ಕನ್ನಡಪ್ರಭ ವಾರ್ತೆ ಗುಬ್ಬಿ
ಗುಬ್ಬಿ ತಾಲೂಕಿನ ಹಾಗಲವಾಡಿ ಹೋಬಳಿಯ ಶೆಟ್ಟಿಹಳ್ಳಿಯಲ್ಲಿ ಸುಮಾರು 1ಕೋಟಿ ರು. ವೆಚ್ಚದ ಸಿಸಿರಸ್ತೆ ಹಾಗೂ ಜಲ ಜೀವನ್ ಮೀಷನ್ ಕಾಮಾಗಾರಿಗೆ ಗುರುವಾರ ಗುದ್ದಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು ,ಮುಡಾ ಕೇಸ್ ಅಲ್ಲ ಯಾವುದೇ ಕಾರಣಕ್ಕೂ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೇಯೇ ಇಲ್ಲ ಮುಂದಿನ ಐದು ವರ್ಷಗಳು ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಾಗಲವಾಡಿ ಕೆರೆಗೆ ಎತ್ತಿನಹೊಳೆ ನೀರು ತರುವ ಕಾಮಾಗಾರಿ ನಡೆಯುತ್ತಿದೆ. ಇನ್ನೂ ಎರಡು ಮೂರು ತಿಂಗಳಲ್ಲಿ ಹಾಗಲವಾಡಿ ಕೆರೆಗೆ ನೀರು ಬೀಡಲಾಗುತ್ತದೆ. ಮಠ ಗಂಗಯ್ಯನಪಾಳ್ಯ ಕೆರೆಗೆ ಟೆಂಡರ್ ಕರೆಯಲಾಗಿದೆ ಎಂದರು.ಮುನಿರತ್ನ ಅವರು ಜಾತಿ ಹಿಡಿದು ಮಾತನಾಡುವುದು ತಪ್ಪು ಮಹಿಳೆಯರ ವಿರುದ್ಧ ಅವಹೇಳಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅವರ ತಪ್ಪಿದ್ದರೆ ಈ ನೆಲದ ಕಾನೂನು ಪ್ರಕಾರ ಶಿಕ್ಷೆ ಆಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದೇ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಮ್ಮ , ಗ್ರಾಮ ಪಂಚಾಯಿತಿ ಸದಸ್ಯರಾದ ರಾಘವೇಂದ್ರ , ಶಂಕರಪ್ಪ ,ದೊಡ್ಡಕೆಂಪಯ್ಯ , ದಯಾನಂದ್ , ಮುಖಂಡರಾದ ಕೊಟ್ಟಯ್ಯ , ಮಂಜುನಾಥ್ , ಈಶಣ್ಣ , ಗುತ್ತಿಗೆದಾರ ರಮೇಶ್ ಪಿಡಿಓ ತಿಪ್ಪೇಸ್ವಾಮಿ , ಎಇಇ ನಟರಾಜು ಭಾಗವಹಿಸಿದ್ದರು.