ಕನ್ನಡಪ್ರಭ ವಾರ್ತೆ ಕಲಬುರಗಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೋಲಿ ಸಮಾಜವೇ ಹೆಚ್ಚಾಗಿರುವ ಗುರಮಠಕಲ್‌ನಿಂದಲೇ ಖರ್ಗೆಯವರು 8 ಬಾರಿ ಶಾಸಕರಾದರೂ ಸಮಾಜಕ್ಕೆ ಏನೂ ಪ್ರಯೋಜನವಾಗಲಿಲ್ಲ. 1983 ರಲ್ಲಿ ದೇವೇಂದ್ರಪ್ಪ ಘಾಳಪ್ಪ ಜಮಾದಾರ ಅವರ ವಿರುದ್ದ ವೈಜನಾಥ ಪಾಟೀಲ್ ಅವರು ಸುಳ್ಳು ಎಸ್‌ಟಿ ಪ್ರಮಾಣ ಪತ್ರ ತೆಗೆದುಕೊಂಡಿದ್ದಾರೆ ಅಂತ ನ್ಯಾಯಾಲಯದಲ್ಲಿ ದಾವೇ ಹಾಕಿದ್ದರು. 1985 ರಲ್ಲಿ ಮಾನ್ಯ ನ್ಯಾಯಾಲಯವು ಕಬ್ಬಲಿಗ, ಕಬ್ಬೇರ ಈ ಎಲ್ಲ ಪದಗಳು ಟೋಕರೆ ಕೋಲಿ, ಕೊಯಾ ಪದದ ಪರ್ಯಾಯ ಪದಗಳು ಹಾಗಾಗಿ ಈ ಸಮುದಾಯಗಳು ಎಸ್‌ಟಿ ಪ್ರಮಾಣ ಪತ್ರ ಪಡೆಯಬಹುದು ಎಂದು ಆದೇಶ ನೀಡಿತು ಎಂದು ಮೆಲಕು ಹಾಕಿದರು.
ಈ ಆದೇಶದ ಪ್ರಕಾರ ಅಂದಿನ ಸರ್ಕಾರ ಈ ಸಮುದಾಯಗಳಿಗೆ ಎಸ್ಟಿ ಸರ್ಟಿಫಿಕೇಟ್ ಕೊಡಬೇಕು ಅಂತ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿತ್ತು . ಆಗ ಮಲ್ಲಿಕಾರ್ಜುನ ಖರ್ಗೆ ಅವರು ಶಾಸಕರಾಗಿದ್ದರು. ಕೋಲಿ ಸಮಾಜದ ಮತಗಳಿಂದ ಆಯ್ಕೆಯಾಗಿದ್ದ ಇವರು ಅಲ್ಲಿಂದ ನಿರಂತರವಾಗಿ ಕೋಲಿ ಸಮಾಜಕ್ಕೆ ST ಪ್ರಮಾಣ ಪತ್ರಗಳನ್ನು ಸಿಗುವಂತೆ ನೋಡಿಕೊಳ್ಳಬಹುದಿತ್ತು ಆದರೆ ಇವರು ಹಾಗೆಮಾಡಲಿಲ್ಲ. ಸ್ವತಹ ಒಬ್ಬ ವಕೀಲರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನ್ಯಾಯಾಲಯ ನೀಡಿದ ಆದೇಶದ ಬಗ್ಗೆ ಗಮನ ನೀಡದೇ ಅಲಕ್ಷಿಸಿದರೆಂದರು ನಾಟೀಕಾರ್ ಆರೋಪಿಸಿದರು.
ಮಾಜಿ ಸಚಿವ ಬಾಬೂರಾವ ಚಿಂಚನ್ಸೂರ್ ಸೇರಿದಂತೆ ಅನೇಕರು ಸಾಜವನ್ನ ರಾಜಕೀಯವಾಗಿ ಬಳಸಿದರೆ ವಿನಹಃ ಬೇಡಿಕೆ ಈಡೇರಿಸಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಯ ಮಟ್ಟದಲ್ಲಿ ಪ್ರಭಾವಿ ನಾಯಕರಾಗಿರುವುದರಿಂದ ಕೇಂದ್ರ ಸರ್ಕಾರದಲ್ಲಿ ಅಧಿಕಾರದಲ್ಲಿ ಇದ್ದಾಗಲೂ ಮತ್ತು ವಿರೋಧ ಪಕ್ಷದಲ್ಲಿ ಇದ್ದಾಗಲೂ ಕೂಡ ಇವರು ಒಂದು ಬಾರಿಯೂ ಕೋಲಿ, ಕಬ್ಬಲಿಗ ಸಮಾಜವನ್ನು ಎಸ್ಟಿ ಗೆ ಸೇರಿಸುವಂತೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಾತನಾಡಲಿಲ್ಲ ಜೊತೆಗೆ ಬೇಕಾದ ಸಮರ್ಪಕ ದಾಖಲಾತಿಗಳನ್ನು ಒದಗಿಸಲಿಲ್ಲವೆಂದು ದೂರಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆಯವರು ನಮ್ಮ ಸಮಾಜದ ಬಗ್ಗೆ ಚುನಾವಣೆಯ ಹೊಸ್ತಿಲಿನಲ್ಲಿ ಬಹಳ ಕಳಕಳಿ ವ್ಯಕ್ತಪಡಿಸುತ್ತಿದ್ದಾರೆ ಆದರೆ ತಮ್ಮ ಸರಕಾರ ಅಧಿಕಾರಕ್ಕೆ ಬಂದು 10 ತಿಂಗಳಾದರೂ ಕೂಡ ಇಲ್ಲಿವರೆಗೂ ಜಿಲ್ಲೆಯಲ್ಲಿ ನಮ್ಮ ಸಮಾಜದ ಒಬ್ಬನೇ ಒಬ್ಬ ಅಧಿಕಾರಿಯನ್ನೂ ಕೂಡ ತಂದಿಲ್ಲ. ಚುನಾವಣೆಗಾಗಿ ಮಾತ್ರ ನಮ್ಮ ಸಮಾಜದ ಜನರನ್ನು ಕಾಟಾಚಾರದ ಓಲೈಕೆ ಮಾಡುವುದು ಅವರ ಹವ್ಯಾಸವಾಗಿದೆ ಎಂದು ನಾಟೀಕಾರ್ ದೂರಿದರು.