ಕನ್ನಡಪ್ರಭ ವಾರ್ತೆ ಚಿಂತಾಮಣಿ
ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೈತರು ಕಳೆದ ನಾಲ್ಕು ವರ್ಷಗಳ ಹಿಂದೆ ಸರ್ಕಾರಿ ಅಧಿಸೂಚನೆ ಆಗಿದ್ದು ಇದುವರೆಗೂ ನಮಗೆ ಪರಿಹಾರ ಬಂದಿಲ್ಲವಾದರೂ ನಮ್ಮ ಭೂಮಿಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಸಂಬಂಧಪಟ್ಟವರು ಮುಂದಾಗಿದ್ದು ನಮ್ಮ-ಭೂಮಿಗೆ ಪರಿಹಾರ ಕೊಡುವವರಾರೆಂದು ರೈತರು ಪ್ರಶ್ನಿಸಿದ್ದಾರೆ.
ಮಲ್ಲಿಕಾಪುರ ಗ್ರಾಮದ ರೈತರಿಗೆ ಸಂಬಂಧಿಸಿದ ಹಲವರ ಜಮೀನಿಗೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದರೂ ಲೆಕ್ಕಿಸದ ಏಜೆಂಟರು ಕೈಗಾರಿಕ ಸ್ಥಾಪನೆಗೆ ಮುಂದಾಗಿದ್ದಾರೆಂದು ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ರೈತರಿಗೆ ವಂಚನೆ
ಈ ಜಮೀನುಗಳು ಡೀಮ್ಡ್ ಪಾರೆಸ್ಟ್‌ಗೆ ಸೇರಿದೆಯೆಂದು ಪಹಣಿಯಲ್ಲಿ ದಾಖಲಾಗಿರುವ ಪರಿಣಾಮ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆಯಾದರೂ ಈ ಜಮೀನುಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ಮುಂದಾಗಿರುವುದು ರೈತರಿಗೆ ವಂಚನೆ ಮಾಡುವಂತಾಗಿದೆಂದು ರೈತರು ಅಳಲನ್ನು ತೊಡಿಕೊಂಡಿದ್ದಾರೆ.ಇಷ್ಟೇಲ್ಲ ಆರೋಪಗಳು ಕೇಳಿ ಬರುತ್ತಿದ್ದರೂ ಕ್ಷೇತ್ರದ ಜನ ಪ್ರತಿನಿದಿಗಳು ಮಾತ್ರ ಇತ್ತ ತಲೆ ಹಾಕದೆ ರೈತರನ್ನು ನಿಲರ್ಕ್ಷಿಸಿದ್ದು ರೈತರು ಏನು ಮಾಡಬೇಕೆಂದು ಪ್ರಶ್ನಿಸಿದ್ದಾರೆ.
ಕೆರೆಯ ಮಣ್ಣು ಬಳಕೆಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ಹೊಸೂರಿನ ಕೆರೆಯ ಮಣ್ಣನ್ನು ನೂರಾರು ಲೋಡ್‌ಗಳಷ್ಟು ಮಣ್ಣನ್ನು ಬಳಕೆ ಮಾಡುತ್ತಿದ್ದರು ಯಾವೊಬ್ಬ ಅಧಿಕಾರಿಯೂ ಸಹ ಇದರ ಬಗ್ಗೆ ಗಮನ ಹರಿಸುತ್ತಿಲ್ಲವೆಂದು ದೂರಿದ ರೈತರು ಸಚಿವರು ಸ್ಥಳಕ್ಕೆ ಬಂದರೂ ಸಹ ಯಾವುದೇ ಕ್ರಮಕೈಗೊಳ್ಳದೆ ಅಕ್ರಮವಾಗಿ ಮಣ್ಣು ಸಾಗಿಸುತ್ತಿರುವುದು ನೋಡಿ ನೋಡದಂತೆ ಹೋಗಿದ್ದಾರೆಂದು ರೈತರು ಸಚಿವರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.