ಜನಗಣತಿ-2027ಕ್ಕೆ ಅಗತ್ಯ ಪೂರ್ವ ತಯಾರಿ

KannadaprabhaNewsNetwork |  
Published : Nov 14, 2025, 01:15 AM IST
ಬೆಂ.ಗ್ರಾ ಜಿಲ್ಲಾಡಳಿತದಿಂದ ಜನಗಣತಿ ಪೂರ್ವಭಾವಿ ಸಭೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯಿತು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: 2027ಕ್ಕೆ ಜನಗಣತಿ ಶುರುವಾಗಲಿದ್ದು ಜಿಲ್ಲೆಯಲ್ಲಿ ಜನಗಣತಿ ಕಾರ್ಯ ಕೈಗೊಳ್ಳಲು ಇಂದಿನಿಂದಲೇ ಪೂರ್ವ ಸಿದ್ಧತೆ ಕೈಗೊಂಡು ಗ್ರಾಮ, ಪಟ್ಟಣಗಳ ಗಡಿ ಗುರುತಿಸುವಿಕೆ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಸೂಚಿಸಿದರು.

ದೊಡ್ಡಬಳ್ಳಾಪುರ: 2027ಕ್ಕೆ ಜನಗಣತಿ ಶುರುವಾಗಲಿದ್ದು ಜಿಲ್ಲೆಯಲ್ಲಿ ಜನಗಣತಿ ಕಾರ್ಯ ಕೈಗೊಳ್ಳಲು ಇಂದಿನಿಂದಲೇ ಪೂರ್ವ ಸಿದ್ಧತೆ ಕೈಗೊಂಡು ಗ್ರಾಮ, ಪಟ್ಟಣಗಳ ಗಡಿ ಗುರುತಿಸುವಿಕೆ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಸೂಚಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜನಗಣತಿ-2027ಕ್ಕೆ ಸಂಬಂಧಿಸಿದಂತೆ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನಗಣತಿಯ ಮೂಲ ಉದ್ದೇಶವು ದೇಶದ ಎಲ್ಲಾ ವ್ಯಕ್ತಿಗಳ ಎಣಿಕೆಯನ್ನು ಯಾವುದೇ ಲೋಪದೋಷ ಇಲ್ಲದಂತೆ ಸಿದ್ಧಪಡಿಸುವುದು. ಹಾಗಾಗಿ ಮೊದಲು ಗ್ರಾಮಗಳ ಬೌಂಡರಿ ಗುರುತಿಸುವಿಕೆ ಕಾರ್ಯ ನಡೆಯಲಿದೆ ಎಂದರು.

ಜನಗಣತಿ-2027 ಹಂತಗಳು:

ಜನಗಣತಿ 2027ಕ್ಕೆ ಸಂಬಂಧಿಸಿದಂತೆ ಹೌಸ್ ಲಿಸ್ಟಿಂಗ್ ಮತ್ತು ಮನೆ ಗಣತಿ (ಹಂತ-01) ಕಾರ್ಯವು ಏಪ್ರಿಲ್ 2026 ರಿಂದ ಸೆಪ್ಟೆಂಬರ್ 2026ರ ಅವಧಿಯಲ್ಲಿ ನಡೆಯಲಿದೆ. ಜನಸಂಖ್ಯೆ ಗಣತಿ ಕಾರ್ಯವು (ಹಂತ-02) ಫೆಬ್ರವರಿ 2027ರಲ್ಲಿ ನಡೆಯಲಿದೆ.

ಗ್ರಾಮಗಳ ಗಡಿ ಗುರುತಿಸುವಿಕೆ ಕಾರ್ಯ ಜನಗಣತಿಯ ನಿರ್ದೇಶನಾಲಯವು 2011ರ ಜನಗಣತಿಯಂತೆ ಗ್ರಾಮ ಮತ್ತು ಪಟ್ಟಣಗಳ ಪಟ್ಟಿ ನೀಡಿದ್ದು ಪರಿಷ್ಕೃತ ಪಟ್ಟಿ ನೀಡಲು ಸೂಚಿಸಿದೆ. ಅದರಂತೆ ಪ್ರಸ್ತುತ ಗ್ರಾಮಗಳು ಮತ್ತು ಪಟ್ಟಣಗಳಿಗೆ ಸಂಬಂಧಿಸಿದಂತೆ ಸೆಕ್ಷನ್-ಎ(ಗ್ರಾಮೀಣ ಪ್ರದೇಶಗಳು) ಮತ್ತು ಸೆಕ್ಷನ್-ಬಿ (ಪಟ್ಟಣ ಪ್ರದೇಶಗಳು) ಪಟ್ಟಿಯನ್ನು ಪರಿಷ್ಕರಿಸಿ ಸಿದ್ದಪಡಿಸಬೇಕಿದೆ. ಗ್ರಾಮಗಳ ಪಟ್ಟಿ ಆಧರಿಸಿ ಗ್ರಾಮಗಳ ಗಡಿ ಗುರ್ತಿಸುವಿಕೆಯಲ್ಲಿ ತಹಶೀಲ್ದಾರ್ಗಳು ಜವಾಬ್ದಾರಿ ವಹಿಸಬೇಕು. ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಗಡಿ ಗುರ್ತಿಸುವಲ್ಲಿ ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕ್ರಮ ವಹಿಸಬೇಕು. ಯಾವ ಗ್ರಾಮಗಳು ಬಿಟ್ಟು ಹೋಗಿದೆ, ಯಾವ ಗ್ರಾಮಗಳು ಸೇರ್ಪಡೆ ಆಗಿವೆ, ವ್ಯತ್ಯಾಸಗಳೇನು ಎಂಬುದನ್ನು ದೃಢೀಕರಿಸಿ ಗ್ರಾಮಗಳ,ಪಟ್ಟಣಗಳ ಗಡಿ(ಬೌಂಡರಿ)ಯನ್ನು ಗುರ್ತಿಸಿ ನವೆಂಬರ್ ಅಂತ್ಯದೊಳಗೆ ವರದಿ ನೀಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ಉಪವಿಭಾಗಾಧಿಕಾರಿ ದುರ್ಗಶ್ರೀ, ಜಿ.ಪಂ ಉಪಕಾರ್ಯದರ್ಶಿ ಶಿವಕುಮಾರ್ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಬಾಕ್ಸ್‌.......

ಗ್ರಾಮಗಳ ಪಟ್ಟಿ ವಿವರದೇವನಹಳ್ಳಿ230ಹೊಸಕೋಟೆ302ದೊಡ್ಡಬಳ್ಳಾಪುರ309ನೆಲಮಂಗಲ252ಒಟ್ಟು1093

ಫೋಟೋ-

13ಕೆಡಿಬಿಪಿ1- ಬೆಂ.ಗ್ರಾ ಜಿಲ್ಲಾಡಳಿತದಿಂದ ಜನಗಣತಿ ಪೂರ್ವಭಾವಿ ಸಭೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ