ಮಕ್ಕಳ ಆರೈಕೆಗೆ ಕೂಸಿನ ಮನೆ ಸಹಕಾರಿ: ಪಾಟೀಲ

KannadaprabhaNewsNetwork |  
Published : Dec 13, 2023, 01:00 AM IST
೧೨ವೈಎಲ್‌ಬಿ೨:ಯಲಬುರ್ಗಾದ ತಾಪಂ ಸಾಮರ್ಥ್ಯ ಕೇಂದ್ರದಲ್ಲಿ ಮಂಗಳವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಯಲಬುರ್ಗಾ ಹಾಗೂ ಕುಕನೂರ ತಾಲೂಕಿನ ಅವಳಿ ತಾಲೂಕಿನ ಶಿಶುಪಾಲಕಿಯರಿಗೆ  ಎರಡನೇ ಹಂತದ ೭ ದಿನಗಳ ಮಕ್ಕಳ ಆರೈಕೆದಾರರ ತರಬೇತಿ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಯಲಬುರ್ಗಾಮಕ್ಕಳೇ ಭವಿಷ್ಯದ ನಾಗರಿಕರು, ಮಕ್ಕಳ ಆರೈಕೆ ಅತಿ ಮುಖ್ಯವಾಗಿದ್ದು, ಗ್ರಾಪಂ ಕೂಸಿನ ಮನೆಗಳು ಸಹಕಾರಿಯಾಗಲಿವೆ ಎಂದು ತಾಪಂ ಇಒ ಸಂತೋಷ ಪಾಟೀಲ್ ಬಿರಾದಾರ್ ಹೇಳಿದರು.ಪಟ್ಟಣದ ತಾಪಂ ಸಾಮರ್ಥ್ಯ ಕೇಂದ್ರದಲ್ಲಿ ಮಂಗಳವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಯಲಬುರ್ಗಾ ಹಾಗೂ ಕುಕನೂರ ತಾಲೂಕಿನ ಅವಳಿ ತಾಲೂಕಿನ ಶಿಶುಪಾಲಕಿಯರಿಗೆ ಎರಡನೇ ಹಂತದ ೭ ದಿನಗಳ ಮಕ್ಕಳ ಆರೈಕೆದಾರರ ತರಬೇತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಶಿಶುಪಾಲನ ಕೇಂದ್ರದಲ್ಲಿ ಮಕ್ಕಳಿಗೆ ಎಲ್ಲ ರೀತಿಯ ಮೂಲ ಸೌಕರ್ಯ ಒದಗಿಸಲಾಗುತ್ತಿದೆ ಪಾಲಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಮಕ್ಕಳೇ ಭವಿಷ್ಯದ ನಾಗರಿಕರು, ಮಕ್ಕಳ ಆರೈಕೆ ಅತಿ ಮುಖ್ಯವಾಗಿದ್ದು, ಗ್ರಾಪಂ ಕೂಸಿನ ಮನೆಗಳು ಸಹಕಾರಿಯಾಗಲಿವೆ ಎಂದು ತಾಪಂ ಇಒ ಸಂತೋಷ ಪಾಟೀಲ್ ಬಿರಾದಾರ್ ಹೇಳಿದರು.

ಪಟ್ಟಣದ ತಾಪಂ ಸಾಮರ್ಥ್ಯ ಕೇಂದ್ರದಲ್ಲಿ ಮಂಗಳವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಯಲಬುರ್ಗಾ ಹಾಗೂ ಕುಕನೂರ ತಾಲೂಕಿನ ಅವಳಿ ತಾಲೂಕಿನ ಶಿಶುಪಾಲಕಿಯರಿಗೆ ಎರಡನೇ ಹಂತದ ೭ ದಿನಗಳ ಮಕ್ಕಳ ಆರೈಕೆದಾರರ ತರಬೇತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಶಿಶುಪಾಲನ ಕೇಂದ್ರದಲ್ಲಿ ಮಕ್ಕಳಿಗೆ ಎಲ್ಲ ರೀತಿಯ ಮೂಲ ಸೌಕರ್ಯ ಒದಗಿಸಲಾಗುತ್ತಿದೆ ಪಾಲಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಮಕ್ಕಳ ಭವಿಷ್ಯ ಉಜ್ವಲವಾಗಬೇಕಾದರೆ ಅವರ ಸರ್ವತೋಮುಖ ಬೆಳವಣಿಗೆಯಾಗುವುದು ಅತಿ ಮುಖ್ಯ. ಮಕ್ಕಳಿಗೆ ೬ ತಿಂಗಳಿಂದ ೩ ವರ್ಷದವರೆಗೆ ಸರಿಯಾಗಿ ಬೆಳವಣಿಗೆಯಾಗಲು ಶಿಶುಪಾಲನೆ ಕೇಂದ್ರಗಳು ಪ್ರಮುಖವಾಗಿ ಕಾರ್ಯ ನಿರ್ವಹಿಸುತ್ತವೆ. ಅದರಂತೆ ತರಬೇತಿಯಲ್ಲಿ ಮಕ್ಕಳ ಆರೈಕೆದಾರರಿಗೆ ಅಭಿನಯ ಗೀತೆಗಳು, ಸಣ್ಣ ಕಥೆಗಳು, ಹಾಡುಗಳು ಹಾಗೂ ನಾಟಕ ಸಂಪನ್ಮೂಲ ವ್ಯಕ್ತಿಗಳು ಹೇಳಿಕೊಡಲಾಗುತ್ತದೆ ಎಂದರು.

ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೆಶಕಿ ಗೀತಾ ಅಯ್ಯಪ್ಪ, ಶರಣಪ್ಪ ಕೆಳಗಿನಮನಿ, ಶಿಶು ಅಭಿವೃದ್ಧಿ ಅಧಿಕಾರಿ ಬೆಟದಪ್ಪ ಮಾಳೆಕೊಪ್ಪ, ತರಬೇತಿಯ ಮಾಸ್ಟರ್ ಟ್ರೇನರ್ ಶ್ರೀನಿವಾಸ್ ಚಿತ್ರಗಾರ್, ತಾಲೂಕು ಐಇಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ, ಶರಣಪ್ಪ ಹಾಳಕೇರಿ, ಮಹಿಳಾ ಮತ್ತು ಮಕ್ಕಳ ಮೇಲ್ವಿಚಾರಕಿ ಜಯಲಕ್ಷ್ಮೀ ಮೆಣಸಿನಕಾಯಿ, ಜಯಶ್ರೀ ಮತ್ತು ಮಹಾದೇವಿ ಹಾಗೂ ಶಿಶು ಪಾಲನ ಕೇಂದ್ರಗಳ ಆರೈಕೆದಾರರದಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು