ಕನ್ನಡಪ್ರಭ ವಾರ್ತೆ ಬಂಗಾರಪೇಟೆ
1926ರಲ್ಲಿ ನಿರ್ಮಿಸಿದ ಕೆರೆ
ಕೆಜಿಎಫ್‌ನ ಬೆಟ್ಟ ಗುಡ್ಡೆಗಳಲ್ಲಿ ಸುರಿಯುವ ಮಳೆಯ ನೀರನ್ನು ಸಂಗ್ರಹಿಸುವ ಉದ್ದೇಶದಿಂದ ಗ್ರಾಮದ ದೊಡ್ಡಕೆರೆಯನ್ನು 1926 ರಲ್ಲಿ ಮೈಸೂರಿನ ದಿವಾನರು ನಿರ್ಮಿಸಿದ್ದರು. ಆದರೆ ಈಗ ಕೆರೆಯ ಏರಿ ಕೊಚ್ಚಿ ಹೋಗಿದೆ ಮತ್ತು ಕೋಡಿ ಪ್ರದೇಶಗಳು ಶಿಥಿಲವಾಗಿವೆ. ಇದರಿಂದ ಮಳೆಗಾಲದಲ್ಲಿ ಕೆರೆಯಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಆದರೂ ಈ ಕೆರೆ ಪುನಶ್ಚೇತನಕ್ಕೆ ಸಂಬಂಧಪಟ್ಟವರು ಮುಂದಾಗುತ್ತಿಲ್ಲ.ಕೆರೆ ತುಂಬಾ ಹೂಳು ತುಂಬಿಕೊಂಡಿದ್ದು ಕೆರೆಯ ಕಟ್ಟೆಯು ಕಿತ್ತು ಹೋಗಿರುವುದರಿಂದ ಸದ್ಯಕ್ಕೆ ಕೆರೆಯಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಕೆರೆಯ ತುಂಬಾ ಜಾಲಿ ಮರಗಳು , ಮುಳ್ಳಿನ ಗಿಡಗಳು ಪೊದೆಗಳು,ಗಿಡಗಂಟಿಗಳು ಬೆಳೆದು ಕೆರೆಯ ಸ್ವರೂಪವೇ ಬದಲಾಗಿದೆ.
ಸಣ್ಣ ನೀರಾವರಿ ಇಲಾಖೆ ಮೌನಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಬರುವ ಈ ಕೆರೆಯಲ್ಲಿ ಗಿಡಗಂಟಿಗಳನ್ನು ತೆರವುಗೊಳಿಸಿ ಕೆರೆಗೆ ಕಟ್ಟೆಯನ್ನು ನಿರ್ಮಿಸಿ ಕೆರೆಯನ್ನು ರಕ್ಷಿಸುವುದರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ವೃದ್ದಿಗೆ ಅನುಕೂಲವಾಗುತ್ತದೆ, ಆದರೆ ಯಾರೂ ಇತ್ತ ಗಮನಹರಿಸುತ್ತಿಲ್ಲ ಎಂಬುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಕೆರೆಯ ನೀರಿನಿಂದ ಸುತ್ತಮುತ್ತಲಿನ ಸುಮಾರು ಐದಾರು ಹಳ್ಳಿಗಳಲ್ಲಿ ರೈತರ ಜಮೀನುಗಳಿಗೆ ನೀರಾವರಿ ವ್ಯವಸ್ಥೆಯನ್ನು ಒದಗಿಸುತ್ತಿತ್ತು, ಆದರೆ ಕೆರೆಯ ಅವಸಾನದಿಂದಾಗಿ ಅಂತರ್ಜಲ ಕುಸಿದಿದ್ದು ಬೋರ್‌ವೆಲ್‌ಗಳಲ್ಲೂ ನೀರು ಸಿಗುತ್ತಿಲ್ಲ. ಈಗಲಾದರೂ ಸಂಬಂಧಪಟ್ಟ ಇಲಾಖೆ ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.