ಮುದ್ದಂಡ ಕಪ್ ಹಾಕಿ ಉತ್ಸವ : ನೆಲ್ಲಮಕ್ಕಡ, ಕೂತಂಡ, ಪುದಿಯೊಕ್ಕಡ, ಕರವಂಡ ತಂಡಕ್ಕೆ ಜಯ

KannadaprabhaNewsNetwork |  
Published : Apr 24, 2025, 12:01 AM IST
ಚಿತ್ರ :  26ಎಂಡಿಕೆ6 : ನೆಲ್ಲಮಕ್ಕಡ ಮತ್ತು ಕೋಳೇರ ನಡುವಿನ ಪಂದ್ಯ. | Kannada Prabha

ಸಾರಾಂಶ

ಮುದ್ದಂಡ ಹಾಕಿ ಕಪ್‌ನ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ನೆಲ್ಲಮಕ್ಕಡ, ಕೂತಂಡ, ಪುದಿಯೊಕ್ಕಡ, ಕರವಂಡ ತಂಡಗಳು ಜಯ ಸಾಧಿಸಿವೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮುದ್ದಂಡ ಹಾಕಿ ಕಪ್ ನ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೆಲ್ಲಮಕ್ಕಡ, ಕೂತಂಡ, ಪುದಿಯೊಕ್ಕಡ, ಕರವಂಡ ತಂಡಗಳು ಜಯ ಸಾಧಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿವೆ.

ನೆಲ್ಲಮಕ್ಕಡ ಮತ್ತು ಕೋಳೇರ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ನೆಲ್ಲಮಕ್ಕಡ ಗೆಲುವು ದಾಖಲಿಸಿತು. ನೆಲ್ಲಮಕ್ಕಡ ಪರ ಸಚಿನ್, ರಾಕೇಶ್ ಸುಬ್ರಮಣಿ, ರೋಶನ್ ಬೋಪಣ್ಣ ಹಾಗೂ ಅಯ್ಯಪ್ಪ ತಲಾ 1 ಗೋಲು ದಾಖಲಿಸಿದರು. ಕೋಳೇರ ನಿಶಿಕ್ ನಾಚಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಕೂತಂಡ ಮತ್ತು ಅಮ್ಮಣಿಚಂಡ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಕೂತಂಡ ಜಯ ಸಾಧಿಸಿತು. ಕೂತಂಡ ಪರ ಬೋಪಣ್ಣ 4 ಗೋಲು ದಾಖಲಿಸಿ ಗಮನ ಸೆಳೆದರೆ, ಸುರೇಶ್ ಅಪ್ಪಯ್ಯ 1 ಗೋಲು ಬಾರಿಸಿದರು. ಅಮ್ಮಣಿಚಂಡ ಯಶ್ವಂತ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ನಾಳಿಯಂಡ ಮತ್ತು ಪುದಿಯೊಕ್ಕಡ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಪುದಿಯೊಕ್ಕಡ ಜಯ ಸಾಧಿಸಿತು. ಪುದಿಯೊಕ್ಕಡ ಪರ ಮಿಥನ್ ಪೊನ್ನಪ್ಪ ಹಾಗೂ ವಿಪನ್ ಸೋಮಯ್ಯ ತಲಾ 1 ಗೋಲು ದಾಖಲಿಸಿದರು. ನಾಳಿಯಂಡ ಪರ ಚರಣ್ ಚಿಣ್ಣಪ್ಪ 1 ಗೋಲು ಬಾರಿಸಿದರು. ನಾಳಿಯಂಡ ರತ್ನ ಬೆಳ್ಯಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಕರವಂಡ ಮತ್ತು ಕಾಂಡಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ತಲಾ 2 ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 2-1 ಗೋಲುಗಳ ಅಂತರದಲ್ಲಿ ಕರವಂಡ ಜಯ ಸಾಧಿಸಿತು. ಕರವಂಡ ಪರ ಕೃತನ್ ಅಪ್ಪಚ್ಚು 2 ಗೋಲು ದಾಖಲಿಸಿದರು. ಕಾಂಡಂಡ ಪರ ಆದಿತ್ಯ ಅಪ್ಪಣ್ಣ ಹಾಗೂ ಕೌಶಿಕ್ ಕುಶಾಲಪ್ಪ ತಲಾ 1 ಗೋಲು ಬಾರಿಸಿದರು. ಕಾಂಡಂಡ ಕೌಶಿಕ್ ಕುಶಾಲಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ