ವಸ್ತುನಿಷ್ಠ ವರದಿ ಪತ್ರಿಕೋದ್ಯಮದ ಮೂಲ ಧರ್ಮ: ರಶ್ಮಿ ಎಸ್‌.

KannadaprabhaNewsNetwork |  
Published : Aug 01, 2026, 01:30 AM IST
ಚಿತ್ರ 31ಬಿಡಿಆರ್2: ಬಸವಕಲ್ಯಾಣದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಶಂಕರ ಪ್ರಸಾದ ದುಬೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸುಧಾ ವಾರಪತ್ರಿಕೆಯ ಉಪ ಸಂಪಾದಕಿ ರಶ್ಮಿ ಎಸ್. ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಮಾಧ್ಯಮಗಳು ಇರುವುದೇ ಸಮಾಜದ ಪರವಾಗಿ ಪ್ರಶ್ನೆ ಮಾಡಲು. ಯಾರದೇ ಮುಲಾಜಿಗೆ ಒಳಗಾಗದೆ, ಅಂಜಿಕೆ-ಹಿಂಜರಿಕೆಯಿಲ್ಲದೆ ವಸ್ತುನಿಷ್ಠ ವರದಿ ಮಾಡುವುದು ಪತ್ರಿಕೋದ್ಯಮದ ಮೂಲ ಧರ್ಮ ಎಂದು ಸುಧಾ ವಾರಪತ್ರಿಕೆಯ ಉಪ ಸಂಪಾದಕಿ ಹಾಗೂ ಶಂಕರ ಪ್ರಸಾದ ದುಬೆ ಪ್ರಶಸ್ತಿ ಪುರಸ್ಕೃತೆ ರಶ್ಮಿ ಎಸ್‌. ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಮಾಧ್ಯಮಗಳು ಇರುವುದೇ ಸಮಾಜದ ಪರವಾಗಿ ಪ್ರಶ್ನೆ ಮಾಡಲು. ಯಾರದೇ ಮುಲಾಜಿಗೆ ಒಳಗಾಗದೆ, ಅಂಜಿಕೆ-ಹಿಂಜರಿಕೆಯಿಲ್ಲದೆ ವಸ್ತುನಿಷ್ಠ ವರದಿ ಮಾಡುವುದು ಪತ್ರಿಕೋದ್ಯಮದ ಮೂಲ ಧರ್ಮ ಎಂದು ಸುಧಾ ವಾರಪತ್ರಿಕೆಯ ಉಪ ಸಂಪಾದಕಿ ಹಾಗೂ ಶಂಕರ ಪ್ರಸಾದ ದುಬೆ ಪ್ರಶಸ್ತಿ ಪುರಸ್ಕೃತೆ ರಶ್ಮಿ ಎಸ್‌. ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆಯಲ್ಲಿ ಶಂಕರ ಪ್ರಸಾದ ದುಬೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಪತ್ರಿಕೆ ಓದುವ ಸಂಸ್ಕೃತಿ ಕುಸಿದರೆ ಸಮಾಜದ ಹೃದಯವಂತಿಕೆಗೆ ಪೆಟ್ಟು:

ಪತ್ರಿಕೆ ಓದುವ ಸಂಸ್ಕೃತಿ ಕುಸಿಯುತ್ತಿರುವುದು ಆತಂಕಕಾರಿ ವಿಷಯ. ಸಮಾಜದಲ್ಲಿ ಓದುವ ಅಭ್ಯಾಸ ಕುಸಿದರೆ ಸಮಾಜದ ಹೃದಯವಂತಿಕೆಯೇ ಕಡಿಮೆಯಾದಂತೆ. ಒಂದು ಕಪ್‌ ಚಹಾದ ಬೆಲೆಗಿಂತಲೂ ಕಡಿಮೆ ದರದಲ್ಲಿ ಸಿಗುವ ಪತ್ರಿಕೆಗಳನ್ನು ಪ್ರತಿಯೊಬ್ಬರೂ ಖರೀದಿಸಿ ಓದುವ ಮೂಲಕ ಮಾಧ್ಯಮ ರಂಗವನ್ನು ಬೆಳೆಸಬೇಕು ಹಾಗೂ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು ಎಂದು ಹಿರಿಯ ಪತ್ರಕರ್ತೆ ಎಸ್‌ ರಶ್ಮಿ ಕರೆ ನೀಡಿದರು.

ಶಾಸಕ ಶರಣು ಸಲಗರ, ಬಸವಕಲ್ಯಾಣದಲ್ಲಿ ಪತ್ರಿಕಾ ಭವನಕ್ಕೆ ನಿವೇಶನ ಪಡೆದುಕೊಂಡರೆ, ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನವನ್ನು ಮಂಜೂರು ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.

ಹುಮನಾಬಾದ್‌ ಡಿವೈಎಸ್ಪಿ ಮಡಿವಾಳಪ್ಪ, ಸಹಾಯಕ ಆಯುಕ್ತ ಪ್ರಕಾಶ್ ಕುದರಿ, ಸಂಘದ ಜಿಲ್ಲಾಧ್ಯಕ್ಷ ಆನಂದ ದೇವಪ್ಪ. ವಿಧಾನ ಪರಿಷತ್ ಸದಸ್ಯ ಎಂ.ಜಿ. ಮೂಳೆ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ. ನಾರಾಯಣರಾವ್, ಸಂಘದ ಜಿಲ್ಲಾ ಕಾರ್ಯದರ್ಶಿ ಶಶಿಕಾಂತ ಶೆಂಬಳ್ಳಿ, ಅನಿಲಕುಮಾರ ರಗಟೆ ಸೇರಿದಂತೆ ಹಲವು ಗಣ್ಯರು ಮಾತನಾಡಿದರು. ಕಾಡಾ ಅಧ್ಯಕ್ಷ ಬಾಬು ಹೊನ್ನಾನಾಯಕ, ತಾಲೂಕು ನೌಕರರ ಸಂಘದ ಅಧ್ಯಕ್ಷ ದಿಲೀಪಕುಮಾರ ಉತ್ತಮ, ಸಂಘಧ ರಾಜ್ಯ ಕಾರ್ಯಕಾರಣಿ ಸದಸ್ಯ ಅಪ್ಪಾರಾವ್‌ ಸೌದಿ, ನಿವೃತ್ತ ಅಭಿಯಂತರ ಚಂದ್ರಶೇಖರ ದುಬೆ, ಜಿಲ್ಲಾ ಉಪಾಧ್ಯಕ್ಷ ಪೃಥ್ವಿರಾಜ ಎಸ್‌, ಸುನೀಲಕುಮಾರ ಕುಲಕರ್ಣಿ, ಸಂತೋಷ ಚಟ್ಟಿ, ಮಾಣಿಕ ಭುರೆ, ಕಲ್ಯಾಣರಾವ್‌ ಮದರಗಾಂವಕರ, ಶಿವಪುತ್ರ ಪಾಟೀಲ, ಎಂಡಿ. ನೈಮೊದ್ದಿನ, ಡಿ.ಕೆ. ಪ್ರಲ್ಹಾದ್‌, ಪ್ರದೀಪ ವಿಸಾಜಿ, ವೀರಶೆಟ್ಟಿ ಮಲಶೆಟ್ಟಿ ಹಾಗೂ ಶರದ ದುಬೆ ಹಲವರು ಇದ್ದರು.

ಸಂಘದ ತಾಲೂಕು ಅಧ್ಯಕ್ಷ ಮಾರ್ಥಂಡ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಉದಯಕುಮಾರ ಮುಳೆ ವಂದಿಸಿದರು. ಜಿಲ್ಲಾ ಕಾರ್ಯಕಾರಣಿ ಸದಸ್ಯ ಗುರುನಾಥ ಗಡ್ಡೆ ಪ್ರಶಸ್ತಿ ಪತ್ರ ವಾಚಿಸಿದರು. ದೀಪಕ ಥಮಕೆ ನಿರೂಪಿಸಿದರು. ಇದೇ ವೇಳೆ ತಾಲೂಕಿನ ಪತ್ರಕರ್ತರು ಹಾಗೂ ಪತ್ರಿಕಾ ವಿತರಕರನ್ನು ಗೌರವಿಸಲಾಯಿತು.

ಶಾಸಕರ ‘ನಿರ್ಗಮನ’: ಮಾತಿನಲ್ಲಿ ತಿವಿದ ಪತ್ರಕರ್ತೆ ರಶ್ಮಿ

ತಮ್ಮ ಕಾರ್ಯಾವಧಿಯ ಪೂರ್ತಿ ಪತ್ರಕರ್ತರು ಬೇಕು. ಪತ್ರಿಕಾಗೋಷ್ಠಿಗಳಲ್ಲಿ, ಸಭೆ ಸಮಾರಂಭಗಳಲ್ಲಿ ಭೇಟಿ ನೀಡುವ ಸ್ಥಳಗಳಲ್ಲಿ ಪತ್ರಕರ್ತರು ಬೇಕು ಆದರೆ ವರ್ಷಕ್ಕೊಮ್ಮೆ ಬರುವ ಪತ್ರಕರ್ತರ ದಿನಾಚರಣೆಯ ದಿನ ಕೆಲ ಗಂಟೆಗಳ ಕಾಲ ಕಳೆಯಲು ಆಗದ ಜನಪ್ರನಿಧಿಗಳ ವರ್ತನೆ ಅತ್ಯಂತ ಬೇಸರ ತರಿಸುವಂಥದ್ದು ಎಂದು ಹಿರಿಯ ಪತ್ರಕರ್ತೆ ರಶ್ಮಿ ಎಸ್‌ ಮಾತಿನ ಚಾಟಿ ಬೀಸಿದರು.

ಪತ್ರಿಕಾ ದಿನಾಚರಣೆಗೆ ಆಗಮಿಸಿದ ಶಾಸಕ ಶರಣು ಸಲಗರ ಅವರು ಅವಸವಸರದಲ್ಲಿಯೇ ಇದ್ದರು. ಉದ್ಘಾಟನೆ ಆಗುತ್ತಿದ್ದಂತೆ ಹೊರಟುನಿಂತರು. ಪ್ರಶಸ್ತಿ ಪ್ರದಾನ ಆಗುತ್ತಲೇ ಭಾಷಣಕ್ಕಿಳಿದು ತುರ್ತು ಕೆಲಸ ಎಂದು ನಿರ್ಗಮಿಸಿದರೆ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಿ ಬಿ. ನಾರಾಯಣರಾವ್‌ ಅವರೂ ಪಕ್ಷದ ಕಾರ್ಯಕ್ರಮವಿದೆ ಎಂದು ಹೊರ ಹೆಜ್ಜೆ ಹಾಕಿದ್ದಕ್ಕೆ ಸಭೆಯಲ್ಲಿ ಬೇಸರ ವ್ಯಕ್ತವಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

33 ವರ್ಷಗಳ ಸರ್ಕಾರಿ ಸೇವೆ ತೃಪ್ತಿ ತಂದಿದೆ: ರವಿಕುಮಾರ್‌ ಅಭಿಮತ
ಕಾವೇರಿ ಪ್ರಾಧಿಕಾರದ ಆದೇಶ ರಾಜ್ಯಕ್ಕೆ ಗದಾಪ್ರಹಾರ