ಕನ್ನಡಪ್ರಭ ವಾರ್ತೆ ಕೊರಟಗೆರೆ
ವಾಸವಿ ಅನ್ನದಾನ ಸೇವಾ ಟ್ರಸ್ಟ್ ಚೇರ್‌ಮನ್ ಮದಂದಿ ರಮೇಶ್ ಮಾತನಾಡಿ, ಸರ್ಕಾರಿ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಉತ್ತಮ ಭವಿಷ್ಯಕ್ಕಾಗಿ ಪ್ರತಿ ವರ್ಷವು ಈ ಮಹತ್ವದ ಯೋಜನೆ ನಡೆಸುತ್ತಾ ಬಂದಿದ್ದೇವೆ. ನಮ್ಮಲ್ಲಿ ಅನೇಕ ದಾನಿಗಳಿದ್ದಾರೆ ಅದನ್ನು ಸರಿಯಾಗಿ ನಿಭಾಯಿಸುವ ಜನರ ಕೊರತೆ ಇದೆ. ಅದಕ್ಕಾಗಿ ನಾವೆಲ್ಲರೂ ಸೇರಿಕೊಂಡು ಬಡಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲೆಂದು ಶಿಕ್ಷಣದ ಪರಿಕರಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಸಿಪಿಐ ಅನಿಲ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಓದಿ ದೇಶದ ಅನೇಕ ಹುದ್ದೆಗಳನ್ನು ಅಲಂಕರಿಸಿ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ. ವಾಸವಿ ಟ್ರಸ್ಟ್ ಮತ್ತು ಬಾಲಾಜಿ ದರ್ಶನ್ ಕಡೆಯಿಂದ ನೀಡುತ್ತಿರುವ ಶಿಕ್ಷಣದ ಪರಿಕರಗಳನ್ನು ಪಡೆದು ಉನ್ನತ ವಿದ್ಯಾಭ್ಯಾಸದೊಂದಿಗೆ ಸಾಧಕರ ಪಟ್ಟಿಯಲ್ಲಿ ನಿಲ್ಲುವಂತೆ ಶಾಲಾ ಮಕ್ಕಳಿಗೆ ಸಲಹೆ ನೀಡಿದರು.ಸಮಾಜ ಸೇವಕ ಬಾಲಾಜಿ ದರ್ಶನ್ ಮಾತನಾಡಿ, ವಾಸವಿ ಅನ್ನದಾನ ಸೇವಾ ಟ್ರಸ್ಟ್ ಸಹಯೋಗದಲ್ಲಿ ಪ್ರತಿ ವರ್ಷ ಸರ್ಕಾರಿ ಶಾಲೆಯ ಬಡಮಕ್ಕಳಿಗೆ ನೋಟ್ ಬುಕ್, ಸ್ಟೇಷನರಿ, ಬೆಚ್ಚನೆ ಹೊದಿಕೆ ಜೊತೆಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬ್ಯಾಗ್, ಪರೀಕ್ಷಾ ಪ್ಲೇವುಡ್ ನ್ನು ವಿತರಿಸಿ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸಲಾಗುತ್ತಿದೆ. ವಿದ್ಯಾದಾನ ಜೊತೆಗೆ ಆಸ್ಪತ್ರೆ ರೋಗಿಗಳಿಗೆ ಊಟದ ವ್ಯವಸ್ಥೆ, ಬಡರೋಗಿಗಳ ಔಷಧಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಹೇಳಿದರು.
ಇದೆ ವೇಳೆ ವಾಸವಿ ಅನ್ನದಾನ ಸೇವಾ ಟ್ರಸ್ಟ್ ನ ಡಾ.ಪತಿ ಸೀತರಾಮಯ್ಯ, ರಮೇಶ್, ಬಾಲರಾಜು, ವಿಜಯ್ ಕುಮಾರ್, ರೋಟರಿ ರಾಮು, ನಾಗರಾಜು, ನಾಗಶಯನ, ರೀತು.ಜಿ, ನಿರ್ಮಿತ ನಾಗ, ಹೇಮಂತ್, ಶಿವಶಂಕರ್, ಸಾಗರ್, ದಿನೇಶ್, ರಮೇಶ್ ಸೇರಿದಂತೆ ಇತರರು ಇದ್ದರು.