ಅಡಿಕೆ ಉದ್ಯಮಕ್ಕೆ ಭವಿಷ್ಯವಿಲ್ಲ: ಜಯರಾಂ ಜಿ.ಕಿಮ್ಮನೆ

KannadaprabhaNewsNetwork |  
Published : Jun 14, 2026, 01:45 AM IST
ಅಡಿಕೆ ಉದ್ಯಮಕ್ಕೆ ಭವಿಷ್ಯವಿಲ್ಲ: ಜಯರಾಂ ಜಿ.ಕಿಮ್ಮನೆ | Kannada Prabha

ಸಾರಾಂಶ

ಪ್ರಸ್ತುತ ಅಡಿಕೆ ಉತ್ಪಾದನೆ ಮಿತಿ ಮೀರಿದೆ. ಮಲೆನಾಡಿಗಷ್ಟೇ ಸೀಮಿತವಾಗಿದ್ದ ಅಡಿಕೆ ಬೆಳೆ ಈಗ ಕರಾವಳಿ, ಬಯಲುಸೀಮೆಗೆ ವ್ಯಾಪಿಸಿದೆ. ಎಲ್ಲೆಡೆ ಹೇರಳವಾಗಿ ಅಡಿಕೆ ಉತ್ಪಾದನೆಯಾಗುತ್ತಿದೆ. ಬೇಡಿಕೆಗಿಂತಲೂ ಅತಿ ಹೆಚ್ಚು ಅಡಿಕೆ ಮಾರುಕಟ್ಟೆಗೆ ಬರುತ್ತಿರುವುದರಿಂದ ಹಾಗೂ ಅಡಿಕೆ ಬೆಳೆಯುವ ಜಿಲ್ಲೆಗಳು ವಿಸ್ತರಣೆಯಾಗುತ್ತಲೇ ಇರುವುದರಿಂದ ಬೆಲೆಯಲ್ಲಿ ಸ್ಥಿರತೆಯನ್ನು ಉಳಿಸಿಕೊಳ್ಳುವುದು ಕಷ್ಟ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಳೆದ ಇಪ್ಪತ್ತೈದು ವರ್ಷಗಳಿಂದ ಅಡಿಕೆ ಉದ್ಯಮ ಉತ್ತಮ ಸ್ಥಿತಿಯಲ್ಲಿತ್ತು. ಈಗ ಬೇಡಿಕೆಗಿಂತ ಅಡಿಕೆ ಹೆಚ್ಚು ಉತ್ಪಾದನೆಯಾಗುತ್ತಿದ್ದರೂ ಒಳ್ಳೆಯ ಬೆಲೆಯಿದೆ. ಆದರೆ, ಮುಂದಿನ ಹತ್ತು-ಹದಿನೈದು ವರ್ಷದಲ್ಲಿ ಅಡಿಕೆ ಗತವೈಭವವನ್ನು ಕಳೆದುಕೊಳ್ಳುವ ಲಕ್ಷಣಗಳು ಈಗಲೇ ಗೋಚರಿಸುತ್ತಿವೆ ಎಂದು ಖ್ಯಾತ ಉದ್ಯಮಿ ಜಯರಾಂ ಜಿ.ಕಿಮ್ಮನೆ ಆತಂಕ ವ್ಯಕ್ತಪಡಿಸಿದರು.

ನಗರದ ಜಿಪಂ ಕಾವೇರಿ ಸಭಾಂಗಣದಲ್ಲಿ ಎರಡು ದಿನಗಳ ಕೃಷಿ ಉದ್ಯಮಶೀಲ ಅಧಿವೇಶನದಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದರು. ಪ್ರಸ್ತುತ ಅಡಿಕೆ ಉತ್ಪಾದನೆ ಮಿತಿ ಮೀರಿದೆ. ಮಲೆನಾಡಿಗಷ್ಟೇ ಸೀಮಿತವಾಗಿದ್ದ ಅಡಿಕೆ ಬೆಳೆ ಈಗ ಕರಾವಳಿ, ಬಯಲುಸೀಮೆಗೆ ವ್ಯಾಪಿಸಿದೆ. ಎಲ್ಲೆಡೆ ಹೇರಳವಾಗಿ ಅಡಿಕೆ ಉತ್ಪಾದನೆಯಾಗುತ್ತಿದೆ. ಬೇಡಿಕೆಗಿಂತಲೂ ಅತಿ ಹೆಚ್ಚು ಅಡಿಕೆ ಮಾರುಕಟ್ಟೆಗೆ ಬರುತ್ತಿರುವುದರಿಂದ ಹಾಗೂ ಅಡಿಕೆ ಬೆಳೆಯುವ ಜಿಲ್ಲೆಗಳು ವಿಸ್ತರಣೆಯಾಗುತ್ತಲೇ ಇರುವುದರಿಂದ ಬೆಲೆಯಲ್ಲಿ ಸ್ಥಿರತೆಯನ್ನು ಉಳಿಸಿಕೊಳ್ಳುವುದು ಕಷ್ಟ ಎಂದು ಸೂಚ್ಯವಾಗಿ ಹೇಳಿದರು.

ಎಂಬತ್ತರ ದಶಕದಲ್ಲಿ ಪ್ರತಿ ಕೆ.ಜಿ. ಅಡಿಕೆ ಬೆಲೆ ೯ ರಿಂದ ೧೮ ರು.ಗಳಿತ್ತು. ೧೯೯೦ರಲ್ಲಿ ೧೦೦ ರು. ಇದ್ದ ಅಡಿಕೆ ಬೆಲೆ ಈಗ ೬೦೦ ರು. ತಲುಪಿದೆ. ಹಾಗಂತ ಅಡಿಕೆ ಬೆಳೆಯಬೇಡಿ ಎನ್ನುವುದಿಲ್ಲ. ೧೦ ಎಕರೆ ಭೂಮಿ ಇದ್ದರೆ ಎರಡು ಎಕರೆಯಲ್ಲಿ ಅಡಿಕೆ ಬೆಳೆದು ಉಳಿದ ಜಮೀನನಲ್ಲಿ ಆಹಾರೋತ್ಪನಗನಳನ್ನು ಬೆಳೆಯಿರಿ ಎಂದು ಸಲಹೆ ನೀಡಿದರು.

ಕೃಷಿ ಕ್ಷೇತ್ರಕ್ಕೆ ಎಂದಿಗೂ ಸಾವಿಲ್ಲ. ಕೂಲಿಯಾಳುಗಳ ಕೊರತೆ ಕಾಡುತ್ತಿರಬಹುದು. ಆದರೆ, ಮನುಷ್ಯನಿಗೆ ತಿನ್ನಲು ಬೇಕಿರುವುದು ಆಹಾರ. ಅದನ್ನು ಬೆಳೆದೇ ತಿನ್ನಬೇಕು. ಹಾಗಾಗಿ ಕೃಷಿಯನ್ನು ಕಡೆಗಣಿಸದೆ ಶ್ರಮದಿಂದ ದುಡಿದು ಅತ್ಯುತ್ತಮ ಗುಣಮಟ್ಟದ ಆಹಾರೋತ್ಪನ್ನಗಳನ್ನು ಮಾರುಕಟ್ಟೆಗೆ ತನ್ನಿ. ವಿಷಮುಕ್ತ ಆಹಾರವೆಂಬ ಲೇಬಲ್ ಬಿದ್ದರೆ ಆ ಉತ್ಪನ್ನಗಳಿಗೆ ಇಡೀ ವಿಶ್ವದ್ಲೇ ಮಾರುಕಟ್ಟೆ ಸೃಷ್ಟಿಯಾಗಲಿದೆ. ಮೌಲ್ಯವೂ ಹೆಚ್ಚಳವಾಗಲಿದೆ ಎಂದು ನುಡಿದರು.

ಪ್ರವಾಸೋದ್ಯಮದಲ್ಲೂ ಮಂಡ್ಯ ಜಿಲ್ಲೆ ಬೆಳವಣಿಗೆ ಸಾಧಿಸಲು ಸಾಕಷ್ಟು ಅವಕಾಶಗಳಿವೆ. ಅನೇಕ ರಾಷ್ಟ್ರಗಳ ಆರ್ಥಿಕತೆ ಪ್ರವಾಸೋದ್ಯಮವನ್ನೇ ಅವಲಂಬಿಸಿದೆ. ಟೆಂಪಲ್ ಟೂರಿಸಂ ಐಟಿ-ಬಿಟಿ ಕ್ಷೇತ್ರಗಳನ್ನು ಮೀರಿಸಿ ನಡೆಯುವಷ್ಟು ಶಕ್ತಿಯನ್ನು ಹೊಂದಿದೆ. ಅದನ್ನು ಜನಪ್ರತಿನಿಧಿಗಳು, ಸರ್ಕಾರಗಳು ಪ್ರಥಮ ಆದ್ಯತೆಯಾಗಿ ಕೈಗೊಳ್ಳಬೇಕು ಎಂದರು.ರೈತ ಬಜಾರ್ ಉದ್ಘಾಟನೆ

ಜಿಲ್ಲೆಯಲ್ಲೇ ಮೊದಲ ಬಾರಿಗೆ ರೈತ ಬಜಾರ್ ಜಿಲ್ಲಾ ಪಂಚಾಯ್ತಿ ಕಚೇರಿ ಪಕ್ಕದಲ್ಲೇ ಶನಿವಾರದಿಂದ ಕಾರ್ಯಾರಂಭಗೊಂಡಿದೆ. ರಾಜ್ಯದಲ್ಲಿರುವ ೧೨೦೦ ರೈತ ಉತ್ಪಾದಕ ಕಂಪನಿಗಳ ಪೈಕಿ ಸುಮಾರು ೨೦ ಜಿಲ್ಲೆಗಳ ರೈತ ಉತ್ಪಾದಕ ಕಂಪನಿಗಳಿಂದ ೨೦ಕ್ಕೂ ಹೆಚ್ಚು ಉತ್ಪನ್ನಗಳಿಗೆ ಬ್ರ್ಯಾಂಡ್ ರೂಪ ನೀಡಿ ಮಾರಾಟಕ್ಕಿಡಲಾಗಿದೆ. ಜಿಲ್ಲಾ ಮಹಿಳಾ ಸ್ವಸಹಾಯ ಸಂಘಗಳು, ಸ್ತ್ರೀಶಕ್ತಿ ಸಂಘಗಳು, ಸಂಜೀವಿನಿ ಒಕ್ಕೂಟದವರು ತಯಾರಿಸುವ ಆಹಾರೋತ್ಪನ್ನಗಳನ್ನು ಪ್ಯಾಕಿಂಗ್ ಮಾಡಿ ಮಾರಾಟ ಮಾಡಲಾಗುವುದು. ಬೆಲ್ಲ, ಅಕ್ಕಿ, ಅಡುಗೆ ಎಣ್ಣೆ, ತರಕಾರಿ, ಹಣ್ಣು ಸೇರಿದಂತೆ ಎಲ್ಲ ಬಗೆಯ ಉತ್ಪನ್ನಗಳನ್ನು ಮಾರುಕಟ್ಟೆ ದರಕ್ಕಿಂತಲೂ ಕಡಿಮೆ ದರದಲ್ಲಿ ಗ್ರಾಹಕರಿಗೆ ಸಿಗಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತಪಟ್ಟಿ ಪರಿಷ್ಕರಣೆಗೆ ಸಹಕರಿಸಿ: ಡಾ.ಸಿದ್ದರಾಮಯ್ಯ
ಕ್ಷೇತ್ರದ ಅಭಿವೃದ್ಧಿಯೇ ನನ್ನ ಉದ್ದೇಶ ಎಂದ ಶಾಸಕ ಸಿಮೆಂಟ್ ಮಂಜು