ಪುರಸಭಾ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ: ಕಾನೂನು ಕ್ರಮಕ್ಕೆ ಆಗ್ರಹ

KannadaprabhaNewsNetwork |  
Published : May 28, 2026, 02:30 AM IST
26ಎಚ್.ಎಲ್.ವೈ-1: ಪುರಸಭಾ ಸಿಬ್ಬಂದಿಗಳಿಗೆ ಕರ್ತವ್ಯಕ್ಕೆ ಅಡ್ಡಿ ಪಡಿಸುವ ಮೂಲಕ ಅವಾಚ್ಯವಾಗಿ ನಿಂಧಿಸಿ ದಬ್ಬಾಳಿಕೆ ನಡೆಸುವ ದುರ್ಗಾನಗರದ  ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹಳಿಯಾಳ ಪುರಸಭೆಯ ಸಮಸ್ತ ಸಿಬ್ಬಂದಿಗಳು ಹಾಗೂ ಪೌರ ಕಾರ್ಮಿಕರು  ಮಂಗಳವಾರ ಪ್ರತಿಭಟನಾ ಮೆರವಣಿಗೆ ಮೂಲಕ ಬಂದು ಗ್ರೇಡ್-2 ತಹಸೀಲ್ದಾರರಿಗೆ ಮನವಿಯನ್ನು ಸಲ್ಲಿಸಿದರು. | Kannada Prabha

ಸಾರಾಂಶ

ಪುರಸಭಾ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ ಪಡಿಸುವ ಮೂಲಕ ಅವಾಚ್ಯವಾಗಿ ನಿಂದಿಸಿ ದಬ್ಬಾಳಿಕೆ ನಡೆಸುವ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಳಿಯಾಳ ಪುರಸಭೆಯ ಸಮಸ್ತ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಆಗ್ರಹಿಸಿ ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹಳಿಯಾಳ

ಪುರಸಭಾ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ ಪಡಿಸುವ ಮೂಲಕ ಅವಾಚ್ಯವಾಗಿ ನಿಂದಿಸಿ ದಬ್ಬಾಳಿಕೆ ನಡೆಸುವ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಳಿಯಾಳ ಪುರಸಭೆಯ ಸಮಸ್ತ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಆಗ್ರಹಿಸಿ ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಿದರು.

ದುರ್ಗಾನಗರದ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೊರ್ವರು ಮೇ 13ರಂದು ಪುರಸಭಾ ಕಚೇರಿಗೆ ಆಗಮಿಸಿ ಕಚೇರಿಯ ವ್ಯವಸ್ಥಾಪಕರೊಂದಿಗೆ ಏರುಧ್ವನಿಯಲ್ಲಿ ವಾಗ್ವಾದ ಮಾಡುವುದರ ಜೊತೆಯಲ್ಲಿ ಬುದ್ದಿ ಹೇಳಲು ಬಂದ ಇಲಾಖೆಯ ಅಕೌಂಟೆಂಟ್‌ನನ್ನು ಸಹ ಏಕವಚನದಲ್ಲಿ ಬೈಯ್ದಿದ್ದಾರೆ. ಕಂದಾಯ ವಿಭಾಗದ ನಿರೀಕ್ಷಕರೊಂದಿಗೆ ನೀರಿನ ಕರ ಬಾಕಿ ಕುರಿತಂತೆ ವಾಗ್ವಾದ ಮಾಡಿದ್ದಾರೆ. ಅದಲ್ಲದೇ ಕಟ್ಟಡ ಪರವಾನಗಿ ವಿಭಾಗದ ಸಿಬ್ಬಂದಿ ಮತ್ತು ಸಾರ್ವಜನಿಕ ಮಾಹಿತಿ ವಿಭಾಗದ ಅಧಿಕಾರಿ ಮತ್ತು ಪುರಸಭಾ ವಾಣಿಜ್ಯ ಮಳಿಗೆ ವಿಭಾಗದವರೊಂದಿಗೆ ಅನಗತ್ಯ ವಾಗ್ವಾದ ಮಾಡಿದ್ದಾರೆ. ಅದಲ್ಲದೇ ಮೇ 22ರಂದು ನೀರು ಪೂರೈಕೆ ವಿಭಾಗದ ಮುಖ್ಯಸ್ಥರೊಂದಿಗೆ ಏಕವಚನದಲ್ಲಿ ಮಾತನಾಡಿ ಅವಮಾನಿಸಿದ್ದು, ಮೇ 25ರಂದು ಮತ್ತೆ ಪುರಸಭೆಗೆ ಬಂದು ಕಂದಾಯ ವಿಭಾಗಕ್ಕೆ ಸಂಬಂಧಿಸಿದಂತೆ ಅನಗತ್ಯವಾಗಿ ವಾಗ್ವಾದ ಮಾಡಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಹೀಗೆ ಪ್ರತಿನಿತ್ಯವೂ ಪುರಸಭೆಯ ಕಚೇರಿಯ ಎಲ್ಲಾ ವಿಭಾಗದ ಸಿಬ್ಬಂದಿ, ಅಧಿಕಾರಿಗಳಿಗೆ ಅವಾಚ್ಯವಾಗಿ ಬೈಯ್ದು ದಬ್ಬಾಳಿಕೆ ನಡೆಸಿ ಕೆಲಸ ನಿರ್ವಹಿಸಲು ಕಿರುಕುಳ ನೀಡುವಂತಹ ಪ್ರವೃತ್ತಿಯನ್ನು ತೋರುವ ವ್ಯಕ್ತಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಪುರಸಭೆಯ ವ್ಯವಸ್ಥಾಪಕ ಈರಣ್ಣ ಕೊಡ್ಲಿ, ಪುರಸಭೆ ವಿವಿಧ ವಿಭಾಗಗಳ ಪ್ರಮುಖರಾದ ಮಹ್ಮದರಫೀಕ್ ವಸ್ತಾದ, ರಮೇಶ ಮಜೂಕರ, ರವಿ ಪಟಿಯಾಳ, ಅನಿಲ ಚಲವಾದಿ, ನಾಗರಾಜ ಕುರಿಯಾರ, ಅಶೋಕ ಹರಕುನಿ, ಮಂಜುನಾಥ ಹರಿಜನ, ರಾಹುಲ ರಾಮದುರ್ಗ, ನಾಗರಾಜ ಕುರಿಯಾರ, ಸಂಜು ಮೂಳೆ, ಬೆಲ್ಲಪ್ಪಾ ಹೊನ್ನೋಜಿ, ಸುರೇಶ ಚಲವಾದಿ ಹಾಗೂ ಇತರರು ಇದ್ದರು.

------

26ಎಚ್.ಎಲ್.ವೈ-1: ಹಳಿಯಾಳ ಪುರಸಭೆಯ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕತಾರ್ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಸುಬ್ರಮಣ್ಯ ಹೆಬ್ಬಾಗಿಲು ಅವಿರೋಧ ಆಯ್ಕೆ
ಕಾಲೇಜು ಅಭಿವೃದ್ಧಿಗೆ ಅಗತ್ಯ ಸಹಕಾರ: ಪ್ರೊ. ಅಶೋಕ್ ಸಂಗಪ್ಪ ಆಲೂರ