ಶಿಗ್ಗಾಂವಿ: ಸರ್ಕಾರ ಹರಿಯುವ ನೀರು ಇದ್ದಂತೆ, ಯಾವುದೇ ಸರಕಾರವು ಬಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯವನ್ನು ನಿರ್ವಹಿಸಬೇಕು, ಜನಸಾಮಾನ್ಯರಿಗೆ ಅಧಿಕಾರಿಗಳು ಸ್ಪಂದಿಸಬೇಕಾಗುತ್ತದೆ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು. ಶಿಗ್ಗಾಂವಿಯಲ್ಲಿ ಜನಸ್ಪಂದನ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಚುನಾಯಿತ ಪ್ರತಿನಿಧಿಗಳು ತಮ್ಮ ಅಳಿಲು ಸೇವೆಯನ್ನು ಮಾಡುತ್ತಾರೆ. ಜನಸಾಮಾನ್ಯರ ಸಮಸ್ಯೆಗಳು ಉಳಿದಿರುತ್ತವೆ. ಅವುಗಳಿಗೆ ಸ್ಪಂದಿಸಿ ನಾವೆಲ್ಲರೂ ಕೆಲಸ ಮಾಡಬೇಕಾದ ಅನಿವಾರ್ಯತೆ ಹಿಂದಿನ ಜಿಲ್ಲಾಧಿಕಾರಿಗಳು ಜನ ಸಂಪರ್ಕ ಸಭೆಯನ್ನು ಮಾಡಿ ಹಲವಾರು ಸಮಸ್ಯೆಗಳನ್ನು ಪರಿಹರಿಸಿದ್ದಾರೆ.
ಶಿಗ್ಗಾಂವಿ ಅಭಿವೃದ್ಧಿ ದೃಷ್ಟಿಯಿಂದ ಸರಕಾರದಿಂದ ಒಂದು ನೂರು ಕೋಟಿ ಅನುದಾನವನ್ನು ಕೊಡಿಸುವ ಭರವಸೆಯನ್ನು ನೀಡಿದರು. ಸಾಕಷ್ಟು ಜನರು ರೈತರು ಅನೇಕ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಹೇಳಿದರು. ಜಿಲ್ಲಾಧಿಕಾರಿಗಳಾದ ಡಾ. ವಿಜಯ ಮಹಾಂತೇಶ ದಾನಮ್ಮನವರ, ಗಡಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣಾ ಬೇವಿನಮರದ ಸೇರಿದಂತೆ ಹಲವರು ಮಾತನಾಡಿದರು.ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ ಶ್ರೀಧರ, ಶಾಸಕರಾದ ಬಸವರಾಜ ಶಿವಣ್ಣವರ, ಶ್ರೀನಿವಾಸ ಮಾನೆ, ಮಾಜಿ ಸಂಸದ ಮಂಜುನಾಥ ಕುನ್ನೂರ, ಡಾ, ನಾಗರಾಜ ಎನ್. ರಂಗಸ್ವಾಮಿ, ಶಿಗ್ಗಾಂವಿ ಪುರಸಭೆಯ ಅಧ್ಯಕ್ಷ ಸಿದ್ದಾರ್ಥ ಪಾಟೀಲ, ಬಂಕಾಪುರ ಪುರಸಭೆಯ ಅಧ್ಯಕ್ಷೆ ಮಮತಾ ಮಾಗಿ, ಸವಣೂರ ಅಧ್ಯಕ್ಷರಾದ ಅಲ್ಲಹುದ್ದೀನ್ ಮನೀಯಾರ,ಎಸ್.ಎಫ್. ಮಣಕಟ್ಟಿ, ಸುಭಾಸ ಮಜ್ಜಿಗಿ, ಗುಡ್ಡಪ್ಪ ಜಲದಿ, ಉಪಾಧ್ಯಕ್ಷರಾದ ಶಾಂತಾಬಾಯಿ ಸುಭೇದಾರ, ಆಂಜನೇಯ ಗುಡಗೇರಿ, ಖೈರುನ್ನೀಸಾ ಪಟೇಲ, ಮಮತಾ ಹೊಸಗೌಡ್ರ ಇದ್ದರು. ಕ್ಷೇತ್ರಶಿಕ್ಷಣಾಧಿಕಾರಿ ಎಂ.ಬಿ ಬಾರಕೇರ ಸ್ವಾಗತಿಸಿದರು. ನಾಗಪ್ಪ ಬೆಂತೂರ ನಿರೂಪಿಸಿದರು.ನಮ್ ಊರಿಗೆ ಬಸ್ ನಿಲ್ಲಿಸದಿದ್ದರೆ ಬಸ್‌ಗೆ ಕಲ್ಲು ತಗೊಂಡು ಹೊಡೀತೀವಿ ನೋಡ್ರೀ ಎಂದು ಮಹಿಳೆ ಅಕ್ರೋಶವನ್ನು ಹೊರಹಾಕಿದಳು. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್, ಏ ಹಂಗೆಲ್ಲಾ ಮಾಡಬಾ ರದಮ್ಮ, ನಾನು ಬಸ್ ಬಿಡಿಸ್ತೀನಿ ಎಂದರು. ತಾಲೂಕು ಬಿಸನಳ್ಳಿ ಗ್ರಾಮಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲ ನಮ್ ಊರಿಗೆ ಬಸ್ ನಿಲ್ಲಿಸಿ ಜನರನ್ನು ಹತ್ತಿಸಿಕೊಂಡು ಹೋಗಬೇಕು, ಬಸ್ ನಿಲ್ಲಿಸೋಂಗಿಲ್ಲಾ, ಇದರಿಂದ ಶಾಲಾ ವಿದ್ಯಾರ್ಥಿಗ ಳಿಗೆ ಬಹಳ ತೊಂದರೆ ಆಗಿದೆ. ಬಸ್ ನಮ್ ಊರಿಗೆ ತರಬೋಕೆ ಹೇಳಿ ಎಂದು ಕಮಲವ್ವ ಹೇಳಿದರು. ತಕ್ಷಣ ಅಲ್ಲಿದ್ದ ಸಾರಿಗೆ ಅಧಿಕಾರಿಗಳನ್ನು ಕರೆಸಿ ಬಸ್ ವ್ಯವಸ್ಥೆ ಮಾಡಿಸಿ ಎಂದು ತಾಕೀತು ಶಿವಾನಂದ ಪಾಟೀಲ್ ಮಾಡಿದರು.