ಹಳಿಯಾಳ: ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಸ್.ವಿ. ಸಂಕನೂರ ಅವರು ಗುರುವಾರ ಹಳಿಯಾಳ ನಗರದಲ್ಲಿ ಬಿರುಸಿನ ಮತಯಾಚನೆ ನಡೆಸಿದರು.ತಾಲೂಕು ಸಿವಿಲ್ ನ್ಯಾಯಾಲಯದಲ್ಲಿ ವಕೀಲರನ್ನು ಭೇಟಿ ಮಾಡಿದ ಅವರು, ಬಳಿಕ ವಿ.ಡಿ. ಹೆಗಡೆ ಪದವಿಪೂರ್ವ ಕಾಲೇಜು, ಡಿಪ್ಲೋಮಾ ಕಾಲೇಜು, ಶಿವಾಜಿ ಪದವಿಪೂರ್ವ ಕಾಲೇಜು, ಕೆಎಲ್ಎಸ್ ಸಂಸ್ಥೆಯ ವಿಡಿಐಟಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪದವೀಧರ ಮತದಾರರನ್ನು ಭೇಟಿ ಮಾಡಿ ಮತಯಾಚಿಸಿದರು. ಮನೆ-ಮನೆಗೆ ತೆರಳಿ ಪ್ರಚಾರ ನಡೆಸಿದರು.
ವಿಧಾನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ, ಮಾಜಿ ಮಂಡಲ ಅಧ್ಯಕ್ಷ ವಿಠ್ಠಲ ಸಿದ್ದನ್ನವರ, ಜಿಲ್ಲಾ ವಿಶೇಷ ಆಹ್ವಾನಿತ ಮಂಗೇಶ ದೇಶಪಾಂಡೆ, ಪ್ರಧಾನ ಕಾರ್ಯದರ್ಶಿ ಸಂತೋಷ್ ಘಟಕಾಂಬಳೆ, ಹನುಮಂತ ಚಿನಗಿನಕೊಪ್ಪ, ಗಣಪತಿ ಕರಂಜೇಕರ, ಸೊನಪ್ಪ ಸುಣಕಾರ, ಯಲ್ಲಪ್ಪ ಹೊನ್ನೋಜಿ, ಮಹೇಶ್ ಮೇಘಾಣಿ, ಯಲ್ಲಪ್ಪ ಹೆಳವರ, ಇಲಿಯಾಸ್ ಬಳಗಾರ, ಸಂಗೀತಾ ಜಾವಳೇಕರ, ರತ್ನಮಾಲಾ ಮುಳೆ, ಜಯಲಕ್ಷ್ಮಿ ಚೌವ್ಹಾಣ್, ಮಂಜುಳಾ ಮೋರೆ, ಈರವ್ವಾ ಕೋರವರ ಸೇರಿದಂತೆ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.