ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ಪೇಟೆ ಕುರುಹಿನಶೆಟ್ಟಿ ಬಡಾವಣೆಯ ಕುರುಹಿನಶೆಟ್ಟಿ ಜನಾಂಗ ಸಮಿತಿಯ ಶ್ರೀ ರಾಮಮಂದಿರದ ಶ್ರೀರಾಮನ ಭಕ್ತರು, ಯುವಕರು, ಯುವತಿಯರು, ಸುಮಂಗಲಿಯರು, ಚಿಣ್ಣರು ಶ್ರೀ ರಾಮನವಮಿಯ ಪ್ರಯುಕ್ತ ಸಂಪ್ರದಾಯದ ಆಚರಣೆಯಂತೆ ಓಕಳಿ ಹಬ್ಬ ಆಚರಿಸಿ, ಸಂಭ್ರಮಿಸಿದರು.ಪಟ್ಟಣದ ಕುರುಹಿನಶೆಟ್ಟಿ ಶ್ರೀ ರಾಮಮಂದಿರದಲ್ಲಿ ಪೂರ್ವಿಕರು ಧರ್ನುಮಾಸ ಭಜನಾ ಉತ್ಸವ ಮತ್ತು ಶ್ರೀ ರಾಮನವಮಿ ಪೂಜಾ ಮಹೋತ್ಸವ ಜತೆಗೆ ಓಕಳಿಯನ್ನು ೭೧ಕ್ಕೂ ಹೆಚ್ಚು ವರ್ಷಗಳ ಹಿಂದೆ ಪ್ರಾರಂಭಿಸಿದ್ದರು. ಹಿರಿಯರ ಮಾರ್ಗದರ್ಶನದಲ್ಲಿ ಪೂರ್ವಿಕರ ಸಂಪ್ರದಾಯದ ಆಚರಣೆಯಲ್ಲಿ ಕುರುಹಿನಶೆಟ್ಟಿ ಜನಾಂಗದವರು ತೊಡಗಿಸಿಕೊಂಡು ಸಂಸ್ಕೃತಿಯ ಪಾಲನೆ ಮಾಡುವ ಜತೆಗೆ ಓಕಳಿ ಮಹೋತ್ಸವಕ್ಕೆ ವಿಶೇಷ ಮೆರಗನ್ನು ನೀಡುತ್ತಿದ್ದಾರೆ.
ಶ್ರೀ ರಾಮಮಂದಿರದಲ್ಲಿ ಶನಿವಾರದ ದಿನದಂದು ಶ್ರೀ ಸೀತಾ, ರಾಮ, ಲಕ್ಷ್ಮಣ ಹಾಗೂ ಹನುಮಂತನ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿ, ಪೂಜಿಸಿದ ನಂತರ, ಅಡ್ಡೆ ಹೊತ್ತು ಯುವಕರು ೩೨ ಡಿಗ್ರಿ ತಾಪಮಾನದಲ್ಲೂ ಬಡಾವಣೆಯಲ್ಲಿ ಸಾಗಿ, ಭಕ್ತಿ ಸಮರ್ಪಿಸಿದರು. ಸುಮಂಗಲಿಯರು ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ಶ್ರೀರಾಮನ ಭಕ್ತರಿಗೆ ನೈವೇದ್ಯದ ಕೊಸಂಬರಿ, ಮಜ್ಜಿಗೆ ವಿತರಿಸಿ, ಶ್ರೀರಾಮೋತ್ಸವದಲ್ಲಿ ಸಂಭ್ರಮಿಸಿದರು.ಕುರುಹಿನಶೆಟ್ಟಿ ಜನಾಂಗ ಕಮಿಟಿ ಅಧ್ಯಕ್ಷ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಎಚ್.ಎಸ್. ಸುದರ್ಶನ್ ಹಾಗೂ ಸದಸ್ಯರು, ಪುರಸಭೆ ಮಾಜಿ ಅಧ್ಯಕ್ಷೆ ಜ್ಯೋತಿ ಮಂಜುನಾಥ್, ಕುರುಹಿನಶೆಟ್ಟಿ ಮಹಿಳಾ ಸಮಾಜದ ಅಧ್ಯಕ್ಷೆ ಇಂದು ನಾರಾಯಣ್ ಹಾಗೂ ಸದಸ್ಯರು, ಕುರುಹಿನಶೆಟ್ಟಿ ಯುವಕರ ಸಂಘ(ಗ್ರೀನ್ ಬಾಯ್ಸ್) ಅಧ್ಯಕ್ಷ ವಿಶೇಷ್ ಎನ್.ಮೂರ್ತಿ ಹಾಗೂ ಸದಸ್ಯರು, ಕುರುಹಿನಶೆಟ್ಟಿ ಮಿತ್ರ ವೃಂದದ ಅಧ್ಯಕ್ಷ ಗುರುರಾಜ್ ಆರ್.ಕೆ. ಹಾಗೂ ಸದಸ್ಯರು, ಎದುರುಮುಖ ಶ್ರೀ ರಾಮಲಿಂಗಾಂಜನೇಯಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ ಆರ್. ಹಾಗೂ ಸದಸ್ಯರು, ಉಪನ್ಯಾಸಕರಾದ ನರಸಿಂಹಮೂರ್ತಿ, ರಂಗಸ್ವಾಮಿ, ಕೃಷ್ಣಪ್ಪ, ರಾಘವೇಂದ್ರ, ಮನುಕುಮಾರ್, ಯೋಗನರಸಿಂಹ, ನಾಗರಾಜ್, ನರಸಿಂಹಮೂರ್ತಿ ಶಾಸ್ತ್ರಿ, ಗೋಪಾಲ ಎನ್, ಶ್ರೀನಿವಾಸಮೂರ್ತಿ ಎಚ್.ಕೆ, ಪ್ರದೀಪ್ ಕುಮಾರ್, ಸುಬ್ರಮಣ್ಯ ಪಿ.ಆರ್., ಚಿರಂಜೀವಿ, ಬಾಬಣ್ಣ, ಬಿ.ಎನ್.ಜೈಕುಮಾರ್, ಸುನೀಲ್, ಆರ್.ಕೆ.ಜಯರಾಮ್, ಎಚ್.ಪಿ.ಮುರಳೀಧರ, ಧನಂಜಯ, ಹರೀಶ್, ಪ್ರಮೋದ್, ಪುಟ್ಟರಾಜು, ಕೃಷ್ಣಕಾಂತ್, ಶ್ರೀನಿವಾಸ್, ಉಮಾ ಗಣೇಶ್, ಎಚ್.ಬಿ.ನಾಗವೇಣಿ, ಚೈತ್ರ, ಜೈ ಮಾರುತಿ ಯುವಕರ ಸಂಘದ ಅಧ್ಯಕ್ಷ ಹಾಗೂ ಸದಸ್ಯರು ಇತರರು ಓಕಳಿಯಲ್ಲಿ ಮಿಂದೆದ್ದು, ಸಂಭ್ರಮಿಸಿದರು.