ಕನ್ನಡಪ್ರಭ ವಾರ್ತೆ ರಾಮನಗರ
ತಾಲೂಕಿನ ಬೆಜ್ಜರಹಳ್ಳಿ ಹಾಗೂ ಹಾಗಲಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಯಾವುದೇ ಗುಂಪಿಲ್ಲ, ಬದಲಾವಣೆ ಅಂತೂ ಕೇಳಿದ್ದೇವೆ ಎಂದರು.
ಶಾಸಕ ಬಾಲಕೃಷ್ಣರವರು ಹುಟ್ಟುಹಬ್ಬ ಆಚರಣೆ ಮಾಡಲು ಶಾಸಕರೆಲ್ಲರೂ ಒಂದೆಡೆ ಸೇರಿದ್ದರು. ಹುಟ್ಟುಹಬ್ಬದಲ್ಲಿ ನಾಟಿ ಕೋಳಿ ಮಾಡಿದ್ದರು. ನಾನು ರಂಜಾನ್ ಹಬ್ಬದ ಕಿಟ್ ವಿತರಣೆ ಮಾಡುತ್ತಿದ್ದ ಕಾರಣ ಹೋಗಲು ಆಗಲಿಲ್ಲ.ಅದಕ್ಕೆ ಆ ಬಣ , ಈ ಬಣ ಅಂತ ಹೇಳುವುದು ಸರಿಯಲ್ಲ ಎಂದು ಹೇಳಿದರು.
ಗ್ಯಾರಂಟಿ ಮೂಲಕ ಜನರನ್ನು ತಲುಪಿದೆ. ಮುಂದಿನ ಸಂಘಟನೆಗೆ ಶಕ್ತಿ ಬೇಕಿದ್ದು, ಅದಕ್ಕೆ ಡಿ.ಕೆ.ಶಿವಕುಮಾರ್ ನಾಯಕತ್ವ ಬೇಕಾಗಿದೆ ಎಂದು ತಿಳಿಸಿದರು.
ನೂತನ ಶಾಸಕರಿಗೆ ಸಚಿವ ಸ್ಥಾನ ಕೊಡಲ್ಲ ಎಂಬ ಮುಖ್ಯಮಂತ್ರಿ ಹೇಳಿಕೆಗೆ, ಅದು ಮುಖ್ಯಮಂತ್ರಿಗಳ ವೈಯಕ್ತಿಕ ವಿಚಾರ. ಅವರು ಎಲ್ಲರಿಗೂ ಮುಖ್ಯಮಂತ್ರಿ, ಹೇಳಬೇಕು ಹೇಳಿದ್ದಾರೆ. ಆದರೆ, ಜನರ ಅಭಿಪ್ರಾಯ, ಶಾಸಕರ ಅಭಿಪ್ರಾಯವನ್ನೂ ಅವರು ಕೇಳಬೇಕು. ಶಾಸಕರ ಅಭಿಪ್ರಾಯಕ್ಕೂ ಬೆಲೆ, ಕಿಮ್ಮತ್ತು ಇದೆ ಅಲ್ವಾ ಎಂದು ಹೇಳಿದರು.
ಆ ದಿನಾಂಕದ ಒಳಗೆ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ. ಆ ದಿನಾಂಕದ ಒಳಗಡೆ ಆಗಲಿಲ್ಲ ಅಂದರೆ ನಮಗೆ ರಾಜಕಾರಣವೇ ಬೇಡ ಎಂದು ಇಕ್ಬಾಲ್ ಹುಸೇನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶಾಸಕ ಇಕ್ಬಾಲ್ ಹುಸೇನ್