ಸಂಚಾರಿ ನಿಯಮಗಳನ್ನು ಪಾಲಿಸಿ: ಪಿಎಸ್‌ಐ

KannadaprabhaNewsNetwork |  
Published : Jan 18, 2024, 02:02 AM IST
17ಕೆಬಿಪಿಟಿ.2.ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ರಸ್ತೆ ಸುರಕ್ಷತೆ ಜಾಗೃತಿ ಜಾಥವನ್ನು ಹಮ್ಮಿಕೊಳ್ಳಲಾಗಿತ್ತು.. | Kannada Prabha

ಸಾರಾಂಶ

ಸಾರ್ವಜನಿಕರು ಮೊದಲನೇಯದಾಗಿ ವಾಹನ ಚಾಲನೆಗೆ ಪರವಾನಿಗೆ ಹೊಂದಿರಬೇಕು. ಧೂಮಪಾನ, ಮದ್ಯಪಾನ ಮಾಡಿ ಚಾಲನೆ ಮಾಡುವುದು ಅವಘಡಕ್ಕೆ ಕಾರಣವಾಗಿರುತ್ತದೆ. ದ್ವಿಚಕ್ರ ವಾಹನ ಸವಾರರು ಕಡ್ಡಾಯ ಹೆಲ್ಮೆಟ್ ಧರಿಸಬೇಕು. ತ್ರಿಬಲ್ ರೈಡ್ ಮಾಡುವುದು ಕಾನೂನು ಬಾಹಿರವಾಗಿರುತ್ತದೆ.

ಬೂದಿಕೋಟೆಯಲ್ಲಿ ರಸ್ತೆ ಸಂಚಾರ ಸುರಕ್ಷತಾ ಜಾಗೃತಿ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಸಂಚಾರಿ ನಿಯಮಗಳು ಇರುವುದು ದಂಡ ವಸೂಲಾತಿಗಲ್ಲ, ಅದು ಸಾರ್ವಜನಿಕರ ಜೀವ ರಕ್ಷಣೆಗಿರುವ ವ್ಯವಸ್ಥೆ, ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಿದರೆ ಅಪಘಾತಗಳನ್ನು ತಡೆಯಬಹುದು. ಇದರಿಂದ ಸಾವಿರಾರು ಜನತೆಯ ಜೀವ ರಕ್ಷಣೆಯಾಗುತ್ತದೆ. ಈ ಹಿನ್ನೆಲೆ ಪ್ರತಿಯೊಬ್ಬರೂ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ಬೂದಿಕೋಟೆ ಪಿಎಸ್‌ಐ ಸುನಿಲ್ ಸೂಚಿಸಿದರು.

ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ರಸ್ತೆ ಸಂಚಾರ ಸುರಕ್ಷತಾ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕರು ಮೊದಲನೇಯದಾಗಿ ವಾಹನ ಚಾಲನೆಗೆ ಪರವಾನಿಗೆ ಹೊಂದಿರಬೇಕು. ಧೂಮಪಾನ, ಮದ್ಯಪಾನ ಮಾಡಿ ಚಾಲನೆ ಮಾಡುವುದು ಅವಘಡಕ್ಕೆ ಕಾರಣವಾಗಿರುತ್ತದೆ. ದ್ವಿಚಕ್ರ ವಾಹನ ಸವಾರರು ಕಡ್ಡಾಯ ಹೆಲ್ಮೆಟ್ ಧರಿಸಬೇಕು. ತ್ರಿಬಲ್ ರೈಡ್ ಮಾಡುವುದು ಕಾನೂನು ಬಾಹಿರವಾಗಿರುತ್ತದೆ. ಅತಿ ವೇಗದ ಚಾಲನೆ ಮಾಡಬಾರದು. ಏಕಮುಖ ರಸ್ತೆಗಳಲ್ಲಿ ವಿರುದ್ಧವಾಗಿ ಸಂಚರಿಸಬಾರದು, ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ವೀಲಿಂಗ್ ಮಾಡುತ್ತಿರುವ ಯುವಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರಿಂದ ನಿರಂತರ ಅಪಘಾತಗಳು ಸಂಭವಿಸುತ್ತಿವೆ. ಇದರೊಟ್ಟಿಗೆ ಪರವಾನಿಗೆಯಿಲ್ಲದೆ ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡಿ ಕಿರಿಕಿರಿ ಉಂಟು ಮಾಡುವುದು ಕಾನೂನು ರೀತ್ಯಾ ಅಪರಾದ. ಸಂಚಾರಿ ನಿಯಮಗಳ ಪಾಲನೆಯಿಂದ ಪ್ರಾಣ ಹಾನಿಗಳಂತಹ ಅವಘಡಗಳನ್ನು ತಪ್ಪಿಸುವಂತಾಗುತ್ತದೆ. ಪ್ರತಿಯೊಬ್ಬ ಸಾರ್ವಜನಿಕರು ಸಹಕರಿಸಬೇಕಾಗಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಎಎಸ್‌ಐ ಶಿವಣ್ಣ, ಸಿಬ್ಬಂದಿ ಮುನಿರಾಜು, ಅಮರೇಶ್, ಮಂಜುನಾಥ್, ಹಾಗೂ ಇತರರು ಇದ್ದರು.

----

ಬೂದಿಕೋಟೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ರಸ್ತೆ ಸಂಚಾರ ಸುರಕ್ಷತಾ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬೂದಿಕೋಟೆ ಪಿಎಸ್‌ಐ ಸುನಿಲ್ ಸಾರ್ವಜನಿಕರಿಗೆ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿವಹಿಸುವಂತೆ ಸೂಚಿಸಿದರು.ಎಎಸ್‌ಐ ಶಿವಣ್ಣ, ಸಿಬ್ಬಂದಿ ಮುನಿರಾಜು, ಅಮರೇಶ್, ಮಂಜುನಾಥ್ ಮತ್ತಿತರರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ