ಕೈಗಾರಿಕೆ ಉದ್ದೇಶಕ್ಕೆ ಕಾಯ್ದಿರಿಸಿದ ಜಮೀನಿನಲ್ಲಿ ಅಕ್ರಮ ಬಡಾವಣೆ: ನೋಟಿಸ್
ಕನ್ನಡಪ್ರಭ ವಾರ್ತೆ ಕೆಜಿಎಫ್ಕೆಜಿಎಫ್ನ ನಗಾರಭಿವೃದ್ದಿ ಪ್ರಾಧಿಕಾರದ ಮಹಾಯೋಜನೆಯಲ್ಲಿ ಕೈಗಾರಿಕೆಗಾಗಿ ಕಾಯ್ದಿರಿಸಿದ ಪ್ರದೇಶದಲ್ಲಿ ಅಕ್ರಮವಾಗಿ ವಸತಿ ನೀವೇಶನಗಳನ್ನಾಗಿ ನಿರ್ಮಿಸಿ ಕೆಸರನಹಳ್ಳಿ ಗ್ರಾಪಂನಲ್ಲಿ ಬಿ ಖಾತೆಗಳನ್ನು ಮಾಡಿಸಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯತರ ರು.ಗಳನ್ನು ನಷ್ಟ ಮಾಡಿರುವ ಹಿನ್ನೆಲೆಯಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರು ಬಡಾವಣೆಯ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಜಿಪಂ ಸಿಇಒ ಅವರಿಗೆ ಕೆಸರನಹಳ್ಳಿ ಗ್ರಾಪಂ ಅಭಿವೃದ್ದಿ ಅಧಿಕಾರಿ ವಿರುದ್ದ ದೂರು ನೀಡಿದ್ದಾರೆ.
ನಗರಾಭಿವೃದ್ದಿ ಪ್ರಾಧಿಕಾರದ ನಕ್ಷೆ ಅನುಮೋದನೆ ಇಲ್ಲದೆ ೧೧ಬಿ ಖಾತೆಗಳನ್ನು ಮಾಡಿರುವ ಪಿಡಿಒಗಳ ವಿರುದ್ದ ಕ್ರಿಮಿನಲ್ ಮೊಕ್ಕದೊಮೆ ದಾಖಲಿಸಲಾಗುವುದೆಂದು ಎಚ್ಚರಿಕೆ ನೀಡಿದ್ದರೂ ಕೆಸರನಲ್ಲಿ ಗ್ರಾಪಂ ಪಿಡಿಒ ೧೧ ಬಿ ಖಾತೆಗಳನ್ನು ತೆರೆದು ಬೊಕ್ಕಸಕ್ಕೆ ನಷ್ಟವುಂಟು ಮಾಡಿದ್ದಾರೆ.ಕೆಜಿಎಫ್‌ನ ನಗರಾಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಕಸಬಾ ಹೋಬಳಿಯ ಬೆಂಗನೂರು ಗ್ರಾಮದಲ್ಲಿ ಸಾಯಿಬಾಬ ದೇವಾಲಯದ ಮುನಿಮಾರಪ್ಪ ಅನಧಿಕೃತ ಬಡಾವಣೆ ನಿರ್ಮಿಸಿರುವ ಹಿನ್ನೆಲೆಯಲ್ಲಿ ಪ್ರಾಧಿಕಾರದ ಆಯುಕ್ತ ಧರ್ಮೇಂದ್ರ ಪತ್ರವನ್ನು ಬರೆದಿದ್ದು, ಬಡಾವಣೆಯ ಮಾಲೀಕ ಮುನಿಮಾರಪ್ಪರಿಗೆ ನೋಟಿಸ್ ಜಾರಿ ಮಾಡಿ ಬಡಾವಣೆ ನೆಲಸಮಗೊಳಿಸುವಂತೆ ತಹಸೀಲ್ದಾರ್ ರಶ್ಮಿ ಅವರಿಗೆ ಸೂಚಿಸಿದ್ದಾರೆ.
ಸದರಿ ಬಡಾವಣೆ ಕೆಜಿಎಫ್ ನಗರಾಭಿವೃದ್ದಿ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಗೆ ಒಳಪಟ್ಟಿದ್ದರೂ ಅಕ್ರಮವಾಗಿ ಬಡವಾಣೆ ನಿರ್ಮಿಸಿದ್ದಾರೆ.ಪ್ರಭಾವಿ ವ್ಯಕ್ತಿಗಳು ಬಡಾವಣೆಗಳನ್ನು ನಿರ್ಮಿಸಲು ಕಾನೂನು ಉಲ್ಲಂಘಸಿ ಯಾವುದೇ ಮಾನದಂಡಗಳನ್ನು ಅನುಸರಿಸದೆ ಬಡಾವಣೆಗಳನ್ನು ನಿರ್ಮಿಸುತ್ತಿದ್ದು, ಸ್ಥಳೀಯ ಗ್ರಾಮ ಪಂ, ಪಿಡಿಓ ಕಣ್ಣು ಮುಚ್ಚಿ ಕುಳಿತಿದ್ದಾರೆ, ಅದರಲ್ಲೂ ಕೆರೆ ಒತ್ತುವರಿ, ಕೆರೆಯ ಪಕ್ಕದಲ್ಲಿ ಬಫರ್‌ಜೋನ್ ಬಿಡಬೇಕೆಂದು ಆದೇಶವಿದ್ದರೂ ಕಡೆಗಣಿಸಲಾಗಿದೆ. ಕೋಟ್ಕೆಜಿಎಫ್ ಮತ್ತು ಬಂಗಾರಪೇಟೆ ತಾಲೂಕುಗಳಲ್ಲಿ ಪಿಡಿಒಗಳು ಕಾನೂನು ಉಲ್ಲಂಘಸಿ ಅಕ್ರಮ ಬಡಾವಣೆಗಳಲ್ಲಿ ಅಂದಾಜು ೨೩ ಸಾವಿರ ೧೧ ಬಿ ಖಾತೆ ಮಾಡಿಕೊಟ್ಟು ಪ್ರಾಧಿಕಾರಕ್ಕೆ ₹೨೦ ಕೋಟಿಗೂ ಹೆಚ್ಚು ತೆರಿಗೆ ನಷ್ಟವನ್ನು ಉಂಟು ಮಾಡಿದ್ದಾರೆ, ೧೧ ಬಿ ಖಾತೆಗಳನ್ನು ಪಿಡಿಒಗಳು ರದ್ದುಪಡಿಸದೆ ಇದ್ದರೆ ಸರ್ಕಾರದ ಅದೇಶದಂತೆ ಪಿಡಿಒಗಳ ವಿರುದ್ಧ ಕ್ರಿಮಿನಲ್ ಪ್ರಕಣವನ್ನು ದಾಖಲಿಸಲಾಗುವುದು.
- ಧರ್ಮೇಂಧ್ರ, ಪ್ರಾಧಿಕಾರದ ಆಯುಕ್ತ.