ಹಿರಿಯ ನಾಗರಿಕರ ಜೀವನ ಸುಧಾರಣೆಗೆ ವೃದ್ಧಾಪ್ಯ ಯೋಜನೆ ಸಹಕಾರಿ: ರವೀಂದ್ರ

KannadaprabhaNewsNetwork |  
Published : Dec 18, 2025, 12:00 AM IST
ಚಿಕ್ಕಮಗಳೂರು  ನಗರದ ರಾಂಪುರ ಸಮೀಪದ ಜೀವನ್ ಸಂಧ್ಯಾ ವೃದ್ದಾಶ್ರಮದಲ್ಲಿ ಆಯೋಜಿಸಿದ್ಧ ಕಾನೂನು ಅರಿವು ಕಾರ್ಯಕ್ರಮದಲ್ಲಿ ಸಹಾಯಕ ಕಾನೂನು ಅಭೀರಕ್ಷಕ ರವೀಂದ್ರ ಮಾತನಾಡಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು ವಯಸ್ಸಾದಂತೆ ದುಡಿಯುವ ಶಕ್ತಿ ಮನುಷ್ಯನಿಗೆ ಕುಂದಲಿದೆ. ಇತರರ ಮೇಲೆ ಅವಲಂಬನೆ ಹೆಚ್ಚುತ್ತದೆ. ಹೀಗಾಗಿ ಸರ್ಕಾರ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆರ್ಥಿಕ ಭದ್ರತೆಗೆ ರಾಷ್ಟ್ರೀಯ ವೃದ್ದಾಪ್ಯ ವೇತನ ಯೋಜನೆ ಜಾರಿಗೊಳಿಸಿದೆ ಎಂದು ಸಹಾಯಕ ಕಾನೂನು ಅಭಿರಕ್ಷಕ ರವೀಂದ್ರ ಹೇಳಿದರು.

ಚಿಕ್ಕಮಗಳೂರು ವಕೀಲರ ಸಂಘ ಆಯೋಜಿಸಿದ್ಧ ಕಾನೂನು ಅರಿವು ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಯಸ್ಸಾದಂತೆ ದುಡಿಯುವ ಶಕ್ತಿ ಮನುಷ್ಯನಿಗೆ ಕುಂದಲಿದೆ. ಇತರರ ಮೇಲೆ ಅವಲಂಬನೆ ಹೆಚ್ಚುತ್ತದೆ. ಹೀಗಾಗಿ ಸರ್ಕಾರ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆರ್ಥಿಕ ಭದ್ರತೆಗೆ ರಾಷ್ಟ್ರೀಯ ವೃದ್ದಾಪ್ಯ ವೇತನ ಯೋಜನೆ ಜಾರಿಗೊಳಿಸಿದೆ ಎಂದು ಸಹಾಯಕ ಕಾನೂನು ಅಭಿರಕ್ಷಕ ರವೀಂದ್ರ ಹೇಳಿದರು.ನಗರದ ರಾಂಪುರ ಸಮೀಪದ ಜೀವನ್ ಸಂಧ್ಯಾ ವೃದ್ಧಾಶ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಚಿಕ್ಕಮಗಳೂರು ವಕೀಲರ ಸಂಘ ಮಂಗಳವಾರ ಆಯೋಜಿಸಿದ್ಧ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ ಬಡತನ ರೇಖೆಗಿಂತ ಕೆಳಗಿರುವ ವೃದ್ಧ ನಾಗರಿಕರಿಗೆ ಆರ್ಥಿಕ ನೆರವು ನೀಡಲು ಭಾರತ ಸರ್ಕಾರ ಪ್ರಾರಂಭಿಸಿದ ಸಾಮಾಜಿಕ ಕಲ್ಯಾಣ ಕಾರ್ಯಕ್ರಮವಾಗಿದೆ. ರಾಜ್ಯ ಸರ್ಕಾರಗಳು ಕೂಡ ಬಹುಪಾಲು ಕೊಡುಗೆ ನೀಡುತ್ತಿವೆ ಎಂದು ತಿಳಿಸಿದರು.

ಹಿರಿಯ ನಾಗರಿಕರ ಮೂಲಭೂತ ಅಗತ್ಯಗಳನ್ನು ಪೂರೈಸಲು ನಿಯಮಿತ ಪಿಂಚಣಿ ಒದಗಿಸುವ ಮೂಲಕ ಅವರ ಜೀವನ ಮಟ್ಟವನ್ನು ಸುಧಾರಿಸುವುದು ಈ ಯೋಜನೆ ಗುರಿಯಾಗಿದೆ. ಈ ಯೋಜನೆಯಡಿ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು ₹600 ಹಾಗೂ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ₹1200 ನೀಡಲಾಗುವುದು ಎಂದರು. ಸಹಾಯಕ ಕಾನೂನು ಅಭಿರಕ್ಷಕ ರಜತ್ ಅವರು, ಕಾನೂನು ಸೇವಾ ಪ್ರಾಧಿಕಾರದ ಸವಲತ್ತು ಕುರಿತು ಮಾತನಾಡಿ, ಬಡವರು ಅಥವಾ ಅನ್ಯಾಯಕ್ಕೆ ಒಳಗಾದವರು ನ್ಯಾಯಾಲಯದಲ್ಲಿ ಪ್ರಕರಣ ಎದುರಿಸಲಾಗದಿರುವವರಿಗೆ ಉಚಿತವಾಗಿ ವಕೀಲರ ನೇಮಿಸುವ ಮೂಲಕ ಪ್ರಕರಣ ಇತ್ಯರ್ಥಗೊಳ್ಳುವವರೆಗೆ ಆ ವ್ಯಕ್ತಿಗೆ ಸೌಲಭ್ಯ ಕಲ್ಪಿಸಿಕೊಡಲಿದೆ ಎಂದು ತಿಳಿಸಿದರು.ಉಪ ಪ್ರಧಾನ ಕಾನೂನು ಅಭಿರಕ್ಷಕ ಹಾಗೂ ವಕೀಲರ ಸಂಘದ ಖಜಾಂಚಿ ಡಿ.ಬಿ.ದೀಪಕ್ ಮಾತನಾಡಿ, ಸಾರ್ವಜನಿಕರ ಸಂಕಷ್ಟ, ಸಮಸ್ಯೆ ಹಾಗೂ ಶೋಷಣೆಗೆ ಒಳಗಾದವರಿಗೆ ನ್ಯಾಯಾಲಯ ಸಂಪೂರ್ಣವಾಗಿ ಸಹಕರಿಸಲಿದೆ. ಜೊತೆಗೆ ಕಾನೂನಿ ನ್ವಯ ದೊರೆಯುವ ಸವಲತ್ತು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ವಕೀಲ ಸಿ.ಸತೀಶ್ ವಹಿಸಿದ್ದರು. ಈ ವೇಳೆ ಜೀವನ್ ಸಂಧ್ಯಾ ವೃದ್ಧಾಶ್ರಮದ ಮುಖ್ಯಸ್ಥ ಹರಿಸಿಂಗ್ ಹಾಗೂ ವೃದ್ಧರು ಉಪಸ್ಥಿತರಿದ್ದರು. 17 ಕೆಸಿಕೆಎಂ 3ಚಿಕ್ಕಮಗಳೂರು ನಗರದ ರಾಂಪುರ ಸಮೀಪದ ಜೀವನ್ ಸಂಧ್ಯಾ ವೃದ್ಧಾಶ್ರಮದಲ್ಲಿ ಆಯೋಜಿಸಿದ್ಧ ಕಾನೂನು ಅರಿವು ಕಾರ್ಯಕ್ರಮದಲ್ಲಿ ಸಹಾಯಕ ಕಾನೂನು ಅಭಿರಕ್ಷಕ ರವೀಂದ್ರ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೇತುವೆ ಕಾಮಗಾರಿ ನನೆಗುದಿಗೆ ತಂತ್ರಜ್ಞಾನಕ್ಕೇ ಅವಮಾನ
ಕಬ್ಬಿನ ಟ್ಯಾಕ್ಟರ್‌ಗೆ ಸಿಲುಕಿ ಇಬ್ಬರು ಮಹಿಳೆಯರ ಸಾವು