ಉದ್ಯೋಗಕ್ಕೆ ಆಗ್ರಹಿಸಿ ನರೇಗಾ ಕಾರ್ಮಿಕರ ಪ್ರತಿಭಟನೆ

KannadaprabhaNewsNetwork |  
Published : May 09, 2026, 02:15 AM IST
ಸೂರಣಗಿಯಲ್ಲಿ ನರೇಗಾ ಕಾರ್ಮಿಕರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಕೂಲಿ ಕಾರ್ಮಿಕರು ಗುಳೆ ಹೋಗಬಾರದು ಹಾಗೂ ಕೂಲಿ ಕಾರ್ಮಿಕರ ಗ್ರಾಮದಲ್ಲಿ ಕೆಲಸ ಸಿಗುತ್ತದೆ ಎಂದು ಸರ್ಕಾರ ಹೇಳುತ್ತಿದ್ದರೂ ಕೂಲಿ ಕೆಲಸ ನೀಡುವಲ್ಲಿ ಅಧಿಕಾರಿಗಳು ಮೀನಮೇಷ ಮಾಡುತ್ತಾರೆ.

ಲಕ್ಷ್ಮೇಶ್ವರ: ಸೂರಣಗಿ ಗ್ರಾಪಂ ವತಿಯಿಂದ ಪ್ರತಿವರ್ಷ ಉದ್ಯೋಗ ಖಾತ್ರಿಯಲ್ಲಿ ಕಾರ್ಮಿಕರಿಗೆ ನೀಡಬೇಕಾದ ಕೆಲಸ ನೀಡಲು ಪೂರ್ವ ನಿಯೋಜಿತವಾಗಿರದೆ ಅಧಿಕಾರಿಗಳ ನಿಷ್ಕಾಳಜಿಯಿಂದ ಕಾರ್ಮಿಕರು ನಿರುದ್ಯೋಗಿಗಳಾಗುತ್ತಿದ್ದಾರೆ ಎಂದು ಆರೋಪಿಸಿ ಶುಕ್ರವಾರ ಗ್ರಾಮದ ಕಾರ್ಮಿಕರು ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಈ ವೇಳೆ ಕೂಲಿ ಕಾರ್ಮಿಕರು ಮಾತನಾಡಿ, ಕಳೆದ ಎರಡು ದಿನದಿಂದ ಗ್ರಾಪಂ ಹೋಗಿ ಜಾಬ್ ಕಾರ್ಡ್ ಕೊಟ್ಟು ಸರಿಪಡಿಸಿ ಬಂದರೂ ಎನ್‌ಎಂಆರ್ ಹಾಕಲಾರದೆ ಕೆಲಸ ನಡೆಯುವ ಸ್ಥಳದಲ್ಲಿ ಫೇಸ್ ಲಾಕ್ ಒಪನ್ ಆಗದೆ ಕೂಲಿ ಕಾರ್ಮಿಕರು ಕೆಲಸದಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.

ಕೂಲಿ ಕಾರ್ಮಿಕರು ಗುಳೆ ಹೋಗಬಾರದು ಹಾಗೂ ಕೂಲಿ ಕಾರ್ಮಿಕರ ಗ್ರಾಮದಲ್ಲಿ ಕೆಲಸ ಸಿಗುತ್ತದೆ ಎಂದು ಸರ್ಕಾರ ಹೇಳುತ್ತಿದ್ದರೂ ಕೂಲಿ ಕೆಲಸ ನೀಡುವಲ್ಲಿ ಅಧಿಕಾರಿಗಳು ಮೀನಮೇಷ ಮಾಡುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ತಾಂತ್ರಿಕ ಸಮಸ್ಯೆ ಬಗೆಹರಿಸಿ ಕೂಲಿ ನೀಡಬೇಕು. ಇನ್ನೂ ಹಲವು ಸಮಸ್ಯೆಯಿಂದ ಕಾರ್ಮಿಕರು ಕೂಲಿಯಿಂದ ವಂಚಿತರಾಗುವಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮುತ್ತವ್ವ ಹಡಪದ, ಲಕ್ಷ್ಮೀ ಶಿರನಹಳ್ಳಿ, ಬಸಪ್ಪ ಕರಿಹಾಳ, ಬಾಬುಸಾಬ ಪಿಂಜಾರ, ಮಹಾಂತೇಶ ಮಳಗಿ, ಲಲಿತಾ ಬೆಟಗೇರಿ, ಶಾಂತವ್ವ ದಾಸರ್, ದೇವಪ್ಪ ರಾಹುತರ, ಶಿವರಾಜ ರಾಹುತರ, ಶಿವಾನಂದ ಮೂಲಿಮನಿ ಸೇರಿದಂತೆ ಅನೇಕರು ಇದ್ದರು. ಇಂದಿನಿಂದ ಮಕ್ಕಳ ಸಾಹಿತ್ಯ ಸಮ್ಮೇಳನ

ಗದಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಎಂ.ಎಸ್. ಹುಲ್ಲೂರ ಹೈಟೆಕ್ ಕೋಚಿಂಗ್ ಸೆಂಟರ್ ಸಹಯೋಗದಲ್ಲಿ ಎರಡು ದಿನಗಳ ಕಾಲ ಮಕ್ಕಳ ಸಾಹಿತ್ಯ ಸಮ್ಮೇಳನ ಮೇ 9 ಹಾಗೂ 10ರಂದು ನಗರದ ವಿಜಯ ಲಲಿತಕಲಾ ಮಹಾವಿದ್ಯಾಲಯ ರಾಜೀವಗಾಂಧಿ ನಗರದಲ್ಲಿ ಜರುಗಲಿದೆ. ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯ ಬೆಳವಣಿಗೆ ವಿಷಯವಾಗಿ ಮಕ್ಕಳ ಸಾಹಿತಿಗಳೊಂದಿಗೆ ಚರ್ಚೆ ಹಾಗೂ ಮಕ್ಕಳಿಗೆ ಪ್ರಾಯೋಗಿಕ ಸಾಹಿತ್ಯ ಚಟುವಟಿಕೆಗಳು ಜರುಗಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೆಡ್ ಕ್ರಾಸ್ ಮಾನವೀಯ ಸೇವೆಯ ಪ್ರತೀಕ
ಮುರುಡೇಶ್ವರದಲ್ಲಿ ಕಾರು ಅಪಘಾತ: ಒಬ್ಬ ಸಾವು, ಮೂವರಿಗೆ ಗಾಯ