ಕೋಲಾರದಲ್ಲಿ ರಾಜಕೀಯ ಪ್ರಮುಖರಿಗೆ ಎಸ್‌ಐಆರ್ ಅರ್ಜಿ ವಿತರಿಸಿದ ಅಧಿಕಾರಿಗಳು

KannadaprabhaNewsNetwork |  
Published : Jul 01, 2026, 01:15 AM IST
೩೦ಕೆಎಲ್‌ಆರ್-೭ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಹಾಗೂ ನಗರಸಭೆ ಮಾಜಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ ರಮೇಶ್‌ರ ಮನೆಗೆ ಮಂಗಳವಾರ ಉಪವಿಭಾಗಾಧಿಕಾರಿ ರೇಣುಕಾ ಪ್ರಸಾದ್ ಜಂಬಗಿ, ತಹಸೀಲ್ದಾರ್ ಶ್ರೀನಿವಾಸ್ ಹಾಗೂ ನಗರಸಭೆ ಪೌರಾಯುಕ್ತ ವೆಂಕಟೇಶ್ ನಾಗನೂರ್ ಭೇಟಿ ನೀಡಿ ಎಸ್‌ಐಆರ್ ಅರ್ಜಿ ವಿತರಿಸುತ್ತಿರುವುದು. | Kannada Prabha

ಸಾರಾಂಶ

ದೇಶಾದ್ಯಂತ ಎಸ್‌ಐಆರ್ ಬಹಳ ಮಹತ್ವವಾಗಿದ್ದು, ಈ ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಹೊರಗೂಳಿಯಬಾರದು ಸುಮಾರು ೧೧ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಪರಿಗಣಿಸಬಹುದಾಗಿದೆ ರಾಜಕೀಯ ಪಕ್ಷಗಳ ನಾಯಕರು ಬಿಎಲ್‌ಎ ಗಳು ಬಿಎಲ್‌ಒಗಳಿಗೆ ಸಂಪೂರ್ಣ ಸಹಕಾರ ನೀಡಬೇಕು ಬಿಎಲ್‌ಒಗಳ ನೇಮಕ ರಾಜಕೀಯ ಪಕ್ಷಗಳ ಜವಾಬ್ದಾರಿ

ಕನ್ನಡಪ್ರಭ ವಾರ್ತೆ ಕೋಲಾರ

ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಹಾಗೂ ನಗರಸಭೆ ಮಾಜಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ ರಮೇಶ್‌ರ ಮನೆಗೆ ಮಂಗಳವಾರ ಉಪವಿಭಾಗಾಧಿಕಾರಿ ರೇಣುಕಾ ಪ್ರಸಾದ್ ಜಂಬಗಿ, ತಹಸೀಲ್ದಾರ್ ಶ್ರೀನಿವಾಸ್ ಹಾಗೂ ನಗರಸಭೆ ಪೌರಾಯುಕ್ತ ವೆಂಕಟೇಶ್ ನಾಗನೂರ್ ಭೇಟಿ ನೀಡಿ ಎಸ್‌ಐಆರ್ ಅರ್ಜಿ ವಿತರಿಸಿದರು.

ದೇಶಾದ್ಯಂತ ಎಸ್‌ಐಆರ್ ಬಹಳ ಮಹತ್ವವಾಗಿದ್ದು, ಈ ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಹೊರಗೂಳಿಯಬಾರದು ಸುಮಾರು ೧೧ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಪರಿಗಣಿಸಬಹುದಾಗಿದೆ ರಾಜಕೀಯ ಪಕ್ಷಗಳ ನಾಯಕರು ಬಿಎಲ್‌ಎ ಗಳು ಬಿಎಲ್‌ಒಗಳಿಗೆ ಸಂಪೂರ್ಣ ಸಹಕಾರ ನೀಡಬೇಕು ಬಿಎಲ್‌ಒಗಳ ನೇಮಕ ರಾಜಕೀಯ ಪಕ್ಷಗಳ ಜವಾಬ್ದಾರಿ ಎಂದು ಇದೇ ಸಂದರ್ಭದಲ್ಲಿ ಎಸಿ ತಿಳಿಸಿದರು.

ಓಂಶಕ್ತಿ ಚಲಪತಿ ಮಾತನಾಡಿ, ನಮ್ಮ ಪಕ್ಷದಿಂದ ಎರಡು ಮೂರು ಬಾರಿ ಕಾರ್ಯಾಗಾರ ಮಾಡಲಾಗಿದೆ ಯಾರ ಒತ್ತಡಕ್ಕೂ ಮಣಿಯದೆ ಕೆಲಸ ನಿರ್ವಹಿಸಬೇಕು ಜೊತೆಗೆ ಅಲ್ಪಸಂಖ್ಯಾತ ವಾರ್ಡ್‌ಗಳಲ್ಲಿ ನಿಷ್ಪಕ್ಷಪಾತವಾಗಿ ಅರ್ಜಿ ಭರ್ತಿ ಮಾಡಬೇಕು ಎಂದು ತಿಳಿಸಿದರು.

ಕಂದಾಯ ನಿರೀಕ್ಷಕ ರಾಜೇಂದ್ರ ಪ್ರಸಾದ್, ಕಾಂಗ್ರೆಸ್ ಮುಖಂಡ ಕುರಿಗಳ ರಮೇಶ್, ಬಿಜೆಪಿ ನಗರ ಅಧ್ಯಕ್ಷ ಸಾ.ಮಾ. ಬಾಬು, ಕಚೇರಿ ಕಾರ್ಯದರ್ಶಿ ರಾಜೇಶ್ ಸಿಂಗ್, ಮುಖಂಡರಾದ ಶಿವಕುಮಾರ್, ಶ್ರೀನಿವಾಸ್, ನಾಮಾಲ್ ಮಂಜು, ಶ್ರೀನಾಥ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿಥಿ ಉಪನ್ಯಾಸಕರ ವೇತನ ಭರಿಸುವುದು ವಿವಿಗಳಿಗೆ ಅಸಾಧ್ಯ: ಮಧು
ಬದುಕಿನ ಸವಾಲು ಎದುರಿಸಲು ಪುಸ್ತಕ ಓದಿ: ಡಾ.ಮಾನಸ