ಕನ್ನಡಪ್ರಭ ವಾರ್ತೆ ಉಡುಪಿ
ಈ ದಿನಗಳಲ್ಲಿ ಗೀತೆಗೆ ಸಂಬಂಧಿಸಿದ ಪ್ರವಚನ, ಸಾಂಸ್ಕೃತಿಕ ಕಾರ್‍ಯಕ್ರಮ, ಗೀತಾ ಯಜ್ಞ ಇತ್ಯಾದಿ ಹಮ್ಮಿಕೊಳ್ಳಲಾಗುವುದು. ಜೊತೆಗೆ ಗೀತೆಯ ಪ್ರಚಾರ ಕಾರ್‍ಯದಲ್ಲಿ ತೊಡಗಿದವರನ್ನು ಗೌರವಿಸಲಾಗುವುದು ಎಂದರು.ವಿಶ್ವ ಗೀತಾ ಒಲಿಂಪಿಯಾಡ್: ಇದೇ ಸಂದರ್ಭದಲ್ಲಿ ಭಗವದ್ಗೀತೆ ಕುರಿತು ಒಲಿಂಪಿಯಾಡ್ ಮಾದರಿಯಲ್ಲಿ ಜಾಗತಿಕ ಮಟ್ಟದಲ್ಲಿ ಆನ್‌ಲೈನ್‌ನಲ್ಲಿ ವಿಶ್ವ ಗೀತಾ ಸ್ಪರ್ಧೆ ಆಯೋಜಿಸಲಾಗುತ್ತಿದೆ. ನ. ೨೦ರಂದು ಸ್ಪರ್ಧೆಗೆ ಚಾಲನೆ ನೀಡಲಾಗುತ್ತಿದ್ದು, ೧೦ - ೧೮ ವರ್ಷದೊಳಗಿನ ಮಕ್ಕಳ ಹಾಗೂ ೧೮ ವರ್ಷ ಮೇಲ್ಪಟ್ಟವರ ಗುಂಪು ವಿಭಾಗಗಳಲ್ಲಿ ಸ್ಪರ್ಧೆ ಮೂರು ಹಂತಗಳಲ್ಲಿ ನಡೆಸಲಾಗುತ್ತಿದೆ. ಸುಮಾರು ೨೫ ಸಾವಿರ ಮಂದಿ ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಪ್ರಥಮ ಬಹುಮಾನ ೧ ಲಕ್ಷ ಹಾಗೂ ದ್ವಿತೀಯ, ತೃತೀಯ ಹಾಗೂ ಚತುರ್ಥ ಬಹುಮಾನ ಅನುಕ್ರಮವಾಗಿ ೭೫ ಸಾವಿರ, ೫೦ ಸಾವಿರ ಮತ್ತು ೨೫ ಸಾವಿರ ರೂ. ನಗದು ಹಾಗೂ ಪ್ರಮಾಣಪತ್ರ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಆನ್‌ಲೈನ್‌ನಲ್ಲಿ ಪ್ರಮಾಣಪತ್ತ ನೀಡಲಾಗುವುದು ಎಂದು ಸ್ಪರ್ಧೆ ಸಂಯೋಜಕ ಪ್ರಮೋದ್ ಸಾಗರ್ ತಿಳಿಸಿದರು.ಸಹಸ್ರ ಕಂಠ ಗೀತೆ ಗಾಯನ
ಡಿ. ೧೧ರಂದು ಸಾವಿರ ಮಂದಿಯಿಂದ ಭಗವದ್ಗೀತೆ ಶ್ಲೋಕ ಪಠಣ ಹಾಗೂ ಅದಕ್ಕೆ ಪೂರಕವಾಗಿ ದಾಸರ ಪದಗಳ ಸಹಸ್ರ ಕಂಠ ಗೀತ ಗಾಯನ ಕಾರ್‍ಯಕ್ರಮ ರಾಜಾಂಗಣದಲ್ಲಿ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವ ಅಂಗವಾಗಿ ವಿಶೇಷ ಅಂಚೆ ಲಕೋಟೆ ಬಿಡುಗಡೆ ನಡೆಯಲಿದೆ ಎಂದು ಕಾರ್‍ಯಕ್ರಮ ಸಂಯೋಜಕ ಅನಂತಕೃಷ್ಣಪ್ರಸಾದ್ ತಿಳಿಸಿದರು.ಬೃಹತ್ ಗೀತೋತ್ಸವ ಸಂದರ್ಭದಲ್ಲಿ ಮಂಗಳೂರಿನ ಕಥಾಬಿಂದು ಸಂಸ್ಥೆಯವರಿಂದ ಗೀತಾ ಸಾಹಿತ್ಯೋತ್ಸವ, ಗೀತಾ ನೃತ್ಯೋತ್ಸವ, ಗೀತಾ ಯಕ್ಷಗಾನ ಇತ್ಯಾದಿ ಕಾರ್‍ಯಕ್ರಮ ಆಯೋಜಿಸಿರುವುದಾಗಿ ಸಾಂಸ್ಕೃತಿಕ ಕಾರ್‍ಯದರ್ಶಿ ರಮೇಶ ಭಟ್ ವಿವರಿಸಿದರು.ಕಾಂಚಿ ಶ್ರೀಗಳಿಂದ ಚಾಲನೆ