ಕನ್ನಡ ಭಾಷೆ ಬೆಳವಣಿಗೆಯಲ್ಲಿ ಕನ್ನಡೇತರರನ್ನು ತೊಡಗಿಸಿಕೊಳ್ಳಬೇಕು: ಚಿದ್ವಿಲಸ್

KannadaprabhaNewsNetwork |  
Published : May 31, 2026, 03:00 AM IST
ಚಿದ್ವಿಲಸ್‌ | Kannada Prabha

ಸಾರಾಂಶ

ಕನ್ನಡ ಭಾಷೆ, ಸಾಹಿತ್ಯ ಬೆಳವಣಿಗೆಯಲ್ಲಿ ಕನ್ನಡಿಗರು ಕನ್ನಡೇತರರನ್ನು ತೊಡಗಿಸಿಕೊಂಡಾಗ ಕನ್ನಡ ಹೆಚ್ಚು ಬಳಕೆ ಮತ್ತು ಪ್ರಾಶಸ್ತ್ಯವನ್ನು ಪಡೆಯುತ್ತದೆ ಎಂದು ಹಿರಿಯ ಪತ್ರಕರ್ತ ಚಿದ್ವಿಲಸ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಕನ್ನಡ ಭಾಷೆ, ಸಾಹಿತ್ಯ ಬೆಳವಣಿಗೆಯಲ್ಲಿ ಕನ್ನಡಿಗರು ಕನ್ನಡೇತರರನ್ನು ತೊಡಗಿಸಿಕೊಂಡಾಗ ಕನ್ನಡ ಹೆಚ್ಚು ಬಳಕೆ ಮತ್ತು ಪ್ರಾಶಸ್ತ್ಯವನ್ನು ಪಡೆಯುತ್ತದೆ ಎಂದು ಹಿರಿಯ ಪತ್ರಕರ್ತ ಚಿದ್ವಿಲಸ್ ಅಭಿಪ್ರಾಯಪಟ್ಟರು.

ಕೊಡಗು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇಲ್ಲಿನ ಕವಿ ಶಿಷ್ಯ ಪಂಜೆ ಮಂಗೇಶರಾಯರ ವೇದಿಕೆಯಲ್ಲಿ ಎರಡನೇ ದಿನದ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.ಕನ್ನಡ ಭಾಷೆ ಮತ್ತು ಸಾಹಿತ್ಯ ವಿಷಯಗಳಲ್ಲಿ ಅನ್ಯ ಭಾಷಿಕರಿಗೆ ವಿಶೇಷವಾದ ಕಾರ್ಯಕ್ರಮ ಸ್ಪರ್ಧೆಯನ್ನು ಏರ್ಪಡಿಸಿ ಅವರಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಸೊಬಗು ಮತ್ತು ಸೊಗಡನ್ನು ಪರಿಚಯಿಸುವ ಮೂಲಕ ಅವರಲ್ಲಿ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಬೇಕು. ಯುವ ಜನತೆಯಲ್ಲಿ ಮತ್ತು ವಿಶೇಷವಾಗಿ ಮಕ್ಕಳಲ್ಲಿ ಕನ್ನಡ ಸಾಹಿತ್ಯ ಮತ್ತು ಭಾಷೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.

‘ಕನ್ನಡ ಕಥಾ ಜಗತ್ತು ಮತ್ತು ಕೊಡಗು'''''''' ಎಂಬ ವಿಷಯ ಬಗ್ಗೆ ನಿವೃತ್ತ ಪ್ರಾಂಶುಪಾಲ, ಪತ್ರಕರ್ತ ಡಾ. ಜೆ. ಸೋಮಣ್ಣ ಮಾತನಾಡಿ, “ಕೊಡಗಿನಲ್ಲಿ ಮೊದಲ ಸ್ವಾತಂತ್ರ್ಯ ಕನ್ನಡ ಕತೆ” 1900ರಲ್ಲಿ ಕವಿ ಶಿಷ್ಯ ಪಂಜೆ ಮಂಗೇಶರಾಯರ ‘ನನ್ನ ಚಿಕ್ಕ ತಂದೆಯ ಉಯಿಲು’ ಎಂಬುದಾಗಿ ಉಲ್ಲೇಖಿಸಿ ಅವರು ಮುಂದೆ ಕೊಡಗಿನ ಕಥಾ ಜಗತ್ತಿನಲ್ಲಿ ಜೀವಪರ, ಪ್ರಗತಿಪರ ಮಾತ್ರವಲ್ಲದೆ ಬಂಡಾಯಗಾರ್ತಿ ಲೇಖಕಿಯಾಗಿ ಹೊರಹೊಮ್ಮಿದ್ದಾರೆ. 1927ರ ಸುಮಾರಿಗೆ ಈ ರೀತಿಯ ಸಾಹಿತ್ಯ ರಚನೆ ಮಾಡಿದ ಕೊಡಗಿನ ಗೌರಮ್ಮ ಆಗ 27ರ ಹರೆಯದವರಾಗಿದ್ದರು ಎಂಬುದು ಉಲ್ಲೇಖಾರ್ಹ. ಕೊಡಗಿನ ಗೌರಮ್ಮ ಅವರ ಕತೆಗಳಲ್ಲಿ ಬಾಲ್ಯ ವಿವಾಹ, ವಿಧವಾ ವಿವಾಹ, ಪುನರ್ ವಿವಾಹ ಮೊದಲಾದ ವಿಷಯಗಳ ಬಗ್ಗೆ ಬರೆದಿದ್ದು, ಕೊಡಗಿನ ಚಿತ್ರಣ ಮತ್ತು ಕೊಡಗಿನ ಜೀವನ ಚಿತ್ರಣ ಇಲ್ಲ ಎಂದು ವಿ಼ಷಾಧಿಸಿದರು‌.‘ಸಾಹಿತ್ಯ ಕ್ಷೇತ್ರದತ್ತ ಯುವ ಪೀಳಿಗೆಯನ್ನು ಆಕರ್ಷಿಸಲು ದಾರಿ’ ಎಂಬ ವಿಷಯ ಕುರಿತು ಮಾತನಾಡಿದ ಲೇಖಕರು ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರ ಆರ್.ಕೆ. ಬಾಲಚಂದ್ರ ಅವರು, ಸಾಹಿತ್ಯದ ನೀತಿ, ಸಾಹಿತ್ಯ ನಿರ್ಮಾಣ ಮತ್ತು ಸಾಹಿತ್ಯ ವನ್ಬು ಇಂದಿನ ಪೀಳಿಗೆಗೆ ತಲುಪಿಸುವ ಕೆಲಸದಲ್ಲಿ ನಾವು ಸೋತಿದ್ದೇವೆ. ಹಳೆಯ ಅಥವಾ ಹೊಸ ಸಾಹಿತ್ಯ ಮತ್ತು ಸಾಹಿತಿ ಬದಲಾಗಿಲ್ಲ‌. ಆದರೆ ನಾವು ನಮ್ಮ ಮಕ್ಕಳಿಗೆ, ಯುವ ಪೀಳಿಗಗೆ ಯಾವ ರೀತಿ ಹೇಳಿಕೊಡುತ್ತಿದ್ದೇವೆ ಅದು ಬದಲಾಗಬೇಕು. ಕತೆ ನಾಟಕಗಳಾಗಿ, ಕವಿತೆ ಸಂಗೀತವಾಗಿ ಮಕ್ಕಳ ಮನಸ್ಸನ್ನು ತಟ್ಟಬೇಕು. ನಮ್ಮ ನಡುವಿನ ಸಾಹಿತಿಗಳು, ಕವಿಗಳು ಸಾಮಾಜಿಕ ಜಾಲತಾಣ, ಡಿಜೀಟಲಿಕರಣದ ವಿವಿಧ ಮಾಧ್ಯಮಗಳ ಮೂಲಕ ಮಕ್ಕಳನ್ನು ತಲುಪಬೇಕು ಎಂದು ಕರೆ ನೀಡಿದರು.

‘ಕೊಡಗು ಕ್ರೀಡೆಯ ತವರೂರು ಆಗಬೇಕಾದ ಅನುಕೂಲಗಳು’ ವಿಷಯದ ಮೇಲೆ ಮಾತನಾಡಿದ ಕ್ರೀಡಾ ಬರಹಗಾರ ಚೆಪ್ಪುಡೀರ ಕಾರ್ಯಪ್ಪ ಅವರು, ಪುಟ್ಟ ಜಿಲ್ಲೆ ಕೊಡಗಿನಲ್ಲಿ 19 ಮಂದಿ ಒಲಿಂಪಿಕ್ ಆಟಗಾರರು, 2 ವಿಶ್ವಕಪ್ ಆಟಗಾರರು, ಇನ್ನೂರಕ್ಕೂ ಹೆಚ್ಚು ಹಾಕಿ ಆಟಗಾರರನ್ನು ಕೊಡಗು ನೀಡಿದೆ. ಕ್ರೀಡೆ ಈ ಜಿಲ್ಲೆಯ ಜನರ ರಕ್ತದಲ್ಲಿದೆ. ಕ್ರೀಡೆಗೆ ಜಾತಿ ಇಲ್ಲ‌. ಕೊಡಗಿನ ಕ್ರೀಡಾ ಶಾಲೆಗಳಲ್ಲಿ, ವಸತಿ ಗೃಹಗಳಲ್ಲಿ ಕ್ರೀಡಾ ಪಟುಗಳಿಗೆ ಹೆಚ್ಚಿನ ಅವಕಾಶವಾಗಬೇಕು. ಕೊಡಗನ್ನು ಕ್ರೀಡಾ ಜಿಲ್ಲೆ ಎಂದು ಘೋಷಿಸಬೇಕೆಂದು ಆಗ್ರಹಿಸಿದರು.

ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಮ. ಕೋಡಿರ ಲೋಕೇಶ್ ಮೊಣ್ಣಪ್ಪ ಮಾತನಾಡಿ, 1935ಕ್ಕಿಂತ ಹಿಂದೆಯೇ ಡಿವಿಜಿ ಅವರು ಕೊಡಗಿನ ಬೆಡಗು ಎಂಬ ಕವನದ ಮೂಲಕ ಕೊಡಗನ್ನು ವಿಶ್ವಕ್ಕೆ ಪರಿಚಯಿಸಿದ್ದಾರೆ. ಕೊಡಗಿನ ಭೂ ಪ್ರದೇಶದ ಸರ್ವೆಯನ್ನು 1911ರಲ್ಲಿ ಕೊಡಗಿನ ವೀರರಾಜನು ವೀರರಾಜನ ಶಿಸ್ತು ಎಂದು 35 ಸಂಪುಟದಲ್ಲಿ ಆನೆ ಚರ್ಮದ ಹೊದಿಕೆಯಲ್ಲಿ ಮಾಡಿಸಿ ಇಟ್ಟಿದ್ದಾನೆ. ಅದು ಡಿಜಿಟಲೀಕರಣವಾಗಿ ಜನ ಸಾಮಾನ್ಯರ ಕೈಗೆ ಸಿಗುವಂತಾಗಬೇಕು ಎಂದು ಅವರು ಆಶಿಸಿದರು‌.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಲೋಕನಾಥ್ ಅಮೆಚೂರು, ಸೋಮವಾರಪೇಟೆ ತಾಲೂಕು ಬಿಇಒ ಕೃಷ್ಣಪ್ಪ, ಸಮ್ಮೇಳನದ ಸರ್ವಾಧ್ಯಕ್ಷ ಸಾಹಿತಿ ಅಬ್ದುಲ್ ರಶೀದ್ ಇದ್ದರು‌.

ಟಿ.ಎಸ್ .ಸುಮಾ ಸ್ವಾಗತಿಸಿ, ಎ.ವಿ. ಮಂಜುನಾಥ ವಂದಿಸಿ, ಶ್ವೇತ ರವೀಂದ್ರ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
ಕೊಡವ ಜನಾಂಗದ ಆಚಾರ, ವಿಚಾರ, ಸಂಸ್ಕೃತಿ ಪದ್ಧತಿ ತೀರಾ ವಿಭಿನ್ನ, ವಿಶಿಷ್ಟತೆ: ಮುಂಡಂಡ ಸಿ ನಾಣಯ್ಯ