ದೇಶದ ಪ್ರಗತಿಗೆ ನಿರಂತರವಾಗಿ ಶ್ರಮಿಸಿ ಇಂದು 12 ವರ್ಷ ಪೂರೈಸಿ ನೆಹರು ದಾಖಲೆ ಮುರಿದ ಮಹಾನ್ ನಾಯಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎಂದು ಮಂಡಲ ಅಧ್ಯಕ್ಷ ಬಲರಾಮಣ್ಣ ತಿಳಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ದೇಶದ ಪ್ರಗತಿಗೆ ನಿರಂತರವಾಗಿ ಶ್ರಮಿಸಿ ಇಂದು 12 ವರ್ಷ ಪೂರೈಸಿ ನೆಹರು ದಾಖಲೆ ಮುರಿದ ಮಹಾನ್ ನಾಯಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎಂದು ಮಂಡಲ ಅಧ್ಯಕ್ಷ ಬಲರಾಮಣ್ಣ ತಿಳಿಸಿದರು.ಗುಬ್ಬಿ ಪಟ್ಟಣದ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ 12 ವರ್ಷ ಪ್ರಧಾನಮಂತ್ರಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, 2014ರಿಂದ ಆರಂಭವಾದ ಅಭಿವೃದ್ಧಿಯ ಪಯಣವು ಇಂದು ಇನ್ನಷ್ಟು ಬಲಿಷ್ಠವಾಗಿ ಮುಂದುವರಿಯುತ್ತಿದ್ದು, ದೇಶಸೇವೆ, ರಾಷ್ಟ್ರಭಕ್ತಿ ಮತ್ತು ಜನಕಲ್ಯಾಣದ ಸಂಕಲ್ಪದೊಂದಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ನಿರ್ಮಿಸುವ ಗುರಿ ಇನ್ನಷ್ಟು ವೇಗ ಪಡೆಯಲಿದೆ. ಜನಸೇವೆಯಲ್ಲಿ 4399 ದಿನಗಳ ಐತಿಹಾಸಿಕ ದಾಖಲೆ ಮಾಡಿದ ಪ್ರಧಾನಸೇವಕ. ಈ ಹಿಂದೆ ನೆಹರೂ ಅವರು 4388 ದಿನಗಳ ಕಾಲ ಸೇವೆ ಮಾಡಿದ್ದರು ಎಂದು ತಿಳಿಸಿದರು.ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಚಂದ್ರಶೇಖರ್ ಬಾಬು ಮಾತನಾಡಿ, ಅಭಿವೃದ್ಧಿ, ಆತ್ಮನಿರ್ಭರ ಭಾರತ, ಡಿಜಿಟಲ್ ಕ್ರಾಂತಿ, ಮೂಲ ಸೌಕರ್ಯ ವಿಸ್ತರಣೆ, ಜಾಗತಿಕ ಮಟ್ಟದಲ್ಲಿ ಭಾರತದ ಗೌರವವನ್ನು ಮತ್ತಷ್ಟು ಎತ್ತರಕ್ಕೇರಿಸಿವೆ. ದೂರದೃಷ್ಟಿಯ ನಾಯಕತ್ವದಿಂದ ದೇಶಕ್ಕೆ ಹೊಸ ದಿಕ್ಕು ತೋರಿದೆ. ಭಾರತದ ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ ಪ್ರಧಾನಮಂತ್ರಿಯಾಗಿ ಹೊಸ ಮೈಲಿಗಲ್ಲು ನಿರ್ಮಿಸಿರುವ ನರೇಂದ್ರ ಮೋದಿಯವರು. ಕಳೆದ 12 ವರ್ಷಗಳಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ಇಲ್ಲದೆ ಸುಗಮವಾಗಿ ಸರ್ಕಾರವನ್ನು ನಡೆಸಿಕೊಂಡು ಬಂದಿರುವ ಜೊತೆಗೆ ಅವರ ಸಂಪುಟ ಸಚಿವರು ಸಹ ನಿಷ್ಕಲ್ಮಶ ಅಧಿಕಾರ ನಡೆಸಿಕೊಂಡು ಬಂದಿದ್ದು, 2040 ರ ವೇಳೆಗೆ ವಿಶ್ವದ ನಂಬರ್ ಒಂದರ ಸ್ಥಾನಕ್ಕೆ ಭಾರತವನ್ನು ತರಬೇಕೆಂಬ ಅಭಿಲಾಷೆ ಮೋದಿ ಅವರಿಗೆ ಇದೆ ಎಂದರು.
ಮುಖಂಡ ಎಸ್.ಡಿ ದಿಲೀಪ್ ಮಾತನಾಡಿ ಜನಸೇವೆಯ ಪಥದಲ್ಲಿ ಐತಿಹಾಸಿಕ ಮೈಲಿಗಲ್ಲು ಸಾಧಿಸಿದ ಪ್ರಧಾನ ಸೇವಕ ಮೋದಿ. ಭಾರತದ ಅಭಿವೃದ್ಧಿ, ಸುಶಾಸನ ಮತ್ತು ಜನಕಲ್ಯಾಣಕ್ಕೆ ಸಮರ್ಪಿತ ನಾಯಕತ್ವದ ಮೂಲಕ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ದಾಖಲೆಯನ್ನು ಹಿಂದಿಕ್ಕಿ, ದೇಶದ ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿ ನಿರಂತರವಾಗಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಮಂತ್ರಿಯಾಗಿ ಹೊಸ ಅಧ್ಯಾಯ ಬರೆತ್ತಿದ್ದಾರೆ. ಸಂಕಲ್ಪದಿಂದ ಸಿದ್ಧಿಯತ್ತ ಎಂಬ ಧೈಯದೊಂದಿಗೆ ನವಭಾರತ ನಿರ್ಮಾಣದ ಪಯಣವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಪ್ರಧಾನಿ ಮೋದಿ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಬಿ.ಎಸ್ ಪಂಚಾಕ್ಷರಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದರಾಮಣ್ಣ, ಚನ್ನಶೆಟ್ಟಿಹಳ್ಳಿ ಯತೀಶ್, ತಾಲೂಕು ಉಸ್ತುವಾರಿ ರುದ್ರೇಶ್, ಹೆಚ್.ಟಿ ಬೈರಪ್ಪ, ಸಾಗರನಹಳ್ಳಿ ವಿಜಯ್ ಕುಮಾರ್, ಪ್ರಧಾನ ಕಾರ್ಯದರ್ಶಿ ರಾಜಶೇಖರ್, ವಿದ್ಯಾ ಸಾಗರ್, ಎನ್.ಸಿ ಪ್ರಕಾಶ್, ಕವಿತ,ನಂಜೇಗೌಡ, ಜಿ.ಆರ್.ಶಿವಕುಮಾರ್, ಅಣ್ಣಪ್ಪಸ್ವಾಮಿ, ಗಂಗಣ್ಣ, ಬಸವರಾಜು, ಚೇತನ್, ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.