ಪರವಾನಗಿ ಇಲ್ಲದೆ ತಡಸ-ಗೊಂದಿ ರಸ್ತೆ ಅಗೆತ-ನೋಟಿಸ್‌

KannadaprabhaNewsNetwork |  
Published : Aug 01, 2026, 03:45 AM IST
ಹಾನಗಲ್ಲಿನಲ್ಲಿ ಲೋಕೋಪಯೋಗಿ ರಸ್ತೆ ಅಗೆದಿರುವ ದೃಶ್ಯ. | Kannada Prabha

ಸಾರಾಂಶ

ಹಾನಗಲ್ಲಿನ ಎಪಿಎಂಸಿ ಹಾಗೂ ಬಸ್‌ಡಿಪೋ ಎದುರಿಗಿನ ತಡಸ್ ಗೊಂದಿ ರಸ್ತೆಯನ್ನು ಪೂರ್ವಾನುಮತಿ ಇಲ್ಲದೆ ಅಗೆದು, ವಾಹನ ಸಂಚಾರಕ್ಕೆ ವ್ಯತ್ಯಯ ಮಾಡಿರುವುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದು, ಈಗ ಲೋಕೋಪಯೋಗಿ ಇಲಾಖೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ನೊಟೀಸ್ ನೀಡಿ ಕಾಮಗಾರಿ ಸ್ಥಗಿತಕ್ಕೆ ಸೂಚಿಸಿದೆ.

ಹಾನಗಲ್ಲ: ಹಾನಗಲ್ಲಿನ ಎಪಿಎಂಸಿ ಹಾಗೂ ಬಸ್‌ಡಿಪೋ ಎದುರಿಗಿನ ತಡಸ್ ಗೊಂದಿ ರಸ್ತೆಯನ್ನು ಪೂರ್ವಾನುಮತಿ ಇಲ್ಲದೆ ಅಗೆದು, ವಾಹನ ಸಂಚಾರಕ್ಕೆ ವ್ಯತ್ಯಯ ಮಾಡಿರುವುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದು, ಈಗ ಲೋಕೋಪಯೋಗಿ ಇಲಾಖೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ನೋಟಿಸ್ ನೀಡಿ ಕಾಮಗಾರಿ ಸ್ಥಗಿತಕ್ಕೆ ಸೂಚಿಸಿದೆ.

ಹಾನಗಲ್ಲ ಪಟ್ಟಣದಲ್ಲಿರುವ ತಡಸ್ ಗೊಂದಿ ರಸ್ತೆ ಇತ್ತೀಚಿನ ವರ್ಷಗಳಲ್ಲಿ ಕೆಸಿಪ್‌ನಿಂದ ಕಾಮಗಾರಿ ಮಾಡಿ ಸುಗಮ ಸಂಚಾರಕ್ಕೆ ಅವಕಾಶವಾಗಿದೆ. ಆದರೆ ಈಗ ಕುಡಿಯುವ ನೀರು ನೈರ್ಮಲ್ಯ ಇಲಾಖೆಯಿಂದ ಮೇಘಾ ಕನಸ್ಟ್ರಕ್ಷನ್ ಏಜೆನ್ಸಿಯವರು ರಸ್ತೆ ಅಗೆಯಲು ಪರವಾನಗಿ ಹಾಗೂ ಅಗೆದ ರಸ್ತೆ ಮರು ನಿರ್ಮಾಣದ ಯಾವುದೇ ಕರಾರುಗಳನ್ನು ಹಾಗೂ ಅದಕ್ಕೆ ತಗಲುವ ವೆಚ್ಚವನ್ನು ಭರಿಸುವ ಒಪ್ಪಂದಗಳಿಲ್ಲದೆ ಕಾಮಗಾರಿ ಆರಂಭಿಸಿದ್ದಾರೆ. ಈ ಕಾಮಗಾರಿ ಆರಂಭಿಸದಂತೆ ಹಲವು ಬಾರಿ ತಿಳಿಸಿದ್ದಾಗ್ಗಿಯೂ ಏಜೆನ್ಸಿಯವರು ಕಾಮಗಾರಿ ಮುಂದುವರೆಸಿದ್ದನ್ನು, ಸಾರ್ವಜನಿಕರಿಂದ ತಿಳಿದು ಈಗ ಲೋಕೋಪಯೋಗಿ ಇಲಾಖೆ ಕಾಮಗಾರಿ ಸ್ಥಗಿತಕ್ಕೆ ಆದೇಶಿಸಿದೆ.

ಅಗೆದ ರಸ್ತೆ ಮರು ಕಾಮಗಾರಿಗೆ ತಗಲುವ ವೆಚ್ಚವನ್ನು ಭರಿಸಿ, ಇಲಾಖೆಯ ನಿಯಮಗಳನ್ವಯ ಪರವಾನಗಿ ಪಡೆದು ಕಾಮಗಾರಿ ಆರಂಭಿಸಬೇಕು. ಈಗಾಗಲೇ ಹಲವು ಬಾರಿ ಸೂಚನೆ ನೀಡಿದರೂ ನಮ್ಮ ಸೂಚನೆ ನಿರಾಕರಿಸಿರುವುದು ಸರಿ ಅಲ್ಲ. ಇನ್ನು ಪರವಾನಗಿ ಪಡೆಯದೇ ಕಾಮಗಾರಿ ಆರಂಭಿಸಿದರೆ ಕಾನೂನು ಕ್ರಮ ಅನಿವಾರ್ಯ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಎಸ್.ದೇವರಾಜ ಎಚ್ಚರಿಸಿದ್ದಾರೆ.

ನಿರಂತರ ಮಳೆ ಬೀಳುತ್ತಿರುವ ಸಂದರ್ಭದಲ್ಲಿ ರಸ್ತೆ ಅಗೆದಿದ್ದರಿಂದ ವಾಹನ ಓಡಾಟಕ್ಕೆ ಅನಾನುಕೂಲವಾಗಿದೆ. ಸಂಚಾರಕ್ಕೆ ಅನುಕೂಲಕರವಾದ ರಸ್ತೆಯನ್ನು ಎಲ್ಲೆಂದರಲ್ಲಿ ಅಗೆದಿರುವುದು, ಫುಟ್‌ಪಾತ್ ಇಲ್ಲದಂತಾಗಿರುವುದು, ಹಾನಗಲ್ಲ ಪಟ್ಟಣ ವ್ಯಾಪ್ತಿಯಲ್ಲಿ ಮೂರು ಕಿಮೀಗೂ ಅಧಿಕ ರಸ್ತೆ ಅಗೆಯುವುದು ಈ ಕಾಮಗಾರಿಯ ಅನಿವಾರ್ಯತೆ ಎನ್ನಲಾಗಿದೆಯಾದರೂ, ಅಗೆದ ರಸ್ತೆಯನ್ನು ಕೂಡಲೇ ಮರು ಕಾಮಗಾರಿ ಮಾಡಿ ಡಾಂಬರೀಕರಣ ಮಾಡುವುದು ತೀರ ಅಗತ್ಯ. ಈ ಬಗ್ಗೆ ಯಾವುದೇ ಕಾಳಜಿ ಇಲ್ಲದ ರಸ್ತೆ ಅಗೆದು ಪೈಪ್‌ಲೈನ್ ಹಾಕುತ್ತಿರುವುದು ಸಾರ್ವಜನಿಕರ ದೂರಿಗೆ ಕಾರಣವಾಗಿದೆ.

ರಸ್ತೆ ಅಗೆದು ಪೈಪ್‌ಲೈನ್ ಹಾಕುತ್ತಿರುವುದರ ಬಗ್ಗೆ ಮೌಖಿಕವಾಗಿ ಬಂದ್ ಮಾಡಲು ತಿಳಿಸಲಾಗಿತ್ತು. ಆದಾಗ್ಯೂ ಮೇಘಾ ಕನಸ್ಟ್ರಕ್ಷನ್ ಏಜೆನ್ಸಿಯವರು ರಸ್ತೆ ಅಗೆಯಲು ಮುಂದಾಗಿರುವುದನ್ನು ತಡೆದು ನೋಟಿಸ್ ನೀಡಲಾಗಿದೆ. ಕಾನೂನು ರೀತಿಯಲ್ಲಿ ಪರವಾನಗಿ ಪಡೆದ ನಂತರವೇ ಕಾಮಗಾರಿಗೆ ಅವಕಾಶ ನೀಡಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆಯ ಎಇಇ ಎಸ್.ದೇವರಾಜ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದುಷಿ ಡಾ. ಉಷಾ ಹೆಬ್ಬಾರ್ ಗೆ ಗುರುವಂದನೆ
ಮಾನವ ಹಸ್ತಕ್ಷೇಪದಿಂದ ಪ್ರಕೃತಿ ವಿಕೋಪ: ದಿನೇಶ್ ಹೊಳ್ಳ