29ರಂದು ಕೊಮಾರನಹಳ್ಳಿ ಕೆರೆಯಲ್ಲಿ ತೆಪ್ಪೋತ್ಸವ, ದೀಪೋತ್ಸವ: ಸಭೆ ನಿರ್ಧಾರ

KannadaprabhaNewsNetwork |  
Published : Nov 04, 2024, 12:24 AM IST
ತೆಪ್ಪೋತ್ಸವ ಆಚರಿಸಲು ಸಭೆ ಸೇರಿದ ಭಕ್ತರು, ಗ್ರಾಮಸ್ಥರು | Kannada Prabha

ಸಾರಾಂಶ

ಭದ್ರಾನದಿ ಮತ್ತು ಮಳೆನೀರು ಹರಿದುಬಂದ ಪರಿಣಾಮ ಸಂಪೂರ್ಣ ಭರ್ತಿ ಆಗಿರುವ ಸಮೀಪದ ಲಕ್ಷ್ಮೀ ರಂಗನಾಥಸ್ವಾಮಿ ಕೊಮಾರನಹಳ್ಳಿ ಕೆರೆಯಲ್ಲಿ ನ.೨೯ರಂದು ತೆಪ್ಪೋತ್ಸವ ಮತ್ತು ದೀಪೋತ್ಸವ ಆಚರಿಸಲು ಸುತ್ತಲ ಹಲವು ಗ್ರಾಮಗಳ ಭಕ್ತರ ಸಮ್ಮುಖ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

- ₹೨೦ ಲಕ್ಷ ಅಂದಾಜು ವೆಚ್ಚ: ಸುರೇಶ ಶಾಸ್ತ್ರಿ ಹೇಳಿಕೆ - - - ಮಲೇಬೆನ್ನೂರು: ಭದ್ರಾನದಿ ಮತ್ತು ಮಳೆನೀರು ಹರಿದುಬಂದ ಪರಿಣಾಮ ಸಂಪೂರ್ಣ ಭರ್ತಿ ಆಗಿರುವ ಸಮೀಪದ ಲಕ್ಷ್ಮೀ ರಂಗನಾಥಸ್ವಾಮಿ ಕೊಮಾರನಹಳ್ಳಿ ಕೆರೆಯಲ್ಲಿ ನ.೨೯ರಂದು ತೆಪ್ಪೋತ್ಸವ ಮತ್ತು ದೀಪೋತ್ಸವ ಆಚರಿಸಲು ಸುತ್ತಲ ಹಲವು ಗ್ರಾಮಗಳ ಭಕ್ತರ ಸಮ್ಮುಖ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಪೂರ್ವಭಾವಿ ಸಭೆಯಲ್ಲಿ ಮುಖಂಡ ಸುರೇಶ್‌ ಶಾಸ್ತ್ರಿ ಮಾತನಾಡಿ, ತೆಪ್ಪೋತ್ಸವ-ದೀಪೋತ್ಸವ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಸುತ್ತಲ ಆರೇಳು ಗ್ರಾಮಗಳ ದೇವರುಗಳನ್ನು ಕರೆತರುವುದು, ಕಾರ್ತಿಕ ತೆಪ್ಪೋತ್ಸವ, ದೀಪೋತ್ಸವ ವಿಧಿವಿಧಾನಗಳು ಮತ್ತು ವಿವಿಧ ವಸ್ತುಗಳ ದರ ಏರಿಕೆ ಹಿನ್ನೆಲೆ ಕಾರ್ಯಕ್ರಮಕ್ಕೆ ₹೧೬ರಿಂದ ₹೨೦ ಲಕ್ಷ ಅಂದಾಜು ಖರ್ಚು ತಗುಲಬಹುದು ಎಂದು ತಿಳಿಸಿದರು.

ತೆಪ್ಪೋತ್ಸವಕ್ಕೆ ೨೦ ಸಾವಿರ ಭಕ್ತರು ಸೇರುವ ನಿರೀಕ್ಷೆ ಇದೆ. ವಿದ್ಯುತ್ ದೀಪಾಲಂಕಾರ, ಅಲ್ಲಲ್ಲಿ ಫ್ಲೆಕ್ಸ್‌ಗಳನ್ನು ಹಾಕುವುದು, ದವಸ ಧಾನ್ಯಗಳ ನೆರವು, ಅನ್ನ ಸಂತರ್ಪಣೆ ಆಯೋಜನೆ ಬಗ್ಗೆಯೂ ಚರ್ಚಿಸಲಾಯಿತು. ಅನೇಕರು ದಾಸೋಹಕ್ಕೆ ಧಾನ್ಯಗಳ ನೆರವು ನೀಡುವ ಭರವಸೆಯಿತ್ತರು.

ಸಭೆಯಲ್ಲಿ ಐರಣಿ ಮಹೇಶ್ವರಪ್ಪ, ಅಣ್ಣಪ್ಪ, ಎಸ್.ಜಿ. ಪರಮೇಶ್ವರಪ್ಪ, ಹನಗವಾಡಿ ವೀರೇಶ್, ಮುದೇಗೌಡರ ತಿಪ್ಪೇಶ್, ಸಿದ್ದೇಶ್, ರಾಜು, ಎಂ.ಬಸವರಾಜ್, ಲೋಕೇಶ್, ರಂಗನಾಥ್, ಪರಮೆಶ್ವರಪ್ಪ, ಮೂರ್ತಿ, ರಾಮಣ್ಣ, ಬಸಪ್ಪ, ಚಿಕ್ಕಣ್ಣ, ಹನುಮಗೌಡ, ಸುನೀಲ್, ಚಂದ್ರಪ್ಪ, ಬಸವರಾಜ್, ಗಿರಳ್ಳಿ ರಾಜಪ್ಪ, ಅರುಣ್, ನಾಗಪ್ಪ, ಜಗದೀಶ್ ನಾಯ್ಕ್, ಶ್ರೀನಿವಾಸ್ ಹಾಗೂ ಹರಳಹಳ್ಳಿ, ಹಾಲಿವಾಣ, ಕೊಪ್ಪ, ತಿಮ್ಲಾಪುರ, ಕುಂಬಳೂರು, ಕೊಮಾರನಹಳ್ಳಿ, ಮಲೇಬೆನ್ನೂರು ಗ್ರಾಮಗಳ ಭಕ್ತರು ಭಾಗವಹಿಸಿದ್ದರು.

- - - -೩ಎಂಬಿಆರ್೧: ತೆಪ್ಪೋತ್ಸವ ಸಿದ್ಧತಾ ಸಭೆ ವಿವಿಧ ಗ್ರಾಮಗಳ ಮುಖಂಡರು ಪಾಲ್ಗೊಂಡರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ