ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಯೋಗ ಹಾಗೂ ಧ್ಯಾನದಿಂದ ಆರೋಗ್ಯ ವೃದ್ಧಿಯಾಗಿ ಮನಸ್ಸಿಗೆ ನೆಮ್ಮದಿ ಲಭಿಸಲು ಸಾಧ್ಯವೆಂದು ವೈದ್ಯ ಡಾ.ಪರುಶರಾಮ್ ವಡ್ಡರ ಅಭಿಪ್ರಾಯ ಪಟ್ಟರು. ಪಟ್ಟಣದ ರಾಜ್ಯ ಸರಕಾರಿ ನೌಕರರ ಭವನದಲ್ಲಿ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ ಆಯೋಜಿಸಿದ್ದ ಮಾಸಿಕ ಸಭೆಯಲ್ಲಿ ಹಿರಿಯರು ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಉಪನ್ಯಾಸ ನೀಡಿದರು. 60 ವರ್ಷ ದಾಟಿದ ಹಿರಿಯರ ದೇಹದಲ್ಲಿ ಮೂಳೆಗಳು ಸವಕಳಿಯಾಗುತ್ತವೆ. ಇಂತಹ ಸಂದರ್ಭದಲ್ಲಿ ಆದಷ್ಟು ಓಡುವುದು, ಜಿಗಿಯುವುದು, ಬಿರುಸಿನ ನಡಿಗೆಗಳನ್ನು ಮಾಡಬೇಡಿ. ಎಚ್ಚರಿಕೆಯಿಂದ ಹೆಜ್ಜೆಗಳನ್ನು ಇಡಬೇಕು ಎಂದು ಕಿವಿಮಾತು ಹೇಳಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಯೋಗ ಹಾಗೂ ಧ್ಯಾನದಿಂದ ಆರೋಗ್ಯ ವೃದ್ಧಿಯಾಗಿ ಮನಸ್ಸಿಗೆ ನೆಮ್ಮದಿ ಲಭಿಸಲು ಸಾಧ್ಯವೆಂದು ವೈದ್ಯ ಡಾ.ಪರುಶರಾಮ್ ವಡ್ಡರ ಅಭಿಪ್ರಾಯ ಪಟ್ಟರು.ಪಟ್ಟಣದ ರಾಜ್ಯ ಸರಕಾರಿ ನೌಕರರ ಭವನದಲ್ಲಿ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ ಆಯೋಜಿಸಿದ್ದ ಮಾಸಿಕ ಸಭೆಯಲ್ಲಿ ಹಿರಿಯರು ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಉಪನ್ಯಾಸ ನೀಡಿದರು. 60 ವರ್ಷ ದಾಟಿದ ಹಿರಿಯರ ದೇಹದಲ್ಲಿ ಮೂಳೆಗಳು ಸವಕಳಿಯಾಗುತ್ತವೆ. ಇಂತಹ ಸಂದರ್ಭದಲ್ಲಿ ಆದಷ್ಟು ಓಡುವುದು, ಜಿಗಿಯುವುದು, ಬಿರುಸಿನ ನಡಿಗೆಗಳನ್ನು ಮಾಡಬೇಡಿ. ಎಚ್ಚರಿಕೆಯಿಂದ ಹೆಜ್ಜೆಗಳನ್ನು ಇಡಬೇಕು ಎಂದು ಕಿವಿಮಾತು ಹೇಳಿದರು.ಪೂಜ್ಯ ಸಿದ್ದೇಶ್ವರ ಶ್ರೀಗಳಂತಹ ದಾರ್ಶನಿಕರ, ತತ್ವಜ್ಞಾನಿಗಳ ನುಡಿಮುತ್ತುಗಳನ್ನು ಆಲಿಸಿರಿ. ವಿನಾಕಾರಣ ಮತ್ತೊಬ್ಬರ ವಿಷಯದಲ್ಲಿ ಮೂಗು ತೂರಿಸಿ ಬುದ್ಧಿಹೇಳಲು ಹೋಗಬೇಡಿ. ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಸಹಿತ ಅಲಕ್ಷ ಮಾಡದೇ ತಜ್ಞ ವೈದ್ಯರನ್ನು ಸಂಪರ್ಕಿಸಿರಿ ಎಂದು ಸಲಹೆ ನೀಡಿದರು.ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳೆಂದರೆ ತಾತ್ಸಾರ ಬೇಡ. ಮುದ್ದೇಬಿಹಾಳ ತಾಲೂಕು ಆಸ್ಪತ್ರೆಯೂ ಸುಸಜ್ಜಿತವಾಗಿದ್ದು, ಅಲ್ಲಿ ಗುಣಮಟ್ಟದ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತದೆ. ಸರ್ಜನ್‌ರು, ಚಿಕ್ಕಮಕ್ಕಳ ತಜ್ಞರೂ ಸೇರಿದಂತೆ ಹಲವು ಅನುಭವಿ ವೈದ್ಯರಿದ್ದಾರೆ. ನುರಿತ ಸಿಬ್ಬಂದಿ ತಂಡವೇ ಅಲ್ಲಿದೆ. ಸರ್ಕಾರ ಬಿಪಿಎಲ್, ಎಪಿಲ್, ಯಶಸ್ವಿನಿ ಕಾರ್ಡ್ ಮುಂತಾದ ಕಾರ್ಡಗಳಿದ್ದರೆ ಅವುಗಳನ್ನು ಬಳಸಿಕೊಳ್ಳಿ. ಸರ್ಕಾರದ ಸಂಧ್ಯಾಕಿರಣ ಯೋಜನೆ, ಆರೋಗ್ಯಭಾಗ್ಯಯೋಜನೆ (ಆಯುಷ್ಮಾನ್ ಭಾರತ್)ಗಳ ಲಾಭ ಪಡೆಯಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ಔಷಧಿಗಳು, ವೈದ್ಯಕೀಯ ವಸ್ತುಗಳಿವೆ ಅವುಗಳನ್ನು ಉಪಯೋಗಿಸುವಂತೆ ತಿಳಿಸಿದರು.ಸಂಘದ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ಅಶೋಕ ಮಣಿ ಮಾತನಾಡಿ, ಮನೆಯಲ್ಲಿ ನಮ್ಮ ಮಾತನ್ನು ಕೇಳಲೇಬೇಕೆಂದು ಅವರ ಮೇಲೆ ಹೆಚ್ಚು ಒತ್ತಡ ಹೇರಿ ದರ್ಪ ತೋರಬೇಡಿ. ಚಿಕ್ಕವರ ಮಾತಿಗೂ ಮನ್ನಣೆ ಕೊಡಬೇಕು. ಇಲ್ಲದಿದ್ದರೆ ಮನೆಯಲ್ಲಿ ಕಲಹವುಂಟಾಗಿ, ಶಾಂತಿ ಕದಡಿ ನೆಮ್ಮದಿಯ ವಾತಾವರಣವೇ ಕೆಟ್ಟು ಹೋಗುತ್ತದೆ. ವಯಸ್ಸಾದಂತೆ, ಸಹನೆ, ತಾಳ್ಮೆಯ ಗುಣ ಕಡಿಮೆಯಾಗಿ ರಕ್ತದಒತ್ತಡ ಹೆಚ್ಚಾಗುತ್ತದೆ. ಅದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಜೀವನದ ಸಂಧ್ಯಾಕಾಲದಲ್ಲಿ ಹೊಂದಾಣಿಕೆಯಿಂದ ಬದುಕಬೇಕು. ಅಲ್ಲದೇ, ಮಾಸಿಕ ಸಭೆಯಲ್ಲಿ ಆರೋಗ್ಯ ಶಿಬಿರ ಏರ್ಪಡಿಸುತ್ತೇವೆ. ಇಲ್ಲಿ ಬಿಪಿ, ಶುಗರ್, ಮೂತ್ರ ಮುಂತಾದ ತಪಾಸಣೆಗಳನ್ನು ಉಚಿತವಾಗಿ ನಮ್ಮ ಸಂಘದ ಸದಸ್ಯರಿಗೆ ಮಾಡಿಕೊಡಬೇಕೆಂದು ಮನವಿ ಮಾಡಿದರು.ಹಿರಿಯರ ಸದಸ್ಯ ಎಸ್.ಎಸ್.ಹೂಗಾರ, ಜಿ.ಸಿ.ಅಂಗಡಿ, ಆರ್.ಜಿ.ಧನಶೆಟ್ಟಿ, ಬಸವರಾಜ ಲಿಂಗದಳ್ಳಿ, ಡಾ.ಎಸ್.ವ್ಹಿ.ಒಡ್ಡೊಡಗಿ, ಪ್ರೊ.ಬಿ.ಎನ್.ಚೌಡಾಪೂರ, ರಾಜಶೇಖರ ಮೇಗೇರಿ, ಬಿ.ವ್ಹಿ.ಕೋರಿ, ಬಸವರಾಜ ನಾಲತವಾಡ, ಯು.ಕೆ.ಭಾಗವಾನ, ಸಿ.ಜಿ.ನಾಗರಾಳ,ಡಿ.ಬಿ.ಓಲೇಕಾರ ,ಎಚ್.ಬಿ.ದಳವಾಯಿ.ಎ.ಎಚ್.ಬಿರಾದಾರ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಪಾಲ್ಗೊಂಡಿದ್ದರು.ಸಂಘದ ಗೌರವಾಧ್ಯಕ್ಷ ಬಾಪುಗೌಡ ಪಾಟೀಲ ಪ್ರಾರ್ಥಿಸಿದರು. ಕೋಶಾಧ್ಯಕ್ಷ ಬಿ.ಎಚ್.ಬಳಳಬಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ಎಸ್.ಎಸ್.ಭೂತಲ್ ಸ್ವಾಗತಿಸಿದರು. ಮಹಾದೇವಿ ಕಂಠಿ ವಂದಿಸಿದರು.