)
ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ
ಯುವ ಪೀಳಿಗೆ ಇದನ್ನು ಅರ್ಥೆಸಿಕೊಳ್ಳುವ ಮೂಲಕ ಮಾನವೀಯ ಸಮಾಜ ನಿರ್ಮಾಣ ನಿಟ್ಟಿನಲ್ಲಿ ಜವಾಬ್ದಾರಿ ಅರಿಯಬೇಕಿದೆ ಎಂದು ವಿಶ್ರಾಂತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.
ಕೊಳ್ಳೇಗಾಲದಲ್ಲಿ ಮಾನಸ ಸಂಸ್ಥೆ ಅಯೋಜಿಸಿದ್ದ ಸಮಾರಂಭದಲ್ಲಿ ಮಾನಸ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಬಹಿಷ್ಕಾರ ಎಂಬುದು ನ್ಯಾಯಾಲಯ ನೀಡುವ ಶಿಕ್ಷೆ ಅಲ್ಲ, ಆದರೆ ಅದು ಹಳ್ಳಿಗಾಡಿನಲ್ಲಿ ವಾಸಿಸುವ ಜನರ ಬದುಕಲ್ಲಿ ಪರಿಣಾಮ ಬೀರಲಿದೆ. ನಾನು ನ್ಯಾಯಮೂರ್ತಿಯಾಗಿ ನೇಮಕಗೊಂಡಾಗಿನಿಂದ ಲೋಕಾಯುಕ್ತ ನ್ಯಾಯಮೂರ್ತಿಯಾಗಿ ನೇಮಕದ ತನಕ ನನಗೆ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ಭ್ರಷ್ಟಾಚಾರದ ಬಗ್ಗೆ ಅರಿವಿರಲಿಲ್ಲ. ಬಳಿಕ ಜನ ಸಾಮಾನ್ಯರ ದುಃಖ ದುಮ್ಮಾನ ಆಲಿಸಿ ಪರಿಹರಿಸುವ ಮೂಲಕ ನನಗೆ ಅವರ ನೋವಿನ ಅರಿವಾಯಿತು. ನನಗೆ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿದ್ದು ಈ ಪೈಕಿ ಸಂಸ್ಥೆಯೊಂದು ನನ್ನ ಗೌರವಿಸಿ 1 ಕೋಟಿ ರು. ನೀಡಿತ್ತು. ಅದನ್ನು ಯೋಧರ ಕಲ್ಯಾಣಕ್ಕೆ ಸಮರ್ಪಿಸಿದೆ. ಅದೇ ರೀತಿ ಮಾನಸ ಪ್ರಶಸ್ತಿಯ ನಗದನ್ನು ಸಾಲೂರು ಮಠದ ಶಿಕ್ಷಣ ಸಂಸ್ಥೆಯ ಮಕ್ಕಳ ಕಲ್ಯಾಣಕ್ಕೆ ಬಳಸಲು ನೀಡಿರುವೆ ಎಂದು ಹೇಳಿದರು.ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಯುವ ಪೀಳಿಗೆ ತೃಪ್ತಿ ಹಾಗೂ ಮಾನವೀಯತೆ ರೂಢಿಸಿಕೊಳ್ಳಬೇಕು, ಪ್ರಮಾಣಿಕವಾಗಿ ತಾವು ಸಂಪಾದಿಸಿದ್ದನ್ನು ಉಳಿಸಿಕೊಂಡು ಹೆಚ್ಚಿದ್ದನ್ನು ಸಮಾಜಕ್ಕೆ ಕೊಡುಗೆ ನೀಡಿದರೆ ತೃಪ್ತಿಯಿಂದ ನಿದ್ದೆ ಮಾಡಲು ಸಾಧ್ಯ. ಭ್ರಷ್ಟಾಚಾರ, ವಾಮಮಾರ್ಗದಿಂದ ಹಣಗಳಿಸಿದರೆ ತೃಪ್ತಿಯೂ ಸಿಗದು, ನೆಮ್ಮದಿಯಾಗಿ ನಿದ್ರೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ವಿದ್ಯಾರ್ಥಿಗಳು ಐಪೋನ್ ಸಂಸ್ಕೃತಿಯಿಂದ ಮೌಲ್ಯ ಕಲಿಯಲು ಸಾಧ್ಯವಿಲ್ಲ. ಹಿಂದೆ ಶಾಲೆಯಲ್ಲಿ ಕಲಿಸಲಾಗುತ್ತಿದ್ದ ನೀತಿ ಪಾಠಗಳು ಕಡಿಮೆಯಾಗುತ್ತಿವೆ, ನಿಮ್ಮ ಭವಿಷ್ಯ ಚನ್ನಾಗಿರಬೇಕಾದರೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ, ಸಂಪಾದನೆ ನೋಡಿ ಖರ್ಚುಮಾಡಿ. ಲಕ್ಷಾಂತರ ಹಣ ನೀಡಿ ಸರ್ಕಾರಿ ಹುದ್ದೆ ಪಡೆದರೆ ಯಾವ ರೀತಿ ಪ್ರಮಾಣಿಕವಾಗಿ ಕೆಲಸ ಮಾಡಲು ಸಾಧ್ಯ ಎಂಬುದರ ಅವಲೋಕನ ಅಗತ್ಯವಿದೆ. ಶಾಲೆಯಲ್ಲಿ ಮಕ್ಕಳಿಗೆನೀತಿ ಪಾಠ ಕಲಿಸಿದರೆ ನೀತಿ ಪಾಠಗಳಿಂದ ಹಣ ಮಾಡಲು ಸಾಧ್ಯವಿಲ್ಲ ಎಂಬಂತಹ ಸ್ಥಿತಿ ನಿರ್ಮಿಸಿದೆ ಎಂದು ವಿಷಾದಿಸಿದರು.
-----
ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ
ಕೊಳ್ಳೇಗಾಲದಲ್ಲಿ ಮಾನಸ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, ಮೂರು ದಶಕಗಳಲ್ಲಿ ಕೊಳ್ಳೇಗಾಲದಂತಹ ಗ್ರಾಮೀಣ ಪ್ರದೇಶದಲ್ಲಿ ಮಾನಸ ಶಿಕ್ಷಣ ಸಂಸ್ಥೆ ಸೇವೆ ಶ್ಲಾಘನೀಯ. ಶಿಕ್ಷಣ ವ್ಯಾಪಾರಿಕರಣವಾಗುತ್ತಿರುವ ಈಸಂದರ್ಭದಲ್ಲಿ ಮಾನಸ ಸಂಸ್ಥೆ ಮೌಲ್ಯಯುತ ಶಿಕ್ಷಣ ನೀಡಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿ ಸಮಾಜಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡುವ ಕೆಲಸ ಮಾಡುತ್ತಿದೆ. ಮಾನಸ ಪ್ರಶಸ್ತಿಯನ್ನು ಹಿರಿಯ ಸಾಹಿತಿ ನಿಸಾರ್ ಅಹಮ್ಮದ್, ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ, ದೊರೆಸ್ವಾಮಿ, ಉಮಾಶ್ರೀ, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಅನೇಕ ಮಹನೀಯರಿಗೆ ನೀಡಿದ್ದು ಇಂದು ಸಂತೋಷ್ ಹೆಗ್ಡೆ ಅವರಿಗೆ ಪ್ರಶಸ್ತಿ ನೀಡುವ ಮೂಲಕ ಘನತೆ ಹೆಚ್ಚಿಸಿಕೊಂಡಿದೆ, ಸಮಾಜ ಒಪ್ಪುವ ದೊಡ್ಡಕೆಲಸ ಮಾಡಿದರೆದೊಡ್ಡ ದೊಡ್ಡಪುರಸ್ಕಾರಗಳು ಸಿಗುತ್ತೆ ಎಂಬುದಕ್ಕೆ ಸಂತೋಷ್ ಹೆಗ್ಡೆ ಅವರು ನಮ್ಮೆಲ್ಲರಿಗೂ ಉದಾಹರಣೆ ಎಂದು ಹೇಳಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಮೌಢ್ಯ ಬದಿಗೊತ್ತಿ ಚಾ.ನಗರ ಜಿಲ್ಲೆಗೂ ಆಗಮಿಸಿದ್ದೆ. ಮಹದೇಶ್ವರ ಬೆಟ್ಟ ಪ್ರಾಧಿಕಾರ ರಚಿಸಿದ್ದು ನನ್ನ ಅವಧಿಯಲ್ಲಿಯೇ ಇದಕ್ಕೆ ಅಂದಿನ ಉಸ್ತುವಾರಿ ಸಚಿವ ಸೋಮಣ್ಣ ಅವರ ಸಹಕಾರವೂ ಕಾರಣ ಎಂದು ಸ್ಮರಿಸಿದರು.
ಶೈಕ್ಷಣಿಕ ಕ್ರಾಂತಿ ಮಾಡುವಂತಾಗಲಿ ಎಂದು ಹಾರೈಸಿದರು.
ಮಾನಸ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಕಾರ್ಯದರ್ಶಿ ಡಾ. ದತ್ತೇಶ್ ಕುಮಾರ್ ಮಾತನಾಡಿ, ಸಂಸ್ಥೆಯಲ್ಲಿ ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಶಿಕ್ಷಕರು ಮತ್ತು ಮಕ್ಕಳು ನಮ್ಮ ಸಂಸ್ಥೆ ಆಸ್ತಿಯಾಗಿದ್ದಾರೆ, ಮಾನಸೋತ್ಸವ ನಿಮ್ಮ ಕನಸು ದೊಡ್ಡದಾಗಿಸುವಲ್ಲಿ ಹಾಗೂ ನಿಮ್ಮ ಭಯ ಗೆಲ್ಲುವ, ಸ್ಪೂರ್ತಿ ತುಂಬುವ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮಹದೇಶ್ವರ ಬೆಟ್ಟದ ಸಾಲೂರು ಮಠಾಧ್ಯಕ್ಷರಾದ ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮೈಸೂರು ಪ್ರಾಂತ್ಯದ ಕ್ರೈಸ್ತ ಧರ್ಮಗುರು ಬಿಷಪ್ ಡಾ.ಪ್ರಾನ್ಸಿಸ್ ಸೆರಾವೊ, ಖ್ಯಾತ ಸಾಹಿತಿ ಡಾ.ಹಂಪ ನಾಗರಾಜಯ್ಯ, ಹಿರಿಯ ಪತ್ರಕರ್ತ ಅಂಶಿಪ್ರಸನ್ನಕುಮಾರ್, ಮಾಜಿ ಸಚಿವ ಎನ್. ಮಹೇಶ್, ಡಾ. ಶಿವರಾಜಪ್ಪ, ಮಾನಸ ಸಂಸ್ಥೆ ಅಧ್ಯಕ್ಷ ನಾಗರಾಜು, ಸಂಸ್ಥಾಪಕ ಕಾರ್ಯದರ್ಶಿ ಡಾ.ದತ್ತೇಶ್ ಕುಮಾರ್, ರೂಪ ದತ್ತೇಶ್, ಶಂಕರ್, ನಾಗಭೂಷಣ್, ಡಾ.ಚನ್ನಶೆಟ್ಟಿ, ಶಂಕರ್ , ಗಿರೀಶ್ ಬಾಬು ಇನ್ನಿತರಿದ್ದರು.
----ಮನಸ್ಸು ಶುದ್ಧವಾಗಿದ್ದರೆ ಆಲೋಚನೆ ಶುದ್ಧವಾಗಿರಲಿದೆ. ಆಲೋಚನೆ ಶುದ್ಧವಾಗಿದ್ದರೆ ಕೆಲಸ ಶುದ್ಧವಾಗಲಿದೆ. ವಿದ್ಯಾರ್ಥಿ ಎಂಬ ಬೀಜ ಹೆಮ್ಮರವಾಗಲು ಹೆಚ್ಚಿನ ಪ್ರೋತ್ಸಾಹ ಅಗತ್ಯ. ಈನಿಟ್ಟಿನಲ್ಲಿ ಮಾನಸ ಶಿಕ್ಷಣ ಸಂಸ್ಥೆ ಸಂಸ್ಕಾರವಂತ ಶಿಕ್ಷಣ ನೀಡುವ ಮೂಲಕ ಶ್ಲಾಘನೀಯ ಕೆಲಸ ಮಾಡುತ್ತಿದೆ. ಪದವಿ ಇದ್ದರೆ ಸಾಲದು, ಜ್ಞಾನ, ವಿವೇಕವೂ ಮುಖ್ಯ. ವಿದ್ಯಾರ್ಥಿಗಳ ಪದವಿ, ಕಲಿಕೆ, ಉನ್ನತ ಹುದ್ದೆಗಳು ಸಮಾಜದ ಒಳಿತಿಗ ವಿನಿಯೋಗವಾಗಲಿ.
- ಡಾ.ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿಜಿಗಳು. ಸಾಲೂರು ಮಠಾಧ್ಯಕ್ಷರು. ಮಹದೇಶ್ವರ ಬೆಟ್ಟ----
ಮಾನಸ ಪ್ರಶಸ್ತಿ ಪಡೆದ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಗಡೆ ಅವರು ಅಸಮಾನ್ಯರು. ಅವರ ಸೇವೆ ಶ್ಲಾಘನೀಯ. ಅಂದು ನೇರವಾಗಿ ಸುಪ್ರಿಂಕೋರ್ಟ್ ನ್ಯಾಯಾಧೀಶರಾದ ಹೆಗ್ಗಳಿಕೆ ಅವರದ್ದು. ಪ್ರಸ್ತುತ ದಿನಗಳಲ್ಲಿ ಮೌಲ್ಯಗಳನ್ನು ಕಲಿಸುವ ಗುರುಗಳ ಅಗತ್ಯತೆ ಹೆಚ್ಚಿನ ರೀತಿ ಇದೆ. ಪ್ರಸ್ತುತ ದಿನಗಳಲ್ಲಿ ಗುರುಗಳ ಮೇಲೆ ಬರುತ್ತಿರುವ ಅಪವಾದಗಳಿಂದ ಮನಸ್ಸಿಗೆ ನೋವಾಗುತ್ತಿದೆ . ಗುರುಭಕ್ತಿ ಇರಬೇಕು, ಅಂತಃಕರಣದಲ್ಲಿ ವಿವೇಕವೂ ಅಡಕವಾಗಿರಬೇಕು.ಡಾ. ಹಂ.ಪ. ನಾಗರಾಜಯ್ಯ, ಖ್ಯಾತ ಹಿರಿಯ ಸಾಹಿತಿಗಳು. ಸಂಶೋಧಕರು. ಬೆಂಗಳೂರು