
ಶ್ರೀ ಬಸವ ತತ್ವ ಪೀಠದ ಸುವರ್ಣ ಮಹೋತ್ಸವ
ವೀರಶೈವ ಲಿಂಗಾಯತ ಸಮಾಜ ಒಗ್ಗಟ್ಟಾದಾಗ ನಾಡು, ಸಮಾಜ ಅಭಿವೃದ್ಧಿ ಸಾಧ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದ ಹೊರವಲಯದ ಶ್ರೀ ಬಸವ ತತ್ವ ಪೀಠದ ಸುವರ್ಣ ಮಹೋತ್ಸವದಲ್ಲಿ ಶನಿವಾರ ಮಾತನಾಡಿದ ಅವರು, ಒಳಪಂಗಡಗಳ ಮೂಲಕ ವೀರಶೈವ ಲಿಂಗಾಯತ ಸಮಾಜದವನ್ನು ವ್ಯವಸ್ಥಿತವಾಗಿ ಕಲುಷಿತಗೊಳಿಸಲಾಗುತ್ತಿದೆ. ಇದನ್ನು ಸಮಾಜದ ಮುಖಂಡರು ಅರ್ಥ ಮಾಡಿಕೊಳ್ಳಬೇಕಿದೆ. ಬಸವಣ್ಣನವರ ಆಶಯದಂತೆ ಎಲ್ಲ ಸಮಾಜವನ್ನು ಒಟ್ಟಿಗೆ ತೆಗೆದು ಕೊಂಡು ಹೋಗುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.ಇಂದಿನ ಯುವಕರು ಸಂಸ್ಕೃತಿ, ಪರಂಪರೆ ಅರ್ಥ ಮಾಡಿಕೊಳ್ಳುತ್ತಿಲ್ಲ. ಆ ಗೋಜಿಗೆ ಹೋಗುತ್ತಿಲ್ಲ. ಇಂತಹ ಧರ್ಮ ಸಭೆಗಳಲ್ಲಿ ಯುವಕರು ಹೆಚ್ಚು ಪಾಲ್ಗೊಂಡಾಗ ಸಾರ್ಥಕವಾಗಲಿದೆ ಎಂದು ಅಭಿಪ್ರಾಯಪಟ್ಟರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಬಸವತತ್ವ ಎನ್ನುವುದು ಸಮಾಜ ಪರಿವರ್ತನೆ ಬಸವಾದಿ ಶರಣರು ಕಂಡುಕೊಂಡ ಮಾರ್ಗವಾಗಿದೆ. ಇಂದಿನ ಸಮಾಜದ ಪರಿವರ್ತನೆ ಬಸವತತ್ವ ಬೇಕಿದೆ. ವ್ಯವಸ್ಥೆಯನ್ನು ರಾಜಕೀಯ ಅಧಿಕಾರ ದಿಂದ ಬದಲಾವಣೆ ಮಾಡಬಹುದು. ಆದರೆ, ಸಮಾಜದ ಪರಿವರ್ತನೆಯನ್ನು ಅಧಿಕಾರ ಬಲದಿಂದ ಮಾಡಲು ಸಾಧ್ಯವಿಲ್ಲ. ಸಂವಿಧಾನದ ಜಾರಿಗೆ ಬಂದರೂ ಅಸ್ಪೃಶ್ಯತೆ ನಿವಾರಣೆಯಾಗಿಲ್ಲ. ದೇವಸ್ಥಾನದ ಪ್ರವೇಶ ನಿಷೇಧವನ್ನು ಯಾವುದೇ ಧರ್ಮಗ್ರಂಥ ಸಮರ್ಥಿಸಿಲ್ಲ. ಜಾತೀಯತೆ, ಅಸ್ಪೃಶ್ಯತೆ ಯು ಸಮಾಜ ಮತ್ತು ರಾಷ್ಟ್ರವನ್ನು ದುರ್ಬಲಗೊಳಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಸಿರಿಗೆರೆ ಬೃಹನ್ಮಠದ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ, ಪುಷ್ಪ ಗಿರಿ ಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿ, ಬಸವತತ್ವ ಪೀಠದ ಅಧ್ಯಕ್ಷ ಬಸವ ಮರಳುಸಿದ್ಧ ಸ್ವಾಮೀಜಿ, ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ಕೆಪೆಕ್ ಅಧ್ಯಕ್ಷ ಬಿ.ಎಚ್. ಹರೀಶ್, ಬಿಜೆಪಿ ಮುಖಂಡ ಕಲ್ಮಡಪ್ಪ, ಸಿಡಿಎ ಅಧ್ಯಕ್ಷ ಮಂಜೇಗೌಡ, ಎಸ್ ವಿಸಿ ಸಮಾಜದ ಅಧ್ಯಕ್ಷ ನಿರಂಜನ್ ಮೊದಲಾದವರಿದ್ದರು.
ಶಾಲೆಗೆ ಜಾಗ ಮೀಸಲಿಡಿ
ಬಸವತತ್ವದ ಪೀಠ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಜಾಗ ಮೀಸಲಿಟ್ಟು ಶಾಲೆ ತೆರಬೇಕಿಂದು ಮನವಿ ಮಾಡಿದ್ದಾರೆ. ಮಠಗಳು ಅನ್ನ ಮತ್ತು ಜ್ಞಾನ ದಾಸೋಹಕ್ಕೆ ಹೆಸರುವಾಸಿಯಾಗಿವೆ. ಈ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.....
ವಚನ ಸಾಹಿತ್ಯ ಶಕ್ತಿ ತಿಳಿಸುವುದು ಬಸವತತ್ವ ಸಮಾವೇಶದ ಉದ್ದೇಶವಾಗಿದೆ. ಸರ್ಕಾರಕ್ಕೆ ಸಮಾನಾಂತರವಾಗಿ ಉಚಿತ ಶಿಕ್ಷಣ ನೀಡಿರುವುದು ವೀರಶೈವ ಲಿಂಗಾಯ ಮಠಗಳಾಗಿದೆ.