ ಸೇರಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಇದ್ದರು.
ಸ್ಥಳೀಯ ಸಂಸ್ಥೆಗಳಿಗೆ ರೂಪ ಕೊಟ್ಟ ನಜೀರ್ ಸಾಬ್:
ಅಧಿಕಾರ ಇದ್ದಾಗ ಅಬ್ದುಲ್ ನಜೀರ್ ಸಾಬ್ ಅವರು ಸಾಮಾಜಿಕ ಕಳಕಳಿಯಿಂದ ಶಾಸನ ರೂಪಿಸಿದರು. ಗ್ರಾಮೀಣ ಭಾಗದ ಅಭಿವೃದ್ಧಿಗೆ ಜಿಲ್ಲಾ ಪರಿಷತ್ ಹಾಗೂ ಮಂಡಲ ಪಂಚಾಯಿತಿ ಉದಯಕ್ಕೆ ಕಾರಣರಾದರು ಎಂದರು.