ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಕಳೆದ 7ವರ್ಷಗಳ ಹಿಂದೆ ರಸ್ತೆಅಗಲೀಕರಣ ಸಂದರ್ಭದಲ್ಲಿ ರಸ್ತೆ ಬದಿ ಇದ್ದ ಮನೆಗಳನ್ನು ಕೆಡವಿ ರಸ್ತೆ ನಿರ್ಮಿಸಲಾಯಿತು, ಆದರೆ ಸರ್ಕಾರ ಈವರೆಗೂ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುವ ವಿಚಾರದಲ್ಲಿ ಏರ್ಪಟ್ಟ ಸಂಘರ್ಷ ನ್ಯಾಯಾಲಯಕ್ಕೆ ಹೋದ ಪರಿಣಾಮ ಇಲ್ಲಿರಯವರೆಗೂ ಪರಿಹಾರ ದೊರೆತಿಲ್ಲ, ಇದರಿಂದ ಬೇಸತ್ತ ಗ್ರಾಮಸ್ಥರು ರಸ್ತೆಗೆ ತಡೆಯೊಡ್ಡಿದ್ದಾರೆ.
ಸರ್ಕಾರ ಪರಿಹಾರದ ಹಣಬಿಡುಗಡೆ ಮಾಡುವವರೆವಿಗೂ ಗ್ರಾಮದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿ-೯, ರಸ್ತೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡುವುದಿಲ್ಲ ಎಂದು ಪಟ್ಟುಹಿಡಿದು, ರಸ್ತೆಯಲ್ಲಿಯೇ ಒಕ್ಕಣೆ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಎರಡು ಕಡೆ ಎದುರು ಬದುರು ಸಾಗುವ ವಾಹನಗಳು, ಒಂದೇ ಸಮಯದಲ್ಲಿ ಸಾಗಬೇಕಾಗಿರುವುದರಿಂದ ಅನೇಕ ಬಾರಿ ಅಪಘಾತಗಳು ಸಂಭವಿಸಿವೆ.ಅಧಿವೇಶನದಲ್ಲೂ ಪ್ರಸ್ತಾಪ
ಈ ಬಗ್ಗೆ ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡರು ಈ ಹಿಂದೆ ನಡೆದ ಅಧಿವೇಶನದಲ್ಲಿ ಈ ವಿಚಾರವನ್ನು ಪ್ರಸ್ತಾಸಿಪಿಸಿದ್ದರು. ಆದರೆ ಸರ್ಕಾರ ಈವರೆಗೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಹೆದ್ದಾರಿ ವಾಹನ ಸವಾರರಿಗೆ ಈ ಭಾಗದ ರಸ್ತೆ ಮೃತ್ಯುಕೂಪವಾಗಿ ಪರಿಣಮಿಸಿದೆ ಎಂದು ವಾಹನ ಸವಾರರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಹುಲ್ಲಿನ ದೂಳು ಕಣ್ಣಿಗೆ ಅಪಾಯ
ಒಕ್ಕಣೆ ಮಾಡುವ ರೈತರು ಮೆಕ್ಕೆಜೋಳ, ತೊಗರಿ, ರಾಗಿ, ಹಾಗು ಹುರುಳಿಯಂಥ ಬೆಳೆಗಳನ್ನು ರಸ್ತೆಯಲ್ಲಿ ಎತ್ತರವಾಗಿ ಹಾಕುತ್ತಾರೆ. ಒಕ್ಕಣೆಯಿಂದ ಏಳುವ ದೂಳು ಕಣ್ಣಿಗೆ ಬೀಳುತ್ತದೆ. ದೂಳಿನಿಂದಾಗ ಮುಂದಿನ ಹಾದಿಯೂ ಸರಿಯಾಗಿ ಕಾಣುವುದಿಲ್ಲ. ಅಂತಹ ಸಂದರ್ಭದಲ್ಲಿ ವಾಹನ ಸವಾರರ ಗೋಳಿ ಏಳುವುದೇ ಬೇಡ ದ್ವಿಚಕ್ರವಾಹನಗಳಂತೂ ಮುಂದೆ ಸಾಗುವುದೇ ಕಷ್ಟದ ಪರಿಸ್ಥಿತಿಯಾಗಿದೆ.ಹೆದ್ದಾರಿ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಮುಗಿಸಿ, ಟೋಲ್ ವಸೂಲಿ ಮಾಡಬೇಕಾದ ಸಂಸ್ಥೆ ಮಾತ್ರ, ಇದ್ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಟೋಲ್ ವಸೂಲಿ ಮಾಡುತ್ತಿದೆ. ಇದರ ಬಗ್ಗೆ ಗಮನ ಹರಿಸಬೇಕಾದ ಅಧಿಕಾರಿಗಳು ಮಾತ್ರ ಮೌನವಾಗಿದ್ದರೆ ಎಂದು ಪ್ರಜಾ ಸಂಘರ್ಷ ಸಮಿತಿ ಜಿಲ್ಲಾಸಂಚಾಲಕ ಆರ್.ಎನ್.ರಾಜು ಟೀಕಿಸಿದ್ದಾರೆ.ಕೋಟ್ಸ್.......................
ಚಿಕ್ಕ ಕುರುಗೋಡು ಗ್ರಾಮದಲ್ಲಿ ಹಾದು ಹೋಗುವ ರಸ್ತೆಗೆ ಸಂಬಂಧಪಟ್ಟಂತೆ ಅಲ್ಲಿನ ಫಲಾನುಭವಿಗಳಿಗೆ ಪರಿಹಾರ ನೀಡಲು ಕೆಲವು ಕಾನೂನುಬದ್ಧ ತೊಡಕುಗಳಿರುವುದರಿಂದ, ಸಮಸ್ಯೆ ಬಗೆಹರಿದಿಲ್ಲ, ಶೀಘ್ರದಲ್ಲಿ ಬಗ್ಗೆ ಹರಿಯುವ ನಿರೀಕ್ಷೆ ಇದೆ.ರವಿಬಾಬು, ರಾಜ್ಯ ಹೆದ್ದಾರಿ ಯೋಜನಾ ವ್ಯವಸ್ಥಾಪಕ.