ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಳೆಯ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸದ್ಗುಣ, ಸತ್ಕಾರ್ಯ, ಪ್ರೇರಣೆಗಳೆಲ್ಲ ಪ್ರಶಂಸೆಗಾಗಿ ಅಲ್ಲ. ನಮ್ಮ ಮನಕ್ಕೆ ನೆಮ್ಮದಿ ನೀಡಲಿಕ್ಕೆ ಮಾತ್ರ ಇವೆ. ಮನುಷ್ಯನಲ್ಲಿ ಯಾವುದೇ ಕೊರತೆಯಾದರೂ ಕೃತಜ್ಞತಾಭಾವ ಕಡಿಮೆಯಾಗಬಾರದು ಎಂದರು.
ಒಂದು ವ್ಯವಸ್ಥೆ ಹುಟ್ಟು ಹಾಕಲು ಬಂಡವಾಳ ಬೇಕು. ಶಿಕ್ಷಣ ಸಂಸ್ಥೆಗಳನ್ನು ಉದ್ಯಮಿಗಳು, ರಾಜಕಾರಣಿಗಳು, ಬಂಡವಾಳಶಾಹಿಗಳು ತೆರೆಯಬಹುದು. ಆದರೆ ಅದು ವ್ಯಾಪಾರೀಕರಣವಾಗುತ್ತದೆ. ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು 1966ರಲ್ಲಿ ಮಧ್ಯ ಕರ್ನಾಟಕದ ಬಡ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಎಸ್‌ಜೆಎಂ ವಿದ್ಯಾಪೀಠ ಸ್ಥಾಪಿಸಿ ಅದರ ಮೂಲಕ ಅನೇಕ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರು. 1980ರಲ್ಲಿ ಎಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಿ ಅದರ ಕಟ್ಟಡವನ್ನು ತಾವೇ ಮುಂದೆ ನಿಂತು ನಿರ್ಮಾಣ ಮಾಡಿಸಿದರು ಎಂದರು.ಎಂಜಿನಿಯರಿಂಗ್ ಕಾಲೇಜು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದೆ. ಜಯದೇವ ಶ್ರೀಗಳು ಅನ್ನ ದಾಸೋಹಿಗಳಾಗಿದ್ದರೆ, ಮಲ್ಲಿಕಾರ್ಜುನ ಶ್ರೀಗಳು ಶಿಕ್ಷಣ ದಾಸೋಹಿಗಳು. ಜಯದೇವ ಶ್ರೀಗಳು ವಿದ್ಯಾರ್ಥಿ ನಿಲಯಗಳನ್ನು ದೇಶದಾಂತ್ಯ ಸ್ಥಾಪಿಸಿ ಅನೇಕ ಬಡವಿದ್ಯಾರ್ಥಿಗಳಿಗೆ ಆಸರೆಯಾದರು. ಜಯದೇವ ವಿದ್ಯಾರ್ಥಿನಿಲಯಗಳಲ್ಲಿ ಎಸ್.ನಿಜಲಿಂಗಪ್ಪ, ಜಿ.ಎಸ್ ಶಿವರುದ್ರಪ್ಪರವರಂತಹ ಮಹನೀಯರು ಆಶ್ರಯ ಪಡೆದು ವ್ಯಾಸಂಗ ಮಾಡಿದ್ದಾರೆ. ಈ ಕಾಲೇಜನ್ನು ಪೂಜ್ಯರು ಹಣ ಮಾಡಲಿಕ್ಕೆ ಕಟ್ಟಲಿಲ್ಲ. ಬಡ ವಿದ್ಯಾರ್ಥಿಗಳಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡಲು ಸ್ಥಾಪಿಸಿದರು ಎಂದರು.
ಎಸ್‌ಜೆಎಂ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಬಿ ಗುಡಸಿ ಮಾತನಾಡಿ, ಹಳೆಯ ವಿದ್ಯಾರ್ಥಿಗಳ ಕಾಲೇಜಿನ ರಾಯಭಾರಿಗಳಿದ್ದಂತೆ. ಸಂಸ್ಥೆಯ ಜೊತೆಗೆ ನೀವು ಸಹ ಬೆಳೆದಿರುತ್ತೀರಿ. ಈ ಶಿಕ್ಷಣ ಸಂಸ್ಥೆಯನ್ನು ಈ ಸ್ಥಾನಕ್ಕೆ ತರಲು ಅನೇಕ ಅಧ್ಯಾಪಕ ವರ್ಗ ಶ್ರಮಿಸಿದೆ. ಹಳೆಯ ವಿದ್ಯಾರ್ಥಿಗಳು ಈ ಸಂಸ್ಥೆಯೊಂದಿಗೆ, ವಿದ್ಯಾರ್ಥಿಗಳೊಂದಿಗೆ, ವಿಶ್ವವಿದ್ಯಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದರು.