ಮಣಿಪಾಲ ಆರೋಗ್ಯಕಾರ್ಡ್ ನೋಂದಣಿಗೆ ನ.30 ಕೊನೆಯ ದಿನ

KannadaprabhaNewsNetwork |  
Published : Nov 26, 2024, 12:49 AM IST
25ಕಾರ್ಡ್ | Kannada Prabha

ಸಾರಾಂಶ

ಮಣಿಪಾಲ್ ಆರೋಗ್ಯ ಕಾರ್ಡ್‌ದಾರರು ತಜ್ಞ ಮತ್ತು ಸೂಪರ್ ಸ್ಪೆಷಲಿಸ್ಟ್ ವೈದ್ಯರೊಂದಿಗೆ ಸಮಾಲೋಚನೆ ಶುಲ್ಕದಲ್ಲಿ ಶೇ. 50, ರೋಗನಿರ್ಣಯ ಮತ್ತು ಪ್ರಯೋಗಾಲಯ ಪರೀಕ್ಷೆ ಸೇವೆಯಲ್ಲಿ ಶೇ.25, ರೇಡಿಯಾಲಜಿ, ಹೊರರೋಗಿ ಕಾರ್ಯವಿಧಾನಗಳು ಮತ್ತು ಮಧುಮೇಹ ಪಾದದ ಆರೈಕೆಯಲ್ಲಿ ಶೇ.20, ಡಯಾಲಿಸಿಸ್‌ನಲ್ಲಿ 100 ರು., ಆಸ್ಪತ್ರೆಯ ಔಷಧಿಗಳ ಮೇಲೆ ಶೇ.10 ಮತ್ತು ಜನರಲ್ ವಾರ್ಡ್‌ನಲ್ಲಿ ಒಳರೋಗಿಗಳ ಬಿಲ್‌ಗಳಲ್ಲಿ ಶೇ.25 ರಿಯಾಯಿತಿ ಸೌಲಭ್ಯವಿದೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ಮಣಿಪಾಲ ಆರೋಗ್ಯಕಾರ್ಡ್ 2024ರ ನೋಂದದಣಿಗೆ ನ.30 ಕೊನೆಯ ದಿನ ಎಂದು ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಠ ಮೌಲ್ಯ ಮತ್ತು ವಿಶ್ವಾಸಾರ್ಹ ಸೇವೆ ಎಂಬುದು ಮಣಿಪಾಲ್ ಆರೋಗ್ಯ ಕಾರ್ಡ್ ಯೋಜನೆಯ ಧ್ಯೇಯ ವಾಕ್ಯ. ಈ ಕಾರ್ಡ್ ಆಸ್ಪತ್ರೆಯ ಎಲ್ಲ ಆರೋಗ್ಯ ಸೇವೆಗಳ ಮೇಲೆ ರಿಯಾಯಿತಿ ನೀಡುತ್ತದೆ. ಸಣ್ಣ ಮೊತ್ತವನ್ನು ಪಾವತಿಸುವ ಮೂಲಕ, ಯಾರೂ ಈ ಯೋಜನೆಯ ಸದಸ್ಯರಾಗಿ ಪ್ರಯೋಜನ ಪಡೆಯಬಹುದು. ಕಾರ್ಡ್ ಖರೀದಿಸಲು ಹೂಡಿಕೆ ಮಾಡಿದ ಹಣವನ್ನು ಕೇವಲ 2-3 ಕಾರ್ಡ್ ಬಳಕೆಗಳಲ್ಲಿ ರಿಯಾಯಿತಿಯ ರೂಪದಲ್ಲಿ ಹಿಂಪಡೆಯಬಹುದು.

ಮಣಿಪಾಲ್ ಆರೋಗ್ಯ ಕಾರ್ಡ್‌ದಾರರು ತಜ್ಞ ಮತ್ತು ಸೂಪರ್ ಸ್ಪೆಷಲಿಸ್ಟ್ ವೈದ್ಯರೊಂದಿಗೆ ಸಮಾಲೋಚನೆ ಶುಲ್ಕದಲ್ಲಿ ಶೇ. 50, ರೋಗನಿರ್ಣಯ ಮತ್ತು ಪ್ರಯೋಗಾಲಯ ಪರೀಕ್ಷೆ ಸೇವೆಯಲ್ಲಿ ಶೇ.25, ರೇಡಿಯಾಲಜಿ, ಹೊರರೋಗಿ ಕಾರ್ಯವಿಧಾನಗಳು ಮತ್ತು ಮಧುಮೇಹ ಪಾದದ ಆರೈಕೆಯಲ್ಲಿ ಶೇ.20, ಡಯಾಲಿಸಿಸ್‌ನಲ್ಲಿ 100 ರು., ಆಸ್ಪತ್ರೆಯ ಔಷಧಿಗಳ ಮೇಲೆ ಶೇ.10 ಮತ್ತು ಜನರಲ್ ವಾರ್ಡ್‌ನಲ್ಲಿ ಒಳರೋಗಿಗಳ ಬಿಲ್‌ಗಳಲ್ಲಿ ಶೇ.25 ರಿಯಾಯಿತಿ ಸೌಲಭ್ಯವಿದೆ.ಮಣಿಪಾಲ್ ಆರೋಗ್ಯ ಕಾರ್ಡ್ 2024ರ ಯೋಜನೆಯು ‘ಒಂದು ವರ್ಷದ ಯೋಜನೆಯಲ್ಲಿ ಕಾರ್ಡಿನ ಸದಸ್ಯತ್ವವು ಒಬ್ಬರಿಗೆ 350 ರು., ಕೌಟಂಬಿಕ ಕಾರ್ಡ್ ಅಂದರೆ ಕಾರ್ಡುದಾರ ಮತ್ತವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳಿಗೆ 700 ರು. ಮತ್ತು ಕುಟುಂಬ ಪ್ಲಸ್ ಯೋಜನೆಗೆ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳು ಮತ್ತು 4 ಪೋಷಕರು (ತಂದೆ, ತಾಯಿ, ಅತ್ತೆ ಮತ್ತು ಮಾವ) 900 ರು.. ಇದೊಂದು ಹೆಚ್ಚುವರಿ ಲಾಭವಾಗಿದೆ. 2 ವರ್ಷದ ಯೋಜನೆಯಲ್ಲಿ ಒಬ್ಬರಿಗೆ 600 ರು., ಕುಟುಂಬಕ್ಕೆ 950 ರು. ಮತ್ತು ಕೌಟಂಬಿಕ ಪ್ಲಸ್ ಯೋಜನೆಗೆ 1100 ರು. ಆಗಿರುತ್ತದೆ. ಮಣಿಪಾಲ, ಮಂಗಳೂರು ಮತ್ತು ಇತರ ಆಸ್ಪತ್ರೆಗಳಲ್ಲಿನ ರಿಯಾಯಿತಿ ಸೌಲಭ್ಯ ಮತ್ತು ಸ್ವಯಂ ನೋಂದಣಿಗೆ www.manipalhealthcard.com ಗೆ ಭೇಟಿ ನೀಡಿ ಅಥವಾ 9980854700 / 08202923748 ಅನ್ನು ಸಂಪರ್ಕಿಸಬಹುದು ಅಥವಾ ಅಧಿಕೃತ ಪ್ರತಿನಿಧಿಗಳ ಮೂಲಕ ನೋಂದಣಿ ಮಾಡಬಹುದು.

PREV

Recommended Stories

ಛಾಯಾಗ್ರಾಹಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ
ಹಿಂದೂ ಸಮಾಜ ಸಂಘಟನೆಗೆ ಆರ್‌ಎಸ್ಎಸ್‌ ಪಾತ್ರ ಅಗಾಧ