ಕನ್ನಡ ಪ್ರಭ ವಾರ್ತೆ ಚಿತ್ತಾಪುರ
ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತ ಹಾಗೂ ಶಿಶು ಅಭಿವೃದ್ದಿ ಯೊಜನೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಚಿತ್ತಾಪುರ ಸಂಯುಕ್ತಾಶ್ರಯದಲ್ಲಿ ವಿಶ್ವ ಪೌಷ್ಟಿಕಾಂಶ ದಿನದ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಾವೆಲ್ಲರೂ ಪೌಷ್ಟಿಕಾಂಶ ಎಂದರೆ ಕೇವಲ ಊಟ ಎಂದುಕೊಂಡಿದ್ದೇವೆ. ಆದರೆ ಅದು ಸುಳ್ಳು. ಪೌಷ್ಟಿಕ ಆಹಾರ ಪಡೆಯುವುದು ನಮ್ಮ ಮೂಲಹಕ್ಕು. ದೇಶದಲ್ಲಿ ಹಸಿವಿನಿಂದ ಯಾರು ಸಾಯಬಾರದು ಎಂದು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಇದೆ. ಮಕ್ಕಳಿಗೆ ಪೌಷ್ಟಿಕಾಂಶ ಸಿಗಬೇಕು. ಮಾರುಕಟ್ಟೆಯಲ್ಲಿ ಸಿಗುವ ಆಹಾರ ಶುದ್ದವಾಗಿರಬೇಕು ಎಂದರು.
ವಿಶ್ವ ಪೌಷ್ಟಿಕಾಂಶ ದಿನದಂದು ನಾವು ಕೇವಲ ಉತ್ತಮ ಆಹಾರದ ಬಗ್ಗೆ ಮಾತ್ರವಲ್ಲ, ಆ ಆಹಾರದ ಹಿಂದಿರುವ ಕಾನೂನಿನ ಬಗ್ಗೆಯು ತಿಳಿಯಬೇಕು. ಹೆಚ್ಚಿನ ಮಾಹಿತಿಗಾಗಿ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಬಂದು ಅಲ್ಲಿ ಉಚಿತವಾಗಿ ಕಾನೂನು ಅರಿವು, ನೆರವು ಪಡೆದು ಆಹಾರದ ಹಕ್ಕನ್ನು ಪಡೆಯಬಹುದು. ಹಕ್ಕನ್ನು ಕಸಿದುಕೊಂಡವರ ವಿರುದ್ದ ದೂರು ಕೂಡ ನೀಡಬಹುದು ಎಂದರು.ಸಿಡಿಪಿಓ ಆರತಿ ತುಪ್ಪದ್ದ, ಟಿಎಚ್‌ಓ ಡಾ. ಇರ್ಫಾನ್, ವಕೀಲರ ಸಂಘದ ಅಧ್ಯಕ್ಷ ಸೊಮಶೇಖರ ಕರದಳ್ಳಿ ಮಾತನಾಡಿದರು. ನ್ಯಾಯವಾದಿ ಬಸವರಾಜ ಸಿಂಪಿ ವಿಶ್ವ ಪೌಷ್ಟಿಕಾಂಶ ಕುರಿತು ಉಪನ್ಯಾಸ ನೀಡಿದರು. ಮೇಲ್ವಿಚಾರಕಿ ರಮಾಬಾಯಿ ಕಾರ್ಯಕ್ರಮ ನಿರೂಪಿಸಿದರು.