ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿ ಆರ್‌ಎಸ್‌ಎಸ್‌ನ ಪಥಸಂಚಲನಗಳು ಹಾಗೂ ಶಾಖೆಗಳು ನಡೆಯುವಾಗ ಯಾವುದೇ ಅಹಿತಕರ ಘಟನೆಗಳು ಅಥವಾ ಗಲಭೆಗಳು ನಡೆದಿಲ್ಲ ಎಂದು ವಿಧಾನ ಪರಿಷತ್‌ನಲ್ಲಿ ನಾನು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಗೃಹ ಸಚಿವರೇ ಅಧಿಕೃತ ಉತ್ತರ ನೀಡಿದ್ದಾರೆ. ಈ ಅಧಿಕೃತ ಉತ್ತರವು ಆರ್‌ಎಸ್‌ಎಸ್ ವಿರುದ್ಧ ಅವರು ಮಾಡುತ್ತಿರುವ ಆರೋಪಗಳು ಮತ್ತು ರಾಜಕೀಯ ಅಪಪ್ರಚಾರಕ್ಕೆ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.
ದ್ವೇಷದ ಮುಖವಾಡ ಕಳಚಿದೆ:ದಾಖಲೆಗಳೇ ಸತ್ಯ ಹೇಳುತ್ತಿವೆ. ಗೃಹ ಸಚಿವರ ರಾಜಕೀಯ ದ್ವೇಷದ ಮುಖವಾಡ ಸಂಪೂರ್ಣ ಕಳಚಿದೆ. ರಾಷ್ಟ್ರಪ್ರೇಮವನ್ನೇ ತನ್ನ ಕಾರ್ಯದ ಆದರ್ಶವನ್ನಾಗಿ ಹೊಂದಿರುವ ಆರ್‌ಎಸ್‌ಎಸ್ ವಿರುದ್ಧ ಸದಾ ದ್ವೇಷ, ಅಸೂಯೆ ಮತ್ತು ಹಗೆತನದ ರಾಜಕಾರಣ ಮಾಡುತ್ತಾ ಬಂದಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಇದೀಗ ಅವರದೇ ಇಲಾಖೆಯ ಅಧಿಕೃತ ಉತ್ತರದ ದಾಖಲೆಗಳು ಕನ್ನಡಿ ಹಿಡಿದಿವೆ ಎಂದು ಎಂದಿದ್ದಾರೆ.
ಆರ್‌ಎಸ್‌ಎಸ್ ವಿರುದ್ಧ ಯಾವುದೇ ಪ್ರಕರಣಗಳಿಲ್ಲ, ಯಾವುದೇ ಅಹಿತಕರ ಘಟನೆಗಳ ದಾಖಲೆಗಳಿಲ್ಲ ಎಂದು ನಿಮ್ಮದೇ ಇಲಾಖೆ ಅಧಿಕೃತವಾಗಿ ಉತ್ತರಿಸಿರುವಾಗಲೂ, ಆರ್‌ಎಸ್‌ಎಸ್ ವಿರುದ್ಧ ನಿರಂತರವಾಗಿ ನೀವು ರಾಜಕೀಯ ದ್ವೇಷವನ್ನು ಸಾಧಿಸುವುದೇಕೆ? ರಾಜ್ಯದ ಗೃಹ ಇಲಾಖೆಯನ್ನು ಸಮರ್ಥವಾಗಿ ಮುನ್ನಡೆಸಬೇಕಾದ ನೀವು ಕಾನೂನು ಮತ್ತು ಸುವ್ಯವಸ್ಥೆಯಂತಹ ಗಂಭೀರ ವಿಚಾರಗಳತ್ತ ಗಮನ ಹರಿಸುವ ಬದಲು ಆರ್‌ಎಸ್‌ಎಸ್ ಅನ್ನು ಗುರಿಯಾಗಿಸಿಕೊಂಡು ರಾಜಕೀಯ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುವುದೇಕೆ ಎಂದು ಜಾಲತಾಣದ ಮೂಲಕ ಪ್ರಶ್ನಿಸಿದ್ದಾರೆ.