ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಫ್‌ಐಆರ್ ಬಗ್ಗೆ ನಮ್ಮ ವಕೀಲರ ತಂಡ ತಲೆಕೆಡಿಸಿಕೊಳ್ಳುತ್ತಾರೆ. ಆದರೆ, ನಾವು ಅದರಿಂದ ಹೆದರಿ ಹಿಂದೆ ಸರಿಯುವುದಿಲ್ಲ. ಗಣಪತಿ ಮೇಲೆ ಕಲ್ಲು ಹೊಡೆದರೆ ಸಹಿಸಿಕೊಳ್ಳಬೇಕಾ?, ಅವರ ಮೇಲೆ ಕಲ್ಲು ಹೊಡೆದರೆ ಅವರು ಸಹಿಸಿಕೊಳ್ಳುತ್ತಾರಾ. ಅದನ್ನು ಸಹಿಸಿಕೊಳ್ಳುವುದಾದರೆ ಸಹನೆ ಪಾಠ ಮಾಡಲಿ. ಆಕ್ಷನ್‌ಗೆ ರಿಯಾಕ್ಷನ್ ಇರುತ್ತದೆ ಅಷ್ಟೆ ಎಂದರು.
ಹಿಂದೂಗಳ ಗ್ರಂಥದ ಬಗ್ಗೆ ಎಸ್‌ಐಟಿ ಅಧ್ಯಯನ ನಡೆಸಲಿ. ಮತೀಯ ಗ್ರಂಥಗಳ ನಡುವಿನ ವ್ಯತ್ಯಾಸದ ಬಗ್ಗೆ ಅಧ್ಯಯನ ನಡೆಸಿ ಅದರಲ್ಲಿ ಏನಿದೆ ಎಂಬುದನ್ನು ಪತ್ತೆ ಹಚ್ಚಲಿ. ಮುಸ್ಲಿಮರ ದುರ್ಬೋದನೆ ನಿಲ್ಲಿಸದಿದ್ದರೆ ಶಾಂತಿ ಹೇಗೆ ನೆಲೆಸುತ್ತದೆ ಎಂದು ಪ್ರಶ್ನಿಸಿದರು.ಮುಸ್ಲಿಮರ ಮತೀಯ ಗ್ರಂಥಗಳು ಕಲ್ಲು ಹೊಡೆಯುವಂತೆ ಬೋಧನೆ ಮಾಡುತ್ತವೆ. ಮತೀಯ ಗ್ರಂಥಗಳ ಬಗ್ಗೆ ಅಧ್ಯಯನ ನಡೆಸಿದರೆ ಅದರ ತಿರುಳು ಅರ್ಥವಾಗುತ್ತದೆ. ಹಿಂದೂಗಳ ಗ್ರಂಥವನ್ನು ಕೂಡ ಅಧ್ಯಯನ ಮಾಡಲಿ. ಅದೇ ನಮ್ಮ ಗ್ರಂಥಗಳನ್ನು ಅಧ್ಯಯನ ಮಾಡಿದರೆ ದೇವರಾಗುತ್ತಾರೆ. ಆದರೆ, ಮತೀಯ ಗ್ರಂಥವನ್ನು ಅಧ್ಯಯನ ಮಾಡಿದರೆ ಬಿನ್ ಲಾಡನ್ ಆಗುತ್ತಾರೆ ಎಂದರು.
ಮದ್ದೂರಿನಲ್ಲಿ ಪ್ರಗತಿಪರರ ಪ್ರತಿಭಟನಾ ರ್ಯಾಲಿ ಬಗ್ಗೆ ವಿರೋಧ ವ್ಯಕ್ತಪಡಿಸಿದ ಅವರು, ಮನೆ ಹಾಳು ಮಾಡೋದು, ದ್ವೇಷಿಸೋರ ಪರ ಕೆಲಸ ಮಾಡುವುದೇ ಪ್ರಗತಿಪರರ ಕೆಲಸ ಆಗಿದೆ. ಪ್ರಗತಿಪರರ ಜೊತೆ ಚರ್ಚೆಗೆ ನಾನೂ ಸಹ ಸಿದ್ಧನಿದ್ದೇನೆ. ಬೇಕಿದ್ದರೆ ಬರಲಿ ಎಂದು ಸವಾಲು ಹಾಕಿದರು.