ದೊಡ್ಡಬಳ್ಳಾಪುರ: ತಾಲೂಕು ಕಚೇರಿ ಸಭಾಂಗಣದಲ್ಲಿ ಸಂತ ಕವಿ ಸರ್ವಜ್ಞ ಜಯಂತಿ ಆಚರಿಸಲಾಯಿತು.
ನಿವೃತ್ತ ಶಿಕ್ಷಕ ಬಿ.ಈಶ್ವರಯ್ಯ ಮಾತನಾಡಿ, 16ನೇ ಶತಮಾನದಲ್ಲಿ ಕರ್ನಾಟಕ ಕಂಡ ಒಬ್ಬ ಶ್ರೇಷ್ಠ ದಾರ್ಶನಿಕ ಕವಿ ಸರ್ವಜ್ಞ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡುತ್ತಿರುವುದು ಅರ್ಥಪೂರ್ಣವಾಗಿದೆ. ಜನರ ಆಡು ಭಾಷೆಯಲ್ಲಿ ತ್ರಿಪದಿಗಳನ್ನು ರಚಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಸಮಾಜ ಸುಧಾರಕ ಸರ್ವಜ್ಞ ಎಂದು ಅಭಿಪ್ರಾಯಪಟ್ಟರು.
ನಮ್ಮಲ್ಲಿ ಪ್ರತಿಭೆ ಇದ್ದರೆ ಅದನ್ನು ತಡೆಯಲು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಹಿಂದುಳಿದವರು ಎಂದು ಹತಾಶರಾಗದೆ ಸಂವಿಧಾನ ಬದ್ಧವಾಗಿರುವ ಅವಕಾಶಗಳನ್ನು ಬಳಸಿಕೊಂಡು ಉನ್ನತ ಸ್ಥಾನ ಪಡೆಯಲು ಎಲ್ಲರೂ ಪ್ರಯತ್ನಿಸಬೇಕು ಎಂದರು.ಕುಂಬಾರರ ಸಮುದಾಯಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಲಾಯಿತು.
ಗ್ರೇಡ್ -2 ತಹಸೀಲ್ದಾರ್ ಪ್ರಕಾಶ್, ಕುಂಬಾರ ಸಮುದಾಯದ ಮುಖಂಡರಾದ ವೆಂಕಟಾಚಲಯ್ಯ, ವಿರೂಪಾಕ್ಷ, ಜಯರಾಮಯ್ಯ, ಕವಿ ಸರ್ವಜ್ಞ ಕುಂಬಾರ ಸಂಘದ ತಾಲೂಕು ಅಧ್ಯಕ್ಷ ಕೆ.ಸುರೇಶ್, ಗೌರವಾಧ್ಯಕ್ಷ ಸಂಜೀವಪ್ಪ, ಉಪಾಧ್ಯಕ್ಷ ಡಿ.ಎಂ.ಹರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಸ್. ನಟರಾಜ್, ಸಹ ಕಾರ್ಯದರ್ಶಿ ಪಿ.ವೈ. ವೀಣಾ, ಖಜಾಂಚಿ ಎಚ್.ಸಿ.ಅಮರ ನಾರಾಯಣ, ನಿರ್ದೇಶಕರಾದ ಎಸ್. ಸುಂದ್ರ, ಎನ್ .ಗುಂಡಪ್ಪ, ಸಿ.ಪ್ರದೀಪ್, ವಿ.ಹರ್ಷ, ಜಿ.ಸುಬ್ರಮಣ್ಯ ಇದ್ದರು.(ಸಿಂಗಲ್ ಕಾಲಂ ಫೋಟೋ ಸಾಕು)