ನಾಯಿಗಳ ನಿಯಂತ್ರಣಕ್ಕೆ ಶೀಘ್ರದಲ್ಲಿಯೇ ಸಂತಾನಹರಣ ಶಸ್ತ್ರಚಿಕಿತ್ಸೆ

KannadaprabhaNewsNetwork |  
Published : Jul 06, 2024, 12:47 AM IST
4ಶಿರಾ1: ಶಿರಾ ನಗರದ ಪಶು ಇಲಾಖೆ ಆವರಣದಲ್ಲಿ ನಗರಸಭೆ ಹಾಗೂ ಪಶು ಇಲಾಖೆ ವತಿಯಿಂದ ರೇಬಿಸ್ ರೋಗದ ಅರಿವು ಮತ್ತು ಲಸಿಕೆ ಶಿಬಿರಕ್ಕೆ ನಗರಸಭೆ ಅಧ್ಯಕ್ಷ ಪೂಜಾ ಪೆದ್ದರಾಜು ಚಾಲನೆ ನೀಡಿದರು. ಪೌರಾಯುಕ್ತ ರುದ್ರೇಶ್, ಪಶು ಅಧಿಕಾರಿ ಡಾ.ರಮೇಶ್ ಸೇರಿದಂತೆ ಹಲವರು ಹಾಜರಿದ್ದರು. | Kannada Prabha

ಸಾರಾಂಶ

ನಗರದಲ್ಲಿ ಇತ್ತೀಚೆಗೆ ನಾಯಿಗಳ ಹಾವಳಿ ಹೆಚ್ಚಾದ ಹಿನ್ನೆಲೆ ಪ್ರತಿಯೊಂದು ನಾಯಿಗೂ ರೋಗ ನಿರೋಧಕ ರೇಬಿಸ್ ಲಸಿಕೆಗಳನ್ನು ಹಾಕಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ರೇಬಿಸ್ ಕಾಯಿಲೆ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ನಗರಸಭೆ ಅಧ್ಯಕ್ಷೆ ಪೂಜಾ ಪೆದ್ದರಾಜು ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ನಗರದಲ್ಲಿ ಇತ್ತೀಚೆಗೆ ನಾಯಿಗಳ ಹಾವಳಿ ಹೆಚ್ಚಾದ ಹಿನ್ನೆಲೆ ಪ್ರತಿಯೊಂದು ನಾಯಿಗೂ ರೋಗ ನಿರೋಧಕ ರೇಬಿಸ್ ಲಸಿಕೆಗಳನ್ನು ಹಾಕಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ರೇಬಿಸ್ ಕಾಯಿಲೆ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ನಗರಸಭೆ ಅಧ್ಯಕ್ಷೆ ಪೂಜಾ ಪೆದ್ದರಾಜು ಹೇಳಿದರು.ನಗರದ ಪಶು ಇಲಾಖೆ ಆವರಣದಲ್ಲಿ ನಗರಸಭೆ ಹಾಗೂ ಪಶು ಇಲಾಖೆ ವತಿಯಿಂದ ರೇಬಿಸ್ ರೋಗದ ಅರಿವು ಮತ್ತು ಲಸಿಕೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ನಾಯಿಗಳ ನಿಯಂತ್ರಣಕ್ಕೆ ನಗರಸಭೆ ವತಿಯಿಂದ ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ತಿಳಿಸಿದರು.

ಕಳೆದ ಹಲವು ದಿನಗಳಿಂದ ಬೀದಿ ನಾಯಿಗಳು ಹಲವರಿಗೆ ಕಚ್ಚಿರುವ ಬಗ್ಗೆ ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ನಗರಸಭೆಯಿಂದ ಸಾಕು ನಾಯಿ ಹಾಗೂ ಬೀದಿ ನಾಯಿಗಳಿಗೆ ಆ್ಯಂಟಿ ರೇಬಿಸ್ ಲಸಿಕೆಗಳನ್ನು ಹಾಕಲು ಕ್ರಮ ಕೈಗಳ್ಳಲಾಗಿದೆ. ಸಾಂಕೇತಿಕವಾಗಿ ಪಶು ಆಸ್ಪತ್ರೆಯ ಬಳಿ ಉದ್ಘಾಟಿಸಲಾಗಿದ್ದು, ಇನ್ನುಳಿದ ನಾಯಿಗಳು ಇರುವ ಸ್ಥಳಕ್ಕೆ ತೆರಳಿ ರೋಗ ನಿರೋಧಕ ರೇಬಿಸ್ ಲಸಿಕೆ ಹಾಕಲಾಗುವುದು. ಸಾಕು ನಾಯಿಗಳ ಮಾಲೀಕರು ನಗರಸಭೆ ವತಿಯಿಂದ ಲಸಿಕೆ ಹಾಕುವವರು ಬಂದಾಗ ತಮ್ಮ ನಾಯಿಗಳನ್ನು ಮನೆಯಲ್ಲಿಯೇ ಕಟ್ಟಿ ಹಾಕಿ ಲಸಿಕೆ ಹಾಕಿಸಲು ಸಹಕರಿಸಬೇಕು ಎಂದರು.

ನಗರಸಭೆ ಪೌರಾಯುಕ್ತ ರುದ್ರೇಶ್ ಮಾತನಾಡಿ, ಶಿರಾ ನಗರದಲ್ಲಿ ಕಳೆದ ಎರಡು ದಿನಗಳ ಹಿಂದ ಹುಚ್ಚು ನಾಯಿಯೊಂದು ಹಲವರಿಗೆ ಕಚ್ಚಿ ಇನ್ನೂ ಕೆಲವರಿಗೆ ಪರಚಿ ಗಾಯಗೊಳಿಸಿತ್ತು. ಇದರಿಂದ ನಗರದ ಸಾರ್ವಜನಿಕರ ಸುರಕ್ಷತೆಗಾಗಿ ಬೀದಿ ನಾಯಿಗಳಿಗೆ ರೋಗ ನಿರೋಧಕ ರೇಬಿಸ್ ಲಸಿಕೆ ಹಾಕಿಸಲು ನಗರಸಭೆಯಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ತಾಲೂಕು ಪಶು ವೈದ್ಯಾಧಿಕಾರಿ ಡಾ.ರಮೇಶ್ ಮಾತನಾಡಿದರು. ಮುಖ್ಯ ಪಶು ವೈದ್ಯಾಧಿಕಾರಿ ಡಾ.ನಾಗೇಶ್, ದಯಾನಂದ್, ನಗರಸಭೆ ಪರಿಸರ ಅಭಿಯಂತರರಾದ ಪಲ್ಲವಿ, ಆರೋಗ್ಯ ನಿರೀಕ್ಷಕರಾದ ಮಾರೇಗೌಡ ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ