ರಾತ್ರಿ ವೇಳೆ ರಕ್ಷಣೆಯಿಲ್ಲ

KannadaprabhaNewsNetwork |  
Published : Sep 28, 2024, 01:17 AM IST
ಕಂದಾಯ ಇಲಾಖೆ ಕೆಲಸದ ಜೊತೆಗೆ ಬೇರೆ ಇಲಾಖೆಗಳ ಕೆಲಸಕ್ಕೆ ಒತ್ತಡ  | Kannada Prabha

ಸಾರಾಂಶ

ಕೊರಟಗೆರೆ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಂದಾಯ ಇಲಾಖೆ ನೌಕರರು ಸಂಘದಿಂದ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕೊರಟಗೆರೆ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಂದಾಯ ಇಲಾಖೆ ನೌಕರರು ಸಂಘದಿಂದ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ಬಸವರಾಜು, ಸರ್ಕಾರವು ಗ್ರಾಮ ಆಡಳಿತ ಅಧಿಕಾರಿಗಳಿಗೆ ಒಂದೇ ಭಾರಿ ಹತ್ತು ಹಲವಾರು ಆ್ಯಪ್‌ಗಳನ್ನು ನೀಡಿ ಕಂದಾಯ ಇಲಾಖೆ ಕೆಲಸದ ಜೊತೆಗೆ ಬೇರೆ ಇಲಾಖೆಗಳ ಕೆಲಸಗಳನ್ನು ಮಾಡುವಂತೆ ಮಾಡಿದೆ. ಈ ಆದೇಶವನ್ನು ವಾಪಸ್ಸು ಪಡೆಯಬೇಕು ಎಂದು ಒತ್ತಾಯ ಮಾಡಿದರು.

ಒಂದೇ ಬಾರಿ ಪ್ರಗತಿ ಕೇಳಿ ರಜಾ ದಿನಗಳಲ್ಲೂ ಕೆಲಸ ಮಾಡಿಸಿ ರಾತ್ರಿ ವೇಳೆಯಲ್ಲೂ ಆನ್‌ಲೈನ್ ಸಭೆ ಮಾಡಿ ಅನಗ್ಯತವಾಗಿ ಕೆಲವರನ್ನು ಅಮಾನತ್ತುಗೊಳಿಸಿದ್ದು ಇದರಿಂದ ಅವರು ಮಾನಸಿಕ ಒತ್ತಡ ಖಿನ್ನತೆಗೆ ಒಳಗಾಗಿದ್ದಾರೆ ಎಂದರು.ಗ್ರಾಮಾಧಿಕಾರಿ ದೀಪಿಕಾ ಮಾತನಾಡಿ ನಾವುಗಳು ಸರ್ಕಾರ ಜಾಗ ಗುರುತಿಸಲು ಮೊಬೈಲ್ ಹಿಡಿದು ಗ್ರಾಮಗಳ ಹೊರಗೆ ಬೆಟ್ಟ, ಗುಡ್ಡ, ಕೆರೆ ಹಳ್ಳ, ಕಾಡುಗಳು ಸೇರಿದಂತೆ ಹಲವು ಜಾಗಗಳಿಗೆ ಹೋಗಬೇಕು ಈ ಕೆಲಸದಲ್ಲಿ ನಮಗೆ ರಕ್ಷಣೆ ಇರುವುದಿಲ್ಲ. ಈ ಆ್ಯಪ್ ಗಳಿಂದ ರಾತ್ರಿ ವೇಳೆ ಗೂಗಲ್ ಸಭೆ, ತಾಲೂಕು ಕಚೇರಿಯಲ್ಲಿ ಸಭೆ ನಡೆದು ನಾವು ಮನೆಗೆ ಹೋಗುವುದರಲ್ಲಿ ತಡ ರಾತ್ರಿಯಾಗುತ್ತಿದ್ದು ಇದರಿಂದ ಕುಟುಂಬದಲ್ಲಿ ಕಿರಿಕಿರಿ ನಮ್ಮ ಮಕ್ಕಳನ್ನು ನೋಡಿಕೊಳ್ಳದ ಸ್ಥಿತಿ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರಕ್ಕೆ ತಾಲೂಕು ಸರ್ಕಾರಿ ನೌಕರರ ಸಂಘದ ಅದ್ಯಕ್ಷ ರುದ್ರೇಶ್, ಸಂಘದ ಪದಾಧಿಕಾರಿಗಳು, ಶಿಕ್ಷಕರು ಬೆಂಬಲ ವ್ಯಕ್ತಪಡಿಸಿದರು.ಮುಷ್ಕರದಲ್ಲಿ ಗ್ರಾಮ ಆಡಳಿತಾಧಿಕಾರಿಗಳಾದ ಹಾರಿಕಾ ರಮೇಶ್, ಸಲ್ಮಾನ್, ಮಂಜುನಾಥ್, ಗುರುಶಂಕರ್, ಅನಂದ್ , ಪವನ್, ಸಬೀಹಾ ಭಾನು, ಕುಮಾರಿ, ಭವ್ಯ ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ