ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ಬೇಡ

KannadaprabhaNewsNetwork |  
Published : Aug 19, 2026, 01:45 AM IST
ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ಡಿಜೆ ನಿಷೇಧಕ್ಕೆ ಆಗ್ರಹಿಸಿ ಹುಬ್ಬಳ್ಳಿ ಮತ್ತು ಧಾರವಾಡ ಅಂಜುಮನ್‌ ಇಸ್ಲಾಂ ಸಂಸ್ಥೆಯಿಂದ ಪೊಲೀಸ್‌ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಆ. 26ರಂದು ನಡೆಯುವ ಈದ್‌ ಮಿಲಾದ್‌ ಹಬ್ಬದ ಅಂಗವಾಗಿ ನಡೆಯುವ ಸಾಮೂಹಿಕ ಮೆರವಣಿಗೆಯಲ್ಲಿ ಡಿಜೆ ಹಾಗೂ ಇತರ ಸಂಗೀತ ವಾದ್ಯಗಳ ಬಳಕೆ ನಿಷೇಧಿಸಬೇಕೆಂದು ಹು-ಧಾ ಅಂಜುಮನ್ ಸಂಸ್ಥೆಗಳ ವತಿಯಿಂದ ಮಂಗಳವಾರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಆ. 26ರಂದು ನಡೆಯುವ ಈದ್‌ ಮಿಲಾದ್‌ ಹಬ್ಬದ ಅಂಗವಾಗಿ ನಡೆಯುವ ಸಾಮೂಹಿಕ ಮೆರವಣಿಗೆಯಲ್ಲಿ ಡಿಜೆ ಹಾಗೂ ಇತರ ಸಂಗೀತ ವಾದ್ಯಗಳ ಬಳಕೆ ನಿಷೇಧಿಸಬೇಕೆಂದು ಹು-ಧಾ ಅಂಜುಮನ್ ಸಂಸ್ಥೆಗಳ ವತಿಯಿಂದ ಮಂಗಳವಾರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಈದ್ ಮಿಲಾದ್-ಉನ್-ನಬಿ ಮೆರವಣಿಗೆಯಲ್ಲಿ ಡಿಜೆ ಹಾಗೂ ಇತರ ಸಂಗೀತ ವಾದ್ಯಗಳ ಬಳಕೆಯನ್ನು ಶಾಶ್ವತವಾಗಿ ನಿಷೇಧಿಸುವಂತೆ ಜು. 31ರಂದು ಸಭೆ ನಡೆಸಿ ಇಂತಹ ನಿರ್ಣಯ ಕೈಗೊಳ್ಳಲಾಗಿದೆ. ಮೆರವಣಿಗೆಯಲ್ಲಿ ಡಿಜೆ ಹಚ್ಚುವುದರಿಂದ ರೋಗಿಗಳು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಲಿದೆ. ಹೀಗಾಗಿ ಸೌಂಡ್‌ ಸಿಸ್ಟಮ್‌ ಬಳಕೆಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.ಈ ವೇಳೆ ಅಂಜುಮನ್-ಏ-ಇಸ್ಲಾಂ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಉಪಾಧ್ಯಕ್ಷ ಬಾಷಾಸಾಬ್ ಅತ್ತಾರ, ಗೌರವ ಕಾರ್ಯದರ್ಶಿ ಬಶೀರ್ ಅಹ್ಮದ್ ಹಳ್ಳೂರ, ಸಹ ಕಾರ್ಯದರ್ಶಿ ರಫೀಕ್ ಬಂಕಾಪುರ, ಶಿಕ್ಷಣ ಮಂಡಳಿ ಸದಸ್ಯರಾದ ಇಲಿಯಾಸ್ ಮನಿಯಾರ್, ನವೀದ್ ಮುಲ್ಲಾ, ಬಶೀರ್ ಗುಡಮಾಲ್, ವಸೀಂ ಮೊಮಿನ್, ಪಾಲಿಕೆ ಸದಸ್ಯರಾದ ಇಕ್ಬಾಲ್ ನವಲೂರ, ಸಾದಿಕ್ ಯಕ್ಕುಂಡಿ, ಮುದಸ್ಸರ್ ಖೋಜೆ, ಧಾರವಾಡ ಅಂಜುಮನ್ ಸಂಸ್ಥೆಯ ಬಶೀರ್ ಅಹ್ಮದ್ ಜಾಗಿರದಾರ, ಯಾಸೀನ್ ಹಾವೇರಪೇಟ, ರಫೀಕ್ ಶಿರಹಟ್ಟಿ, ಖೈರುದ್ದೀನ್ ಶೇಖ್, ಶಮಶುದ್ಧೀನ್ ಗಿಡದೂರ ಸೇರಿ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಖರ್ಗೆ ಭಾಷಣ ಮಾಡಿದ ಸ್ಥಳ ಸ್ವಚ್ಛ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ
ನದಿಗೆ ನೀರು ಬಿಡುಗಡೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ