ಒಕ್ಕಲಿಗ ಸಮಾಜಕ್ಕೆ ಕೊಡುಗೆ ಅಪಾರ: ಟಿ.ಡಿ. ರಾಜೇಗೌಡ

KannadaprabhaNewsNetwork |  
Published : Sep 04, 2025, 01:00 AM IST
ಕೊಪ್ಪ ತಾಲ್ಲೂಕು ಒಕ್ಕಲಿಗರ ಸಂಘದ ವಾರ್ಷಿಕ ಮಹಾಸಭೆಯು ಕೊಪ್ಪ ಪಟ್ಟಣದ ಹೊರವಲಯದ ಬಾಳಗಡಿಯ ಎಂ.ಎಸ್. ದ್ಯಾವೇಗೌಡ ಸ್ಮಾರಕ ಒಕ್ಕಲಿಗರ ಸಮುದಾಯ ಭವನದಲ್ಲಿ  ಸಂಘದ ಅಧ್ಯಕ್ಷ ಸಹದೇವ ಬಾಲಕೃಷ್ಣರವರ ಅಧ್ಯಕ್ಷತೆಯಲ್ಲಿ ನಡೆಯಿತು.  | Kannada Prabha

ಸಾರಾಂಶ

ಕೊಪ್ಪ, ನಮ್ಮ ಸಮುದಾಯ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ ಎಂದು ಶಾಸಕ ಟಿ.ಡಿ. ರಾಜೇಗೌಡ ತಿಳಿಸಿದರು.ತಾಲೂಕು ಒಕ್ಕಲಿಗರ ಸಂಘದ ವಾರ್ಷಿಕ ಮಹಾಸಭೆ ಕೊಪ್ಪ ಪಟ್ಟಣದ ಹೊರವಲಯದ ಬಾಳಗಡಿಯ ಎಂ.ಎಸ್. ದ್ಯಾವೇಗೌಡ ಸ್ಮಾರಕ ಒಕ್ಕಲಿಗರ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷ ಸಹದೇವ ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ, ಕೊಪ್ಪ

ನಮ್ಮ ಸಮುದಾಯ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ ಎಂದು ಶಾಸಕ ಟಿ.ಡಿ. ರಾಜೇಗೌಡ ತಿಳಿಸಿದರು.

ತಾಲೂಕು ಒಕ್ಕಲಿಗರ ಸಂಘದ ವಾರ್ಷಿಕ ಮಹಾಸಭೆ ಕೊಪ್ಪ ಪಟ್ಟಣದ ಹೊರವಲಯದ ಬಾಳಗಡಿಯ ಎಂ.ಎಸ್. ದ್ಯಾವೇಗೌಡ ಸ್ಮಾರಕ ಒಕ್ಕಲಿಗರ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷ ಸಹದೇವ ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಒಕ್ಕಲಿಗರ ಸಂಘಕ್ಕೆ ೭೦ ಲಕ್ಷ ಅನುದಾನ ಕೊಡಿಸಿದ್ದೇನೆ. ಸಂಘದಿಂದ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾ ಪ್ರೋತ್ಸಾಹ ಧನಕ್ಕೆ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.

ಉಪಕುಲಪತಿ ಡಾ. ಬಿ.ಸಿ. ಭಗವಾನ್ ಸನ್ಮಾನ ಸ್ವೀಕರಿಸಿ ಮಾತನಾಡಿ ಉತ್ತರ ಕರ್ನಾಟಕದ ಶೇ. ೯೦ರಷ್ಟು ಚುನಾಯಿತ ಪ್ರತಿನಿಧಿಗಳು ವಿದ್ಯಾ ಸಂಸ್ಥೆ ಆರಂಭಿಸಿದ್ದಾರೆ. ಸಮುದಾಯ ಮಲೆನಾಡು ಭಾಗದಲ್ಲಿಯೂ ವಿದ್ಯಾಸಂಸ್ಥೆ ಆರಂಭಿಸಲು ಮುಂದಾಗಬೇಕು. ಒಕ್ಕಲಿಗರ ಸಂಘ ನೀಡುವ ವಿದ್ಯಾ ಪ್ರೋತ್ಸಾಹ-ಧನಕ್ಕೆ ನನ್ನ ತಾಯಿ ಹೆಸರಿನಲ್ಲಿ ದತ್ತಿ ನೀಡಲು ಇಚ್ಚಿಸಿದ್ದೇನೆ ಎಂದರು.

ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಸಹಸಂಸ್ಥಾಪಕ ಅಶ್ವಥ್ ಎಸ್.ಎಲ್. ಸನ್ಮಾನ ಸ್ವೀಕರಿಸಿ ಮಾತನಾಡಿ ನನ್ನ ಈ ಸಾಧನೆಗೆ ಮಲೆನಾಡಿನ ಪರಿಸರ, ಜನರ ಪ್ರೇರಣೆ ಕಾರಣ. ಮುಂದೆ ಈ ಭಾಗದಲ್ಲಿ ಒಳ್ಳೆಯ ಶಾಲೆ ಕಟ್ಟುವ ಮನಸು ಇದೆ. ನಾವು ದೇವರಿಗೆ ಸಲ್ಲಿಸುವ ಸೇವೆ ದೇವರನ್ನು ತಲುಪುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ, ಅಶಕ್ತರಿಗೆ ಮಾಡುವ ಸೇವೆ ಕಣ ಕಣವು ದೇವರಿಗೆ ಸೇರುತ್ತದೆ. ಆರೋಗ್ಯ, ಶಿಕ್ಷಣ ಸೇವೆಯಲ್ಲಿ ಸಮುದಾಯ ತೊಡಗಬೇಕು. ಎಲ್ಲರೊಳಗೊಂದಾಗಿ ಬದುಕ ಬೇಕು ಎಂದರು.

ರಾಜೀವ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ವಿವಿ ಉಪಕುಲಪತಿ ಡಾ.ಬಿ.ಸಿ. ಭಗವಾನ್ ದಂಪತಿ, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ಅಶ್ವಥ್ ಎಸ್.ಎಲ್. ಹಾಲ್ಮುತ್ತೂರಿನ ಕೃಷಿಕ ಅನುದೀಪ್ ಗರಡಿಮನೆ, ಕೊಪ್ಪದ ಹಿರಿಯ ಲೆಕ್ಕಪರಿಶೋಧಕ ಬಿ.ಎಸ್. ಶ್ರೀನಿವಾಸ್ ರಾವ್ ಮತ್ತು ಎಂ.ಟೆಕ್‌ನಲ್ಲಿ ಸ್ವರ್ಣ ಪದಕ ವಿಜೇತ ಐಸಿರಿ ಕೆ.ಎಸ್. ಕೌಳಿ ಅವರನ್ನು ಗೌರವಿಸಲಾಯಿತು.

ಉಪಾಧ್ಯಕ್ಷ ಯು.ಎಸ್. ಶಿವಪ್ಪ, ತಾಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ಎಚ್.ಜಿ. ವೆಂಕಟೇಶ್, ಖಜಾಂಚಿ ಎಲ್.ಎಂ. ಪ್ರಕಾಶ್ ಕೌರಿ, ಗೌರವ ಕಾರ್ಯದರ್ಶಿ ವಿ.ಡಿ. ನಾಗರಾಜ್ ಮುಂತಾದವರು ಮಾತನಾಡಿದರು. ಜಿಲ್ಲಾ ನಿರ್ದೇಶಕ ಪೃಥ್ವಿರಾಜ್ ಕೌರಿ, ತಾಲೂಕು ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶ್ರೀನಿಧಿ ಕಾರ್ಯಕ್ರಮದಲ್ಲಿದ್ದರು.

PREV

Recommended Stories

ಕೇಂದ್ರದಂತೆ ರಾಜ್ಯ ಸರ್ಕಾರ ಮಾದರಿ ಹೆಜ್ಜೆ ಇರಿಸುವುದೇ?
ಜಿಎಸ್ಟಿ ಕಡಿತದ ಲಾಭ ಜನರಿಗೆ ಸಿಗುವಂತಾಗಲಿ: ಸಿಎಂ ಆಶಯ