ನೆಲಜಿ: ಕೆಸರುಮಯ ರಸ್ತೆ ದುರಸ್ತಿಗೆ ಆಗ್ರಹ

KannadaprabhaNewsNetwork |  
Published : Aug 22, 2026, 02:30 AM IST
ರಸ್ತೆ ದುರಸ್ತಿಗೆ ಆಗ್ರಹ | Kannada Prabha

ಸಾರಾಂಶ

ನೆಲಜಿ ಗ್ರಾಮದ ರಸ್ತೆಗಳ ದುಃಸ್ಥಿತಿಯಿಂದ ಗ್ರಾಮಸ್ಥರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಬಲ್ಲಮಾವಟ್ಟಿ ಗ್ರಾಪಂನ ನೆಲಜಿ ಗ್ರಾಮದಲ್ಲಿ ರಸ್ತೆ ಕೆಸರುಮಯವಾಗಿದ್ದು, ನಡೆದಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಿದೆ.

ನಾಪೋಕ್ಲು: ನೆಲಜಿ ಗ್ರಾಮದ ರಸ್ತೆಗಳ ದುಃಸ್ಥಿತಿಯಿಂದ ಗ್ರಾಮಸ್ಥರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಬಲ್ಲಮಾವಟ್ಟಿ ಗ್ರಾಪಂನ ನೆಲಜಿ ಗ್ರಾಮದಲ್ಲಿ ರಸ್ತೆ ಕೆಸರುಮಯವಾಗಿದ್ದು, ನಡೆದಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಿದೆ.

ಇಲ್ಲಿನ ಮೇದರ ಕಾಲೊನಿ, ತುಂಬೇರ ಹಾಗೂ ಮಾಚಿಕಂಡ ಕುಟುಂಬಸ್ಥರ ಮನೆಗಳಿಗೆ ತೆರಳುವ ರಸ್ತೆಯಲ್ಲಿ ಸಂಚರಿಸುವವರ ಪಾಡು ಹೇಳತೀರದಾಗಿದೆ. ಕೆಸರುಮಯ ರಸ್ತೆಯಲ್ಲಿ ವಿದ್ಯಾರ್ಥಿಗಳನ್ನು ಹೊತ್ತುಕೊಂಡು ನಡೆದುಕೊಂಡು ಹೋಗುವಂತಾಗಿದೆ.

ಈ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಇದ್ದು, ಆಟೋ ಚಾಲಕರು ಸಂಜೆ ವೇಳೆಗೆ ಈ ಭಾಗಕ್ಕೆ ಬರಲು ಹಿಂದೇಟು ಹಾಕುತ್ತಾರೆ. ಜೊತೆಗೆ ಕೆಸರಮಯ ರಸ್ತೆಯಲ್ಲಿ ವಾಹನಗಳು ಮುಂದೆ ಸಾಗುತ್ತಿಲ್ಲ. ಇದರಿಂದ ಗ್ರಾಮಸ್ಥರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಸಂಬಂಧಪಟ್ಟವರು ಹಾಗೂ ಶಾಸಕರು ರಸ್ತೆ ದುರಸ್ತಿಗೆ ಮುಂದಾಗಿ ಜನರ ಬವಣೆಯನ್ನು ಪರಿಹರಿಸಿಕೊಡಬೇಕೆಂದು ಮಾಚಿಕಂಡ ಗಣೇಶ್ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಈ ರಸ್ತೆ ಅಭಿವೃದ್ಧಿಗೆ ಶಾಸಕರ ಅನುದಾನದಿಂದ ಎಸ್‌ಸಿ, ಎಸ್‌ಟಿ ಕೋಟಾದಲ್ಲಿ ಹಣ ಮಂಜೂರಾಗಿದ್ದು, ಮಳೆ ಕಡಿಮೆಯಾದ ಕೂಡಲೇ ಕಾಮಗಾರಿ ನಡೆಯಲಿದೆ. -ಚೌರಿರ ಶರತ್‌, ಬಲ್ಲಮಾವಟ್ಟಿ ಗ್ರಾಪಂ ಅಭಿವೃದ್ಧಿ ಅಧಿಕಾರಿ.

ಮನೆಗಳಿಗೆ ತೆರಳುವ ರಸ್ತೆಯ ದುಸ್ಥಿತಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಲಮಟ್ಟಿ ಜಲಾಶಯ ಪರಿಶೀಲಿಸಿದ ತಜ್ಞರ ತಂಡ
ಎಸ್ಡಿಎಂಎಫ್ ಕಾಮಗಾರಿ ಪರಿಶೀಲಿಸಿದ ಡಿಸಿ