ಬಿಹಾರದಲ್ಲಿ ಜಯಭೇರಿದ ಎನ್‌ಡಿಎ: ಸಂಭ್ರಮೋತ್ಸವ

KannadaprabhaNewsNetwork |  
Published : Nov 15, 2025, 03:00 AM IST
ವಿಜಯಪುರ  | Kannada Prabha

ಸಾರಾಂಶ

ಬಿಹಾರನಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಜಯಭೇರಿ ಸಾಧಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಬಿಹಾರನಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಜಯಭೇರಿ ಸಾಧಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಗಾಂಧೀವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಬಿಜೆಪಿ ಬಾವುಟ ಹಿಡಿದು ಸಂಭ್ರಮೋತ್ಸವದಲ್ಲಿ ಭಾಗಿಯಾದರು. ಪಟಾಕಿ ಸಿಡಿಸಿ, ಪರಸ್ಪರ ಸಿಹಿ ತಿನಿಸಿ ವಿಜಯೋತ್ಸವ ಸಂಭ್ರಮದಲ್ಲಿ ಮಿಂದೆದ್ದರು.

ಈ ವೇಳೆ ಮಾತನಾಡಿದ ಸಂಸದ ರಮೇಶ ಜಿಗಜಿಣಗಿ, ಬಿಜೆಪಿಯ ಜನಪರ ನಿಲುವಿಗೆ ಬಿಹಾರ ಜನತೆ ಗೆಲುವಿನ ಉಡುಗೊರೆ ನೀಡಿದ್ದಾರೆ. ಬಿಹಾರ ಸರ್ವತೋಮುಖ ವಿಕಾಸವನ್ನು ಕೇಂದ್ರವಾಗಿರಿಸಿಕೊಂಡು ಚುನಾವಣೆ ಎದುರಿಸಿದ್ದ ಬಿಜೆಪಿಗೆ ಬಿಹಾರ ಜನತೆ ಮತ್ತೊಮ್ಮೆ ಆಶೀರ್ವದಿಸಿದ್ದಾರೆ. ವಿನಾಕಾರಣ ಬಿಜೆಪಿಯ ಕೇಂದ್ರ ಸರ್ಕಾರಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಿರುವ ಕಾಂಗ್ರೆಸ್ ಮೊದಲಾದ ಪಕ್ಷಗಳಿಗೆ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಜನತೆ ಬಿಜೆಪಿಯೊಂದಿಗೆ ಇದ್ದಾರೆ ಎಂಬುದು ಇನ್ನೊಮ್ಮೆ ಸಾಬೀತಾಗಿದೆ. ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಈ ಬಿಹಾರ ಚುನಾವಣೆಯೇ ದಿಕ್ಸೂಚಿ, ಇಲ್ಲಿಯೂ ಬಿಜೆಪಿ ಅತ್ಯಂತ ದಾಖಲೆಯೊಂದಿಗೆ ವಿಜಯ ಸಾಧಿಸಲಿದೆ. ಪ್ರಧಾನಿ ನರೇಂದ್ರ ಮೋದಿ, ಅಭಿವೃದ್ಧಿ ಉಸಿರಾಗಿಸಿಕೊಂಡಿರುವ ನೀತಿಶಕುಮಾರ ಅವರ ನಾಯಕತ್ವಕ್ಕೆ ಬಿಹಾರ ಜನತೆ ಮನ್ನಣೆ ನೀಡಿದ್ದಾರೆ ಎಂದರು.

ಬಿಜೆಪಿ ಮುಖಂಡರಾದ ಚಂದ್ರಶೇಖರ್ ಕವಟಗಿ, ಭೀಮಾಶಂಕರ್ ಹದನೂರ, ಮಳುಗೌಡ ಪಾಟೀಲ, ಸಾಬು ಮಾಶ್ಯಾಳ, ಈರಣ್ಣ ರಾವೂರ್, ಬಸವರಾಜ್ ಬೈಚಬಾಳ, ಕೃಷ್ಣ ಗುನ್ನಾಳಕರ, ಸಂಜೀವ ಐಹೊಳೆ, ಉಮೇಶ್ ಕೊಳಕೂರ್, ಮಹೇಂದ್ರ ನಾಯಕ, ಸಂಜಯ್ ಪಾಟೀಲ್ ಕನಮಡಿ, ಚಿದಾನಂದ ಚಲವಾದಿ, ಸಂದೀಪ್ ಪಾಟೀಲ, ಶಿವರುದ್ರ ಬಾಗಲಕೋಟ, ಪಾಪುಸಿಂಗ್ ರಜಪೂತ, ಮಲ್ಲು ಕಲಾದಗಿ, ವಿಜಯ ಜೋಶಿ, ಚಿನ್ನು ಚಿನಗುಂಡಿ, ಕಾಂತು ಶಿಂಧೆ, ವಿನಾಯಕ್ ದಹಿಂಡೆ, ರಾಘವೇಂದ್ರ, ಅಶೋಕ ರಾಠೋಡ, ಶ್ರೀಧರ್ ಬಿಜ್ಜರಗಿ, ಗಿರೀಶ್ ಪಾಟೀಲ, ಆನಂದ್ ಮುಚ್ಚಂಡಿ, ಜಗದೀಶ್ ಮುಚ್ಚಂಡಿ, ಸಿದ್ದು ಮಲ್ಲಿಕಾರ್ಜುನ್ ಮಠ, ಸಂಗಮೇಶ್ ಹೌದೆ, ರಾಹುಲ್ ಜಾಧವ, ಅಪ್ಪು ಕುಂಬಾರ, ಬಸವರಾಜ ಹಳ್ಳಿ, ರಾಜಶೇಖರ್ ಬಾಗಲಕೋಟ್, ಗೇಸುರಾಜ್ ಇನಾಮದಾರ, ಗಣೇಶ್ ರಣದೇವಿ, ಲಖನ್ ದೇವಳ್ಳಿ, ಭರತ್ ಕೋಳಿ ಪಾಲ್ಗೊಂಡಿದ್ದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ