ಪೋಷಕಾಂಶಗಳ ಸಂಪತ್ತು ಸಿರಿಧಾನ್ಯ

KannadaprabhaNewsNetwork |  
Published : Jan 02, 2026, 03:15 AM IST
9999 | Kannada Prabha

ಸಾರಾಂಶ

ಸಿರಿಧಾನ್ಯಗಳು ಪೋಷಕಾಂಷಗಳ ಸಂಪತ್ತಾಗಿದ್ದು, ಮಧುಮೇಹದಂತಹ ರೋಗಗಳಿಗೆ ಮದ್ದಿನಂತೆ ಕೆಲಸ ಮಾಡುತ್ತವೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಲಕ್ಷ್ಮಣ್ ಕಲ್ಲಣ್ಣನವರ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ, ತುಮಕೂರುಸಿರಿಧಾನ್ಯಗಳು ಪೋಷಕಾಂಷಗಳ ಸಂಪತ್ತಾಗಿದ್ದು, ಮಧುಮೇಹದಂತಹ ರೋಗಗಳಿಗೆ ಮದ್ದಿನಂತೆ ಕೆಲಸ ಮಾಡುತ್ತವೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಲಕ್ಷ್ಮಣ್ ಕಲ್ಲಣ್ಣನವರ್ ಅಭಿಪ್ರಾಯಪಟ್ಟರು. ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ವತಿಯಿಂದ ಸಿರಿಧಾನ್ಯ ಉತ್ಪನ್ನಗಳ ಕುರಿತು ಗ್ರಾಹಕರಿಗೆ ಜಾಗೃತಿ ಮೂಡಿಸಲು ಸಿರಿಧಾನ್ಯ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಿರಿಧಾನ್ಯಗಳಲ್ಲಿರುವ ವಿಶಿಷ್ಟ ಪೋಷಕಾಂಶಗಳು ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗುತ್ತವೆ. ಹೆಚ್ಚಿನ ನಾರಿನಂಶ, ನಿಧಾನವಾಗಿ ಜೀರ್ಣವಾಗುವ ಶರ್ಕರಪಿಷ್ಠ, ಗ್ಲುಟೆನ್ ಮುಕ್ತ ಗುಣ ಮತ್ತು ಉತ್ತಮ ಜೀವಸತ್ವಗಳನ್ನು ಹೊಂದಿರುವುದರಿಂದ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಸಮತೋಲನವಾಗಿ ಪೂರೈಸುತ್ತವೆ. ನಾರಿನಾಂಶ ಹೆಚ್ಚು ಇರುವುದರಿಂದ ದೇಹದಲ್ಲಿನ ಕೊಬ್ಬುನಾಂಶ ತಗ್ಗಿಸಿ ಹೃದಯ ರೋಗ, ಸ್ಥೂಲತೆ ಮತ್ತಿತರ ಜೀವನಶೈಲಿ ಸಂಬಂಧಿತ ರೋಗಗಳನ್ನು ತಡೆಗಟ್ಟಲು ನೆರವಾಗುತ್ತದೆ ಎಂದರು. ನವಣೆ, ಸಾಮೆ, ಕೊರಲೆ ಖಾದ್ಯಗಳು ಮಧುಮೇಹ ರೋಗಿಗಳಿಗೆ ಅಮೃತ ಸಮಾನವಾಗಿದ್ದು, ರಕ್ತದಲ್ಲಿನ ಗ್ಲುಕೋಸ್ ನಿಯಂತ್ರಣಕ್ಕೆ ಸಹಕಾರಿಯಾಗುತ್ತವೆ ಎಂದರಲ್ಲದೆ, ರಾಗಿ ಹೆಚ್ಚಿನ ಕ್ಯಾಲ್ಸಿಯಂ ಹಾಗೂ ರಂಜಕಾಂಶ ಹೊಂದಿರುವುದರಿಂದ ಎಲುಬು ಮತ್ತು ಹಲ್ಲುಗಳನ್ನು ಗಟ್ಟಿಗೊಳಿಸುವುದರೊಂದಿಗೆ ಮಕ್ಕಳ ಮತ್ತು ಮಹಿಳೆಯರ ಆರೋಗ್ಯಕ್ಕೆ ವಿಶೇಷವಾಗಿ ಪ್ರಯೋಜನಕರವಾಗುತ್ತದೆ ಎಂದು ಹೇಳಿದರು. ಸಜ್ಜೆ ಮತ್ತು ಸಾಮೆ ಹೆಚ್ಚಿನ ಕಬ್ಬಿಣದಂಶ ಹೊಂದಿರುವುದರಿಂದ ರಕ್ತಹೀನತೆ ತಡೆಗಟ್ಟಲು ಸಹಕಾರಿಯಾಗಿ. ಮೆಗ್ನೀಶಿಯಂ, ಬಿ-ಸಂಪುಟದ ವಿಟಮಿನ್‌ಗಳು ಹಾಗೂ ಕೆಲವೆಡೆ ಪ್ರೋಟೀನ್ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ರೋಗನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯಮಾಡುತ್ತವೆ. ಸಿರಿಧಾನ್ಯಗಳ ಕೃಷಿಗೆ ಹೆಚ್ಚಿನ ನೀರಿನ ಅಗತ್ಯವಿಲ್ಲ. ಒಣಬೇಸಾಯದಲ್ಲಿ ಬೆಳೆಯಲು ಸಾಧ್ಯವಾಗುವುದರಿಂದ ಕೃಷಿಕರಿಗೆ ಆರ್ಥಿಕ ಬಲ ಒದಗಿಸುವುದರ ಜೊತೆಗೆ ಪರಿಸರ ಸಂರಕ್ಷಣೆಗೆ ಸಹಕಾರಿಯಾಗುತ್ತದೆ ಎಂದರು. ದಿನನಿತ್ಯದ ಆಹಾರದಲ್ಲಿ ಸಿರಿಧಾನ್ಯಗಳ ಸೇರ್ಪಡೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಿಯಾಗುತ್ತದೆ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಧ್ಯಕ್ಷ ನರಸಿಂಹರಾಜು, ಸೇರಿದಂತೆ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳು, ವೈದ್ಯಾಧಿಕಾರಿಗಳು, ಸ್ವಯಂಸೇವಕರು ಸಭೆಯಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ, ಅನುದಾನ ಕಡಿತ ವಿರುದ್ಧ ಇಂದು ರಾಜ್ಯ ಸಂಪುಟದಲ್ಲಿ ನಿರ್ಣಯ?
ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ ಕೇರಳ ಸಿಎಂ ತಿರುಗೇಟು