ಮಂದಗಮನೆಯಾದ ನೇತ್ರಾವತಿ

KannadaprabhaNewsNetwork |  
Published : Jul 03, 2026, 03:00 AM IST
ಗುರುವಾರದಂದು ಮಳೆ ಕಡಿಮೆ ಸುರಿದಿದ್ದು, ಜಿಲ್ಲೆಯ ಜೀವ ನದಿ ನೇತ್ರಾವತಿ  ಶಾಂತವಾಗಿ ಹರಿಯುತ್ತಿದ್ದ ದೃಶ್ಯ ಕಂಡು ಬಂದಿತ್ತು.  | Kannada Prabha

ಸಾರಾಂಶ

ಗುರುವಾರ ಮಳೆ ಕಡಿಮೆ ಸುರಿದಿದ್ದು ಜಿಲ್ಲೆಯ ಜೀವ ನದಿ ನೇತ್ರಾವತಿ ಶಾಂತವಾಗಿ ಹರಿಯುತ್ತಿದ್ದ ದೃಶ್ಯ ಕಂಡುಬಂತು. ಗುರುವಾರ ಮುಂಜಾನೆ ಬಿರುಸಿನ ಮಳೆ ಸುರಿದಿದ್ದರೆ ಬಳಿಕ ಮಳೆಯ ಪ್ರಮಾಣ ತೀರಾ ಕಡಿಮೆ ಇತ್ತು. ಆಕಾಶದಲ್ಲಿ ಮೋಡ ಕವಿದ ವಾತಾವರಣ ಇತ್ತಾದರೂ ಇಡೀ ದಿನದಲ್ಲಿ ಮೂರ್ನಾಲ್ಕು ಬಾರಿ ಹಗುರ ಮಳೆಯಾಗಿತ್ತು.

ಉಪ್ಪಿನಂಗಡಿ: ಗುರುವಾರ ಮಳೆ ಕಡಿಮೆ ಸುರಿದಿದ್ದು ಜಿಲ್ಲೆಯ ಜೀವ ನದಿ ನೇತ್ರಾವತಿ ಶಾಂತವಾಗಿ ಹರಿಯುತ್ತಿದ್ದ ದೃಶ್ಯ ಕಂಡುಬಂತು. ಗುರುವಾರ ಮುಂಜಾನೆ ಬಿರುಸಿನ ಮಳೆ ಸುರಿದಿದ್ದರೆ ಬಳಿಕ ಮಳೆಯ ಪ್ರಮಾಣ ತೀರಾ ಕಡಿಮೆ ಇತ್ತು. ಆಕಾಶದಲ್ಲಿ ಮೋಡ ಕವಿದ ವಾತಾವರಣ ಇತ್ತಾದರೂ ಇಡೀ ದಿನದಲ್ಲಿ ಮೂರ್ನಾಲ್ಕು ಬಾರಿ ಹಗುರ ಮಳೆಯಾಗಿತ್ತು.

ಪರಿಸರದಾದ್ಯಂತ ಕಡಿಮೆ ಮಳೆಯಾದ ಕಾರಣಕ್ಕೆ ನದಿಯ ನೀರಿನ ಹರಿಯುವಿಕೆ ತೀರಾ ಮಂದ ಗತಿಯಲ್ಲಿ ಕಂಡು ಬಂದಿದೆ. ಉಪ್ಪಿನಂಗಡಿಯಲ್ಲಿ ನದಿಯ ನೀರಿನ ಮಟ್ಟ ಸಮುದ್ರ ಮಟ್ಟಕ್ಕಿಂತ ೨೪.೫ ಮೀಟರ್ ಎತ್ತರದಲ್ಲಿ ಕಂಡುಬಂದಿತ್ತು. ಇಲ್ಲಿ ಅಪಾಯದ ಮಟ್ಟ ೩೧.೫ ಮೀಟರ್ ಆಗಿದೆ.

ಶಾಲೆ ಕಾಲೇಜುಗಳಿಗೆ ರಜೆ: ಜಿಲ್ಲಾಧಿಕಾರಿಯವರ ಆದೇಶವನ್ನು ಪಾಲಿಸಿದ್ದ ಎಲ್ಲ ಶಿಕ್ಷಣ ಸಂಸ್ಥೆಗಳು ಗುರುವಾರದಂದು ರಜೆ ಸಾರಿದ್ದು, ಕೆಲ ಮಕ್ಕಳು ಸಾದಾ ಉಡುಪಿನಲ್ಲಿ ಖಾಸಗಿಯಾಗಿ ನಡೆಸಲಾಗುತ್ತಿರುವ ತಮ್ಮ ಟ್ಯೂಷನ್ ತರಗತಿಗೆ ಹೋಗುತ್ತಿದ್ದ ದೃಶ್ಯ ಕಾಣಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೃತ್ತಿ ಜೊತೆ ನಾಡಗೌಡರ ಸೇವೆ ಅನುಪಮ
ಯೋಗ, ಧ್ಯಾನದಿಂದ ಆರೋಗ್ಯ ವೃದ್ಧಿ