ನೇಹಾ ಹತ್ಯೆ: ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯಲಿ

KannadaprabhaNewsNetwork |  
Published : May 04, 2024, 12:37 AM IST
ಈಚೆಗೆ ಹತ್ಯೆಗೀಡಾಗಿದ್ದ ನೇಹಾ ಹಿರೇಮಠ ನಿವಾಸಕ್ಕೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. | Kannada Prabha

ಸಾರಾಂಶ

ಈಗಾಗಲೇ ಸರ್ಕಾರ ಎಸ್‌ಐಟಿ ನೇಮಕ ಮಾಡಿದ್ದು, ಸಮರ್ಪಕ ತನಿಖೆ ನಡೆಸುತ್ತಿದ್ದಾರೆ. ಈ ಕೃತ್ಯದ ಹಿಂದೆ ಒಳಸಂಚು ಏನಾದರೂ ಇದೆಯಾ? ಕೃತ್ಯ ಎಸಗುವಾಗ ಯಾರಾದರೂ ಸಹಕಾರ ಕೊಟ್ಟಿದ್ದಾರಾ? ಕೃತ್ಯ ನಡೆದ ನಂತರ ಸಾಕ್ಷಿ ನಾಶ ಮಾಡುವ ಸಂಚು ನಡೆದಿದೆಯೇ? ಅಪರಾಧ ಮುಚ್ಚಿಹಾಕುವ ಪ್ರಯತ್ನದ ಬಗ್ಗೆಯೂ ಸಂಪೂರ್ಣ ತನಿಖೆಯಾಗಬೇಕು.

ಹುಬ್ಬಳ್ಳಿ:

ನೇಹಾ ಹತ್ಯೆ ಪ್ರಕರಣ ಕುರಿತು ಎಸ್‌ಐಟಿ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ವಿಧಿಸಬೇಕೆಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಒತ್ತಾಯಿಸಿದರು.

ಅವರು ಇಲ್ಲಿನ ಬಿವಿಬಿ ಕಾಲೇಜಿನ ಆವರಣದಲ್ಲಿ ಬರ್ಬರವಾಗಿ ಹತ್ಯೆಗೀಡಾಗಿದ್ದ ನೇಹಾ ಹಿರೇಮಠ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿ ಕುಟುಂಬವರಿಗೆ ಸಾಂತ್ವನ ಹೇಳಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಹತ್ಯೆ ಖಂಡನೀಯ, ನೇಹಾ ಕುಟುಂಬದೊಂದಿಗೆ ಹಿಂದುಳಿದ ಆಯೋಗವಿದೆ. ಈ ಬಗ್ಗೆ ಸರ್ಕಾರ, ಎಸ್‌ಐಟಿ ಸಂಪೂರ್ಣ ತನಿಖೆಯಾಗಬೇಕೆಂದು ಒತ್ತಾಯಿಸಿದರು.

ಈಗಾಗಲೇ ಸರ್ಕಾರ ಎಸ್‌ಐಟಿ ನೇಮಕ ಮಾಡಿದ್ದು, ಸಮರ್ಪಕ ತನಿಖೆ ನಡೆಸುತ್ತಿದ್ದಾರೆ. ಈ ಕೃತ್ಯದ ಹಿಂದೆ ಒಳಸಂಚು ಏನಾದರೂ ಇದೆಯಾ? ಕೃತ್ಯ ಎಸಗುವಾಗ ಯಾರಾದರೂ ಸಹಕಾರ ಕೊಟ್ಟಿದ್ದಾರಾ? ಕೃತ್ಯ ನಡೆದ ನಂತರ ಸಾಕ್ಷಿ ನಾಶ ಮಾಡುವ ಸಂಚು ನಡೆದಿದೆಯೇ? ಅಪರಾಧ ಮುಚ್ಚಿಹಾಕುವ ಪ್ರಯತ್ನದ ಬಗ್ಗೆಯೂ ಸಂಪೂರ್ಣ ತನಿಖೆಯಾಗಬೇಕು. ಸರ್ಕಾರ ಇಚ್ಛಿಸಿದರೆ ತನಿಖೆಗೆ ನಾನು ಮಾರ್ಗದರ್ಶನ ನೀಡುತ್ತೇನೆ ಎಂದರು‌.

ಈ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಆರೋಪಿಗೆ ಯಾವ ಶಿಕ್ಷೆ ಆಗುತ್ತದೆ ಎಂದು ಇಡೀ ರಾಷ್ಟ್ರದ ಜನತೆ ನೋಡುತ್ತಿದೆ. ಈ ಪ್ರಕರಣದಲ್ಲಿ ಆರೋಪಿಗೆ ಕಠಿಣವಾದ ಶಿಕ್ಷೆ ವಿಧಿಸುವ ಮೂಲಕ ಜನರ ನಂಬಿಕೆ ಉಳಿಸಿಕೊಳ್ಳಬೇಕು ಎಂದು ಹೇಳಿದರು.

ಈ ವೇಳೆ ನೇಹಾ ತಂದೆ ನಿರಂಜನ ಹಿರೇಮಠ, ಮುಖಂಡರಾದ ಮುಕ್ತಾರ ಪಠಾಣ್, ಮೋಸಿನ್, ಇಮ್ತಿಯಾಜ್, ಕಲಂದರ್, ಸಂಜಯ ಜೈನ್, ಅಲ್ಲಾಭಕ್ಷ, ದಿಲೀಪ್ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ